POLICE BHAVAN KALABURAGI

POLICE BHAVAN KALABURAGI

19 April 2020

KALABURAGI DISTRICT PRESS NOTE


                                                  : ಪತ್ರಿಕಾ ಪ್ರಕಟಣೆ :                                                                   
  (ದಿನಾಂಕ: 19.04.2020)
          ದೇಶದಲ್ಲಿ ಮಹಾಮಾರಿ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ದೇಶದ್ಯಾಂತ ಲಾಕ್ಡೌನ ಘೋಷಣೆ ಮಾಡಿದ್ದು ಈ ದಿಶೆಯಲ್ಲಿ (ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹೊರತು ಪಡಿಸಿ) ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ,  ಚಿತ್ತಾಪೂರ, ಶಹಾಬಾದ, ಸೇಡಂ, ಮತ್ತು ಚಿಂಚೋಳಿ ತಾಲ್ಲೂಕಾಗಳ ವ್ಯಾಪ್ತಿಯಲ್ಲಿ ಲಾಕ್ಡೌನನ್ನು ಉಲ್ಲಂಘಿಸಿದವರ ವಿರುದ್ದ ಜಿಲ್ಲೆಯ ವಿವಿದ ಪೊಲೀಸ ಠಾಣೆಗಳಲ್ಲಿ ಇಲ್ಲಿಯವರೆಗೆ  ಒಟ್ಟು 38 ಲಾಕ್ಡೌನ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು ಆ ಪ್ರಕರಣಗಳಿಗೆ ಸಂಭಂದಿಸಿದಂತೆ 122 ಜನರನ್ನು ದಸ್ತಗಿರಿಗೊಳಿಸಲಾಗಿರುತ್ತದೆ ಹಾಗೂ ಲಾಕ್ಡೌನ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾದ 118 ಜನರ ವಿರುದ್ದ ರೌಡಿ ಶೀಟ ತೆರೆಯಲಾಗಿದೆ. ಅಲ್ಲದೆ ಲಾಕ್ಡೌನ ಉಲ್ಲಂಘಿಸಿ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 659 ವಾಹನಗಳನ್ನು ವಶಕ್ಕೆ ಪಡೆದುಕೊಂಡು 92,700-00 ರೂ. ದಂಡ ವಿಧಿಸಲಾಗಿದೆ.

                                                                                                ಸಹಿ/-
                                                                                        ಪೊಲೀಸ ಅಧೀಕ್ಷಕರು,
                                                                                              ಕಲಬುರಗಿ
ಗೆ,
ಸಂಪಾದಕರು
ಕಲಬುರಗಿ ನಗರದ ಎಲ್ಲಾ ಪತ್ರಿಕೆಗಳು.

No comments: