POLICE BHAVAN KALABURAGI

POLICE BHAVAN KALABURAGI

25 February 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:24/02/2020 ರಂದು ನರೋಣಾ ಠಾಣಾ ವ್ಯಾಪ್ತಿಯ  ಕಡಗಂಚಿ ಗ್ರಾಮದಲ್ಲಿ ಹನುಮಾನ ದೇವಸ್ಥಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಠಾಣೆ ಯಿಂದ ಹೊರಟು ಹನುಮಾನ ದೇವರ ಗುಡಿಯ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲಾಗಿ ಗುಡಿಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ಭೀರಣ್ಣಾ ಝಳಕಿ, ಸಾ:ಕಡಗಂಚಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 4600/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ವಾಡಿ ಠಾಣೆ : ದಿನಾಂಕ: 23/02/2020 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ರಾವೂರ  ಗ್ರಾಮದಿಂದ ಚಿತ್ತಾಪೂರ ಕಡೆಗಿನ ಹೋಗುವ ರೋಡಿನ ರಂಗಣ್ಣ ಉಸ್ಟಮುರ ರವರ ಹೊಲದಲ್ಲಿಯ ಬಂದಾರಿಗೆ ಖುಲ್ಲಾ ಜಾಗೆಯಲ್ಲಿ ಕೆಲವು  ಜನರು ದುಂಡಾಗಿ ಕುಳಿತುಕೊಂಡು  ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ರಾವೂರ ಗ್ರಾಮದಿಂದ ಚಿತ್ತಪೂರದ  ಕಡೆಗೆ ಹೋಗುವ ರೊಡಿನ ರಂಗಣ್ಣ ರವರ ಹೊಲದ ಸಮೀಪ ರೋಡಿಗೆ  ಜೀಪ ನಿಲ್ಲಿಸಿ ಕೆಳಗಿಳಿದು ಮರೆಯಲ್ಲಿ ನಿಂತು ನೀರಿಕ್ಷಣೆ ಮಾಡಲಾಗಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಸ್ಟೇಟ ಜೂಜಾಟ ಆಡುತ್ತಿದ್ದ 10 ಜನರನ್ನು ಹಿಡಿದುಕೊಂಡಿದ್ದು ಅವರ ಹೆಸರು ವಿಚಾರಿಸಲಾಗಿ 1] ಬಸವಣಪ್ಪ ತಂದೆ ಅಮೃತ ಹಂಗರಗಿ ಸಾ:ಖಾದ್ರೀ ಚೌಕ ಕಲಬುರಗಿ  2] ರಾಜು ತಂದೆ ಯಂಕಪ್ಪ ಮೆಳಕುಂದಿ  ಸಾ:ಲಕ್ಷ್ಮೀಪೂರ ವಾಡಿ  3] ನಬಿಸಾ ತಂದೆ ಹಸನ ಸಾಬ ಮೋಸವಾಲೆ ಸಾ:ರಾವೂರ  4] ಮೈಲಾರಿ ತಂದೆ ಕುಪೇಂದ್ರ ವಗ್ಗರ ಸಾ:ರಾವೂರ ಅಂತಾ ತಿಳಿಸಿದ್ದು 5] ಜಗನಾಥ ತಂದೆ ದಶರಥ ಬ್ಯಾಳಳ್ಳಿಕರ ಸಾ:ಅಣಕುಣಿ ತಾ.ಹುಮನಾಬಾದ ಜಿ.ಬೀದರ 6] ಅಶೋಕ ತಂದೆ ಬರಮಯ್ಯ ದಂಡಗುಲಕರ ಸಾ:ಶಹಬಾದ 7] ಶಿವಶರಣಪ್ಪ ತಂದೆ ಶ್ರೀಮಂತ ವಾಡಿ  ಸಾ:ರೇವಣಸಿದ್ದೇಶ್ವರ ಕಾಲೋನಿ ಕಲಬುರಗಿ 08] ಮೋಹನ ತಂದೆ ಗಣಪತಿರಾವ ಗಣೇಶಕರ ಸಾ:ಕಲಬುರಗಿ (ರಾಜಾಪೂರ)  09] ರಾಜು ತಂದೆ ಮಹಾದೇವಪ್ಪ ಆಜಾದಪುರ ಸಾ:ರಾಜಾಪೂರ ಕಲಬುರಗಿ  10] ಶೀವು ತಂದೆ ರೇವಣಸಿದ್ದಪ್ಪ ಸ್ವಾಮಿ ಸಾ:ರಾವೂರ ಅಂತಾ ತಿಳಿಸಿದ್ದು ಸದರಿಯವರ ಅಂಗಶೋಧನೆ ಮಾಡಲಾಗಿ ಒಟ್ಟು 18400/- ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳು ದೊರೆತಿದ್ದು ಅಲ್ಲದೇ ಜೂಜಾಟ ಆಡಲು ಬಂದವರ ಪೈಕಿ ಸ್ಥಳದಲ್ಲಿ ಮೋಟರ ಸೈಕಲಗಳಿದ್ದು ಪರಿಶೀಲಿಸಿ ನೋಡಲಾಗಿ 1) ಮೋಟರ ಸೈಕಲ್ ನಂಬರ ಕೆ.-32 .ವಿ-0763 ಅಕಿ-20000, 2) ಮೋಟರ ಸೈಕಲ್ ನಂಬರ ಕೆ.-19 .ಹೆಚ್-838 ಅಕಿ-30000, 3) ಮೋಟರ ಸೈಕಲ್ ನಂಬರ ಕೆ.-32 ಆರ್-1500 ಅಕಿ-25000, 4)ಮೋಟರ ಸೈಕಲ್ ನಂಬರ ಕೆ.-32 ...-585 ಅಕಿ-35000, 5) ಮೋಟರ ಸೈಕಲ್ ನಂಬರ ಕೆ.-32 ಕ್ಯೂ-1131 ಅಕಿ-25000, 6) ಮೋಟರ ಸೈಕಲ್ ನಂಬರ ಕೆ.-39 ಜೆ-4777 ಅಕಿ-30000, 7)ಮೋಟರ ಸೈಕಲ್ ನಂಬರ ಕೆ.-32 .ಸಿ-6922 ಅಕಿ-22000, 8) ಮೋಟರ ಸೈಕಲ್ ನಂಬರ ಕೆ.-32 .-3796 ಅಕಿ-30000, ಹೀಗೆ 08 ಮೋಟರ ಸೈಕಲಗಳು ದೋರತಿದ್ದು ಪಣಕ್ಕೆ ಹಚ್ಚಿದ ಹಣ 18,400-/ 52 ಇಸ್ಪಿಟು ಎಲೆಗಳು ಮತ್ತು 08 ಮೋಟರ ಸೈಕಲಗಳು ಜಪ್ತು ಪಡಿಸಿಕೊಂಡು  ಸದರಿಯವುಗಳನ್ನು ಪಂಚರ ಸಮಕ್ಷಮದಲ್ಲಿ 03-15 ಪಿಎಮ್ ದಿಂದ 04-45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು  ಸದರಿಯವರೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಿಲಕಂಠ ತಂದೆ ಸಂಗಣ್ಣ ಪಾಟೀಲ ಸಾ||ಜೀರಂಕಲಗಿ ತಾ||ಇಂಡಿ ರವರ ಅಕ್ಕಳಾದ ಶ್ರೀಮತಿ ಶಿವಮ್ಮ ಇವಳಿಗೆ ನಮ್ಮ ಗ್ರಾಮದ ಶಿವಾನಂದ ಮುಚ್ಚಂಡಿ ಎಂಬುವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಸದ್ಯ ನನ್ನ ಅಕ್ಕಳಿಗೆ ಒಬ್ಬ ಮಗ ವಿಜಯಕುಮಾರ ವ||22 ಎಂಬ ಗಂಡಸು ಮಗನಿರುತ್ತಾನೆ ಅವನು ಜೀಪ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ದಿನಾಂಕ:18/02/2020 ರಂದು ನಮ್ಮ ಗ್ರಾಮದ ಮಹಾಂತೇಶ ನಿಂಬಣ್ಣ ಕೋಳಿ ಎಂಬುವರು ಮಣ್ಣೂರ ಗ್ರಾಮದ ಎಲ್ಲಮ್ಮ ಗುಡಿಯಲ್ಲಿ ದೇವರ ಕಾರ್ಯಕ್ರಮ ಇದ್ದ ಕಾರಣ ನನ್ನ ಅಳಿಯ ವಿಜಯಕುಮಾರನು ಸದರಿ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಅಂತ ಬೆಳಿಗ್ಗೆ 10 ರ ಸುಮಾರಿಗೆ ನಮ್ಮ ಗ್ರಾಮದಿಂದ ಹೋಗಿರುತ್ತಾನೆ ನಂತರ ಸಾಯಂಕಾಲ 6-30 ಸುಮಾರಿಗೆ ಸದರಿ ಕಾರ್ಯಕ್ರಮಕ್ಕೆ ಹೋಗಿದ್ದು ನಮ್ಮ ಗ್ರಾಮದ ಸಂತೋಷ ತಂದೆ ರಾಮಣ್ಣದ ಕರ್ಲಮಳ ಈತನು ನನಗೆ ಪೋನ ಮಾಡಿ ವಿಜಯಕುಮಾರನಿಗೆ ಮಣ್ಣೂರ ಬುಂಯಾರ ರೋಡಿನ ಮೇಲೆ ಮಣ್ಣೂ ರ ಗ್ರಾಮದ ಹತ್ತೀರ ಅಪಘಾತವಾಗಿರುತ್ತದೆ ಅಂತ ತಿಳಿಸಿದ ಆಗ ನಾನು ಮತ್ತು ನನ್ನ ಅಕ್ಕ ಹಾಗೂ ಭೀಮಾಶಂಕರ ತಂದೆ ನಾಗಪ್ಪ ವಜ್ರವಾಡ ಮೂರು ಜನ ಕೂಡಿಕೊಂಡು ಅಪಘಾತವಾದ ಸ್ಥಳಕ್ಕೆ ಬಂದಾಗ ವಿಜಯಕುಮಾರನಿಗೆ 108 ದಲ್ಲಿ ಸಂತೋಷನು ಅಫಜಲಪೂರ ಸರ್ಕಾರಿ ಆಸ್ಪತ್ರೇಗೆ ಕರೆದುಕೊಂಡು ಹೋಗಿರುತ್ತಾನೆ ಅಂತ ಗೋತ್ತಾಗಿದ್ದರಿಂದ ಸಂತೋಷನಿಗೆ ಪೋನ ಮಾಡಿ ವಿಚಾರಿಸಿ ವಿಜಯಕುಮಾರನಿಗೆ ವಿಜಯಪೂರದ ಬಿ.ಎಲ್.ಡಿ. ಆಸ್ಪತ್ರೇಗೆ ತರುವಂತೆ ಹೇಳಿ ನಾವು ವಿಜಯಪುರಕ್ಕೆ ಹೋಗಿದ್ದು ಸಂತೋಷನು ವಿಜಯಕುಮಾರನಿಗೆ ಬಿ.ಎಲ್.ಡಿ.ಆಸ್ಪತ್ರೇಗೆ ಖಾಸಗಿ ವಾಹನದಲ್ಲಿ ತಂದಿದ್ದು ನೋಡಲಾಗಿ ವಿಜಯಕುಮಾರನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿರುವುದು ಕಂಡುಬಂದಿರುತ್ತದೆ. ವಿಜಯಕುಮಾರನು ಮೋ.ಸೈ ನಂಬರ ಕೆ,ಎ-03 ಹೆಚ್.ಕೆ-6871 ನೇದ್ದರ ಮೇಲೆ ಮಣ್ಣೂರದಿಂದ ಭುಯಾಂರಕ್ಕೆ ಬರುತ್ತಿರುವಾಗ ಮಣ್ಣೂ ರ ಗ್ರಾಮದ ಸಮೀಪ ಅವನ ಎದುರುಗಡೆಯಿಂದ ಮೋ,ಸೈ ನಂಬರ ಕೆ,ಎ-28 ಇ.ಡಿ-9122 ನೇದ್ದರ ಸವಾರನು ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಿಜಯಕುಮಾರನ ಮೋಟಾರ ಸೈಕಲಗೆ ಅಪಘಾತಪಡಿಸಿರುತ್ತಾನೆ ಅಂತ ಗೋತ್ತಾಗಿರುತ್ತದೆ.ನಾವು ಅಪಘಾತವಾದ ಸ್ಥಳಕ್ಕೆ ಹೋಗಿದ್ದಾಗ ಎರಡು ಮೋಟಾರ ಸೈಕಲಗಳು ಅಪಘಾತವಾದ ಸ್ಥಳದಲ್ಲಿ ಬಿದ್ದಿದ್ದವು ನನ್ನ ಅಳಿಯ ವಿಜಯಕುಮಾರನು ಮಾತನಾಡುವ ಸ್ಥೀತಿಯಲ್ಲಿ ಇರುವುದಿಲ್ಲಾ ಕಾರಣ ಮಾನ್ಯರವರು ನನ್ನ ಅಳಿಯ ವಿಜಯಕುಮಾರನಿಗೆ ಅಪಘಾತಪಡಿಸಿದ ಮೊ.ಸೈಕಲ ನಂಬರ ಕೆ,ಎ-28 ನೇದ್ದರ ಸವಾರನ ವಿರುದ್ದ ಕಾನೂನು ಕ್ರಮ ಕೈಕೋಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ರವಿಚಂದ್ರ ತಂದೆ ಯಂಕಯ್ಯ ಗುತ್ತೇದಾರ ರವರು ದಿನಾಂಕ: 22/02/2020 ರಂದು ಮಹಾದೇವಪ್ಪ ಹರವಾಳವರ ಹಿಟ್ಟಿನ ಗಿರಣಿ ಹಾಗೂ ಅವರ ಮನೆಯ ದುರಿನ ರಸ್ತೆಯ ಮೇಲೆ ನಡೆದ ಘಟನೆಯ ಸಾರಾಂಶವೆನೆಂದರೆ ದಿನಾಂಕ 22/02/2020 ರಂದು ಠಾತ್ರಿ 11.20 ನಿಮಿಷಕ್ಕೆ ಉದಯಕುಮಾರ ತಂದೆ ಹಾದೇವಪ್ಪ ಹಾಗು ಸಿದ್ದು @ ಪಿಂಟು ತಂದೆ ಮಹಾದೇವಪ್ಪ ವರಿಬ್ಬರನ್ನು ಸೇರಿ 9535451112 ನಂಬರಿನಿಂದ ಕರೆ ಮಾಡಿ ಮನೆಯಿಂದ ಹೊರಗೆ ಬಾ ಎಲ್ಲಿದ್ದಲ್ಲೇ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಯಾಕೆ? ಎಂದು ಪ್ರಶ್ನಿಸಿದಾಗ ಮೊನ್ನೆ ನಮ್ಮ ನಾಯಿ (ಮೃತ) ಕಾರು ಅಫಘಾತದಲ್ಲಿ ಮೃತಪಟ್ಟಾಗ ಕಾರಿನ ಮಾಲಿಕರಿಂದ ಸಾಯಿಬಣ್ಣಾ ತಂದೆ ಲಕ್ಷ್ಮಣ ಬಂಜೆಪಲ್ಲಿ ಮತ್ತು ನಾನು ಹಣ ಕೊಡಿಸುತ್ತೆವೆ ಎಂದು ಹೇಳಿ ಇನ್ನೂ ಕೊಡಿಸಿಲ್ಲಾ ಎಂದು ಎಂದು ಹೊರೆಗೆ ಬರುತಿ ಏನ್ ನಾವೇ ನೀಮ್ಮ ಮನೆಗೆ ಬರಬೇಕಾ? ಎಂದಾಗ ಇರು ಬರುತ್ತೆನೆ ಎಂದು ಅವರ ಮನೆಯ ಹತ್ತಿರ ಹೋದಾಗ ಏಕಾ ಏಕೀ ಸಿದ್ದು ( ಪಿಂಟೂ) ಮತ್ತು ಉದಯಕುಮಾರ, ಮಹಾದೆವಪ್ಪ ಹರವಾಳ , ಸಿದ್ದು ಹಾಗೂ ಉದಯಕುಮಾರ ನನಗೆ ಹೊಡೆಯುವ ಉದ್ದೇಶದಿಂದ ಮೂವರು ಕೂಡಿಕೊಂಡು ಏನೋ ಏ ನೀ ಒಬ್ಬ ವಡ್ಡ ಸೂಳಿಮಗ ನಮ್ಮ ನ್ಯಾಯಾ ಮಾಡತಿ, ನೀಮ್ಮ ನಾಯಿ ಹೇಗೆ ಸತ್ತಿದೆ ಹಾಗೇ ನೀನ್ನನು ಸಾಯಿಸುತ್ತೆವೆಂದು ಹೇಳುತ್ತಾ ಸಿದ್ದು ( ಪಿಂಟೂ) ಈತನು ಎದೆಯ ಬಾಗಕ್ಕೆ ಉದಯಕುಮಾರ ಈತನು ಟಿ ಶರ್ಟ ಹಿಡಿದು ಎಳೇದಾಡುತ್ತಾ ಕುತ್ತಿಗೆ ಮತ್ತು ಬೇನ್ನಿನ ಬಾಗಕ್ಕೆ ಹೊಡೆದನು ಆಗ ಮಹಾದೇವಪ್ಪ ಈತನು ಹೊಡಿರೊ ಅವನಿಗೆ ಎಂದು ಬಂದವನೆ ಬಡಿಗೆಯಿಂದ ತಲೆಯ ಎಡಬಾಗಕ್ಕೆ ಹಾಗೂ ತೊಡೆಗೆ ಹೊಡೆಯಲಾರಂಬಿಸಿದನು. ಅಲ್ಲಿಯೇ ಇದ್ದ ತನ ಸಹೋದರಿ ವಿಜಯಲಕ್ಷ್ಮಿ ಹಾಗೂ ಉದಯಕುಮಾರನ ತಾಯಿ ಶಿವಲೀಲಾ, ಹಾಗೂ ಆತನ ಪತ್ನಿ ಸಂಗೀತಾ, ಹಾಗೂ ಉದಯ ಕುಮಾರನ ತಮ್ಮ ಸಿದ್ದು @ ಪಿಂಟೂ ನ ಪತ್ನಿ ತೇಜಸ್ವೀನಿ ಇವರೆಲ್ಲರೂ ಸೇರಿಕೊಂಡು ಹೊಡಿರಿ ಆ ಹಾಟ್ಯಾಗ ಬಿಡಬ್ಯಾಡಿರಿ ಎಂದು ಹೇಳುತಾ ನೇಲಕ್ಕೆ ಉರುಳಿಸಿ ಹೊಡೆಯುತ್ತಿರುವಾಗ ಇನ್ನೂ ಮೂರು ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ಬಂದು ಹೊಡೆದು ಖಲಾಸ ಮಾಡಿರಿ ಎಂದು ಪ್ರಚೋಧಿಸಿ ಹೊಡೆಯಲಾರಂಬಿಸಿದರು. ನಂತರ ಅಲ್ಲಿಯೆ ಬುರುತ್ತಿದ್ದ ರೀಯಾಜ ಅಹೇಮದ್ ಅಂಬರೀಶ ದೊಡ್ಡಮನಿ ಜಗಳವನ್ನು ಬಿಡಿಸಿ ಆಸ್ಪತ್ರೆಗೆ ದಾಖಲಿಸಿದರು. ನಂತರ ವೈದ್ಯರು ನೀಡಿದ ಚಿಕಿತ್ಸೆಯನ್ನು ಪಡೆದು ಅವರ ನಿದೇರ್ಶಸಿಸದ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೆನೆ. ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ನಂತರ ತಡಮಾಡಿ ಪೀರ್ಯದಿ ಅರ್ಜಿ ಸಲ್ಲಿಸಿರುತ್ತೆನೆ. ಕಾರಣ ಮೇಲೆ ಹೇಳಿದ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು , ನನ್ನ ಮೇಲೆ ಹಲ್ಲೆ ಮಾಡಿದವರ ಹಾಗೂ ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳಬೇಕಾಗಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: