POLICE BHAVAN KALABURAGI

POLICE BHAVAN KALABURAGI

18 September 2020

KALABURAGI DISTRICT CRIME REPORTED

 ವಿದ್ಯುತ್ ಅಘಾತ ಪ್ರಕರಣ  

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 17-09-2020 ರಂದು 4:45 ಪಿ.ಎಮ್ ಕ್ಕೆ ಚಂದ್ರಕಾಂತ ತಂದೆ ನಾರಾಯಣ ಗುತ್ತೇದಾರ ಸಾ: ಗೌರ (ಬಿ) ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ. ಗೌರ (ಬಿ) ಸೀಮಾಂತರದಲ್ಲಿ ಸರ್ವೆ ನಂ 256 ರಲ್ಲಿ ನನ್ನದು ಹೊಲ ಇರುತ್ತದೆ. ಸದರಿ ನನ್ನ ಹೊಲದ ಸುತ್ತ ಮುತ್ತಲಿನ ಹೊಲದವರಾದ ಚಂದ್ರಕಾಂತ ಸೂರ್ಯವಂಶಿ, ಸಿದ್ದಪ್ಪ ಮಾಣಸುಣಗಿ, ಮಹಾಂತಗೌಡ ಪಾಟೀಲ, ಬಸವರಾಜ ದಿವಾಣಜಿ ಇವರು ನಮ್ಮ ಹೊಲದಲ್ಲಿ ಕಂಬಗಳನ್ನು ಹಾಕಿ ನಮ್ಮ ಹೊಲದ ಮೇಲಿಂದ ತಮ್ಮ ಹೊಲಗಳಲ್ಲಿದ್ದ ಟಿಸಿಗಳಿಗೆ (ವಿದ್ಯೂತ್ ಪರಿವರ್ತಕ) ವಾಯರಗಳನ್ನು ಹಾಕಿಕೊಂಡಿರುತ್ತಾರೆ. ಸದರಿ ನನ್ನ ಹೊಲದ ಮೇಲೆ ಹಾಯ್ದು ಹೋದ ಕರೆಂಟ್ ವಾಯರ್ ಸಡಿಲವಾಗಿ ಕೆಳಕ್ಕೆ ಇಳಿದಿರುತ್ತದೆ. ಈ ಬಗ್ಗೆ ನಾನು ನಮ್ಮೂರಿನ ಲೈನ್ ಮೇನ್ ಆದ ಷಣ್ಮುಕಪ್ಪಗೌಡ ತಂದೆ ಗುರಪ್ಪಗೌಡ ಪಾಟೀಲ ಇವರಿಗೆ ಮತ್ತು ಸದರಿ ಹೊಲದ ಮಾಲಿಕರಿಗೆ, ನಮ್ಮ ಹೊಲದಲ್ಲಿ ನೀವು ತಗೆದುಕೊಂಡು ಹೋಗಿದ್ದ ಕರೆಂಟ್ ವಾಯರ್ ಕೆಳಕ್ಕೆ ಇಳಿದಿದೆ, ಅದನ್ನು ಸರಿಪಡಿಸಿ, ಯಾರಿಗಾದರೂ ಕರೆಂಟ ಹತ್ತುವ ಸಂಭವ ಇದೆ ಎಂದು ಸಾಕಷ್ಟು ಬಾರಿ ಹೇಳಿರುತ್ತೇನೆ. ಹಾಗೂ ಲೈನ್ ಮೇನ್ ಆದ ಷಣ್ಮುಕಪ್ಪಗೌಡ ಇವನಿಗೆ ವಾಯರ ಸರಿ ಪಡಿಸೊ ವರೆಗೆ ಕರೆಂಟ ಹಾಕಬೇಡ ಎಂದು ಸಹ ಹೇಳಿರುತ್ತೇನೆ. ದಿನಾಂಕ 15-09-2020 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನನ್ನ ಮಗನಾದ ಸಂತೋಷ ವಯ|| 23 ವರ್ಷ ಇವನು ತನ್ನ ಗೆಳೆಯನಾದ ಅರ್ಜುನ ತಂದೆ ಶಿವಶರಣ ದುದ್ದುಣಗಿ ಈತನೊಂದಿಗೆ ನಮ್ಮ ಹೊಲಕ್ಕೆ ಹೋದಾಗ, ನನ್ನ ಹೊಲದಲ್ಲಿ ಜೋತು ಬಿದ್ದ ಕರೆಂಟ್ ವಾಯರ್ ಆಕಸ್ಮಿಕವಾಗಿ ನನ್ನ ಮಗನ ತಲೆಗೆ ತಾಗಿ, ನನ್ನ ಮಗನಿಗೆ ಕರೆಂಟ ಶಾಟ್ ಹೊಡೆದಿರುತ್ತದೆ.  ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಇಂದು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಮ್.ಎಲ್.ಸಿ ಮಾಡಿಸಿರುತ್ತೇನೆ. ಸದರಿ ಕರೆಂಟ್ ಶಾಟದಿಂದ ನನ್ನ ಮಗನು ಬಳಲಿ ಮೊದಲಿನ ಸ್ಥೀತಿಗೆ ಬರದೆ ಊನನಾಗಿರುತ್ತಾನೆ. ಕಾರಣ ಮೇಲೆ ತಿಳಿಸಿದ 1) ಷಣ್ಮುಕಪ್ಪಗೌಡ ತಂದೆ ಗುರಪ್ಪಗೌಡ ಪಾಟೀಲ ಲೈನ್ ಮೇನ್ ಸಾ|| ಗೌರ (ಬಿ) 2) ಚಂದ್ರಕಾಂತ ಸೂರ್ಯವಂಶಿ ಸಾ|| ಗೌರ (ಕೆ) 3) ಸಿದ್ದಪ್ಪ ಮಾನಸುಣಗಿ ಸಾ|| ಗೌರ (ಕೆ) 4) ಮಹಾಂತಗೌಡ ತಂದೆ ಸಂಗನಗೌಡ ಪಾಟೀಲ ಸಾ|| ಗೌರ (ಬಿ) 5) ಬಸವರಾಜ ತಂದೆ ಗಾಂದಿ ದಿವಾಣಜಿ ಸಾ|| ಗೌರ (ಬಿ) ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಳ್ಳತನ ಪ್ರಕರಣ   

ಶಹಾಬಾದ ನಗರ ಪೊಲೀಸ ಠಾಣೆ 

ದಿನಾಂಕ: 17/09/2020 ರಂದು 1-30 ಪಿ ಎಮ್ ಕ್ಕೆ ರಾಜೇಂದ್ರ ತಂದೆ ಕಮಲಾಕರ ಪಾಟೀಲ ಸಾ: ಮಾಲಗತ್ತಿ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವನೆಂದರೆ, ದಿನಾಂಕ: 16/09/2020 ರಂದು ಮದ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮೂರಿನ ಜೈನ ಮಂದಿರದಲ್ಲಿದ್ದ ಭಗವಾನರ ಮತ್ತು ತೀರ್ಥಂಕರ ದೇವರ 12 ಕಂಚಿನ ಮೂರ್ತಿಗಳು ಅ.ಕಿ 19000-00 ರೂ ನೇದ್ದವುಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ ಕಾರಣ ಸೂಕ್ತ ಕ್ರಮ ಜರುಗಿಸಿ ಪತ್ತೆ ಮಾಡಬೇಕು ಅಂತಾ ಇದ್ದ ಅರ್ಜಿ ಸಾರಾಶದ ಮೇಲಿಂದ ಠಾಣಾ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

No comments: