POLICE BHAVAN KALABURAGI

POLICE BHAVAN KALABURAGI

11 September 2020

KALABURAGI DISTRICT CRIME REPORTED

 ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮುಧೋಳ ಪೊಲೀಸ ಠಾಣೆ 

           ದಿನಾಂಕ 10-09-2020 ರಂದು ಬೆಳಗ್ಗೆ 11-35 ಗಂಟೆ ಸುಮಾರಿಗೆ ಗಾಯಾಳು ವೆಂಕಟೇಶ ಹಾಗೂ ಮೃತ ಶ್ರೀಕಾಂತ ಇಬ್ಬರು ಕೂಡಿ ತಮ್ಮ ಮೋಟರ್ ಸೈಕಲ ನಂ ಕೆಎ-32 ಇಎಮ್ 8095 ನೇದ್ದರ ಮೇಲೆ ಆಡಕಿ ಗ್ರಾಮದಿಂದ ಕೊಂತನಪಲ್ಲಿ ಗ್ರಾಮಕ್ಕೆ ಹೋಗುವಾಗ ಕೊಂತನಪಲ್ಲಿ ಕ್ರಾಸ್ ಸಮೀಪ ತಿರುವಿನಲ್ಲಿ ಹೋಗುತ್ತಿರುವಾಗ ಎದುರುಗಡೆ ಸೇಡಂ ಕಡೆಯಿಂದ ಡಿಸಿಎಮ್ ವಾಹನ ನಂಬರ್ ಎಮ್.ಹೆಚ್-25 ಯು-1246 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಗಾಯಾಳು ವೆಂಕಟೇಶ ಇತನಿಗೆ ತಲೆಗೆ ಹಾಗೂ ಕಾಲುಗಳಿಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿದ್ದು ಶ್ರೀಕಾಂತ ಇತನಿಗೆ ಹಣೆಗೆ ಹಾಗೂ ಬಲಬುಜಕ್ಕೆ, ಮತ್ತು ಬೆನ್ನಿಗೆ ಬಾರಿ ಪ್ರಮಾಣದ ತರಚಿದ ರಕ್ತಗಾಯವಾಗಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದಾಗ ಶ್ರೀಕಾಂತ ಇತನು ಮದ್ಯಾನ 01-31 ಗಂಟೆ ಸುಮಾರಿಗೆ ಉಪಚಾರ ಪಲಿಸದೆ ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ಬಸಮ್ಮ ಗಂಡ ಸಿದ್ದಣ್ಣಾ ವಡ್ಡರ ಸಾ: ಅಡಕಿ ಗ್ರಾಮ ಇವರು ನೀಡಿದ ದೂರಿನ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಅಫಜಲಪೂರ ಪೊಲೀಸ ಠಾಣೆ 

ದಿನಾಂಕ: 10-09-2020 ರಂದು 1-15 ಪಿಎಮ್ ಕ್ಕೆ ಶ್ರೀ ರಾಚಯ್ಯಾ ತಂದೆ ಗಂಗಯ್ಯಾ ಮಠ ಸಾ|| ಅಫಜಲಪೂರ ಇವರು ಠಾಣೆಗೆ ಫಿರ್ಯಾದಿ ನೀಡಿದ ಸಾರಾಂಶವೆನೆಂದರೆ ದಿನಾಂಕ 10-09-2020 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಹೈದ್ರಾದಲ್ಲಿ ಮೃತಪಟ್ಟಿದ್ದ ನನ್ನ ವಾಹನ ಚಾಲಕನಾದ ಶರಣಪ್ಪ ಕಡಬಗಾಂವ ಈತನ ಶವ ಸಂಸ್ಕಾರಕ್ಕೆ ನಾನು ಮತ್ತು ಮಲ್ಲಿನಾಥ ಕೋಳಕೂರ ಒಂದು ಮೋಟರ ಸೈಕಲ ಮೇಲೆ, ಹಾಗೂ ಸಂತೋಷ ಅಂದೋಡಗಿ ಈತನು ತನ್ನ ಮೋಟರ ಸೈಕಲ ನಂ ಕೆಎ-32 ಇಟಿ-8714 ನೇದ್ದರ ಮೇಲೆ ಅಫಜಲಪೂರದಿಂದ ಹೈದ್ರಾಕ್ಕೆ ಹೋಗಿ, ಹೈದ್ರಾದಲ್ಲಿ ಅಂತಿಮ ಶವ ಸಂಸ್ಕಾರ ಮುಗಿಸಿಕೊಂಡು, ಮರಳಿ  ಮದ್ಯಾಹ್ನ 12:15 ಗಂಟೆ ಸುಮಾರಿಗೆ ಕರಜಗಿ ಅಫಜಲಪೂರ ರೋಡಿಗೆ ಡಿಗ್ಗಿ ಕ್ರಾಸ್ ಹತ್ತಿರ ಬರುತ್ತಿದ್ದಾಗ, ನಮ್ಮ ಮುಂದೆ ಮೋಟರ ಸೈಕಲ ಚಾಲಾಯಿಸುತ್ತಿದ್ದ ಸಂತೋಷ ತಂದೆ ಶಾಂತಪ್ಪ ಅಂದೋಡಗಿ ಈತನ ಮೋಟರ ಸೈಕಲಗೆ, ಎದುರುಗಡೆಯಿಂದ ಬರುತ್ತಿದ್ದ ಮೊಟರ ಸೈಕಲ ನಂ ಕೆಎ-32 ಇವಿ-8562 ನೇದ್ದರ ಚಾಲಕ ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಸಂತೋಷನ ಮೋಟರ ಸೈಕಲ ಬಂಪರಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿದ್ದರಿಂದ, ಸಂತೋಷನು ಮೋಟರ ಸೈಕಲ ಸಮೇತ ರೋಡಿನ ಪಕ್ಕದ ತಗ್ಗಿನಲ್ಲಿ ಮೋಟರ ಸೈಕಲ ಸಮೇತ ಬಿದ್ದನು. ಅಫಘಾತ ಪಡಿಸಿದ ಅಫಜಲಪೂರದ ಶಂಕರ ತಂದೆ ಮಲ್ಲಿಕಾರ್ಜುನ ಕೋರಳ್ಳಿ ಎಂಬಾತನಿದ್ದು, ಅವನಿಗೂ ಸಣ್ಣ ಪುಟ್ಟ ಗಾಯಗಳು ಆಗಿದ್ದವು, ಸಂತೋಷನ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಾಗಾಯವಾಗಿ ಪ್ರಜ್ಞಾ ಹೀನನಾಗಿದ್ದನು. ನಂತರ ನಾನು ಮತ್ತು ನನ್ನ ಜೊತೆಗೆ ಇದ್ದ ಮಲ್ಲಿನಾಥ ಕೋರಳ್ಳಿ ಇಬ್ಬರು ರೋಡಿಗೆ ಬರುತ್ತಿದ್ದ ಒಂದು ಖಾಸಗಿ ವಾಹನವನ್ನು ನಿಲ್ಲಿಸಿ, ಸದರಿ ವಾಹನದಲ್ಲಿ ಸಂತೋಷನನ್ನು ಮತ್ತು ಶಂಕರನನ್ನು ಹಾಕಿಕೊಂಡು ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ, ಸಂತೋಷನು ಮದ್ಯಾಹ್ನ 12:40 ಗಂಟೆ ಸುಮಾರಿಗೆ ಮಾರ್ಗ ಮದ್ಯ ಸೋನ್ನ ಕ್ರಾಸ ಹತ್ತಿರ ಮೃತ ಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

No comments: