ಅಪಘಾತ ಪ್ರಕರಣ : 
ಗ್ರಾಮೀಣ ಠಾಣೆ : ದಿನಾಂಕ 26/09/16 ರಂದು ಮೃತ ಚಂದ್ರಕಾಂತ ಇತನು ಹಿರೋ ಹೊಂಡಾ ಸ್ಪೆಂಡರ ಕೆಎ 32 Y 5698 ನೇದ್ದರ ಹಿಂದೆ ಕಾಮಣ್ಣಾನಿಗೆ
ಕೂಡಿಸಿಕೊಂಡು ಸೈಯ್ಯದ ಚಿಂಚೋಳಿ ಕ್ರಾಸದಿಂದ ಅಂದಾಜ ಎರಡು ಫರ್ಲಾಂಗ ದೂರದಲ್ಲಿ ಇರುವ ರೇಣುಕಾ
ನಗರ ಕ್ರಾಸ ಹತ್ತಿರ ಇರುವ ರೋಡ ಡಿವೈಡರ ಮಧ್ಯದಲ್ಲಿ ಇರುವ ಸಂದಿಯಿಂದ ಮೋಟಾರ ಸೈಕಲನ್ನು
ಸಾವಕಾಶವಾಗಿ ಹುಮನಾಬಾದ ರಿಂಗ ರೋಡ ಕಡೆ ಟರ್ನ ಮಾಡುತ್ತಿದ್ದಾಗ ಆಗ ಅದೇ ಸಮಯಕ್ಕೆ ಅಳಂದ ಚೆಕ್ಕ
ಪೋಸ್ಟ ರೋಡ ಕಡೆಯಿಂದ ಕೆಂಪು ಬಣ್ಣದ MH 04 BQ 5728 ಕಾರ ಚಾಲಕನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಹಾರ್ನ ವಗೈರೇ ಹಾಕದೇ  ನಡೆಯಿಸಿಕೊಂಡು ಬಂದವನೇ ನಮ್ಮ ಮೋಟಾರ ಸೈಕಲಿಗೆ ಜೋರಾಗಿ
ಡಿಕ್ಕಿ ಹೊಡೆದು ಅಪಘಾತಪಡಿಸಿ ಕಾರ ಚಾಲಕ ಸ್ಥಳದಲ್ಲಿ ಕಾರು ನಿಲ್ಲಿಸಿದನು. ಇದರಿಂದಾಗಿ  ಮೃತ ತಲೆ ಹಿಂದೆ ಭಾರಿ ರಕ್ತಗಾಯವಾಗಿದ್ದು,
ಕಾಮಣ್ಣಾನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಕಾರ ಚಾಲಕ ಅಪಘಾತಪಡಿಸಿದ ಕಾರಿನಲ್ಲಿ ಜಿಲ್ಲಾ
ಸರಕಾರಿ ಆಸ್ಪತ್ರೆ ಕಲಬುರಿಗಿಗೆ ತೆಗೆದುಕೊಂಡು ಹೋದಾಗ ವೈದ್ಯರು ಚಂದ್ರಕಾಂತನಿಗೆ ನೋಡಿ ಈಗಾಗಲೇ
ಮೃತಪಟ್ಟಿರುತ್ತಾನೆ ಎಂದು ತಿಳಿಸಿದಾಗ ಕಾರ ಚಾಲಕ ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
 
 
 
No comments:
Post a Comment