POLICE BHAVAN KALABURAGI

POLICE BHAVAN KALABURAGI

09 August 2016

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
                ಮಾನ್ಯ ಸರ್ವೋಚ್ಛ  ನ್ಯಾಯಾಲಯದ ನಿರ್ದೇಶನದಂತೆ ಕಲಬುರಗಿ ಆರಕ್ಷಕ ಅಧೀಕ್ಷಕರವರಾದ ಶ್ರೀ. ಎನ್.ಶಶಿಕುಮಾರ ರವರ  ನೇತೃತ್ವದಲ್ಲಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮತ್ತು ಮಕ್ಕಳ ಉಚಿತ ಸಹಾಯವಾಣಿ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾನೂನು ಮಹಾವಿದ್ಯಾಲಯ, ಸ್ವಯಂ ಸೇವಾ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಾರಸ್ಸು ರಹಿತ ಮಕ್ಕಳ ಹಾಗೂ ಬಾಲ ಕಾರ್ಮಿಕ ನಿರತ ಮಕ್ಕಳ ಮತ್ತು ಕಾಣೆಯಾದ ಮಕ್ಕಳ ಹಾಗೂ ನಿರಾಶ್ರಿತ ಮಕ್ಕಳು ಮತ್ತು ತೊಂದರೆಯಲ್ಲಿರುವ ಮಕ್ಕಳ ಪತ್ತೆ ಹಾಗೂ ಪುನರ್ವಸತಿ ಒದಗಿಸುವ ಹಿನ್ನಲೆಯಲ್ಲಿ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸುವ ಆಪರೇಷನ್ ಮುಸ್ಕಾನ-2 ಎಂಬ ವಿನೂತನ ಯೋಜನೆಯನ್ನು ಕಲಬುರಗಿ  ಜಿಲ್ಲೆಯಾದ್ಯಾಂತ ಕಾರ್ಯಾರಂಭ ಮಾಡಿದ್ದು ಈ ದಿಶೆಯಲ್ಲಿ ಬಿಕ್ಷಾಟನೆಯಲ್ಲಿ ತೊಡಗಿದ 90 ಮಕ್ಕಳು ಹಾಗೂ ವಿವಿಧ ಬಾಲ ಕಾರ್ಮಿಕ ಕೆಲಸದಲ್ಲಿ ತೊಡಗಿದಂತಹ  24 ಮಕ್ಕಳು ಹೀಗೆ ಒಟ್ಟು 114 ಮಕ್ಕಳನ್ನು ಪತ್ತೆ ಹಚ್ಚಿದ್ದು ಅವರಲ್ಲಿ 23 ಜನ ಹೆಣ್ಣು ಮಕ್ಕಳಿದ್ದು 91 ಜನ ಗಂಡು ಮಕ್ಕಳಿರುತ್ತಾರೆ, ಇವರನ್ನು ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಬಾಲಕರ ಬಾಲ ಮಂದಿರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಒದಗಿಸಲಾಗಿದೆ.
                ಅಲ್ಲದೆ, ಕಾರ್ಯಾಚರಣೆಯಲ್ಲಿ ಬಿಕ್ಷೆ ಬೇಡುತಿದ್ದ 7 ಜನ ವಯಸ್ಕ ಬಿಕ್ಷುಕರನ್ನು ಪತ್ತೆ ಹಚ್ಚಿ ನಿರ್ಗತಿಕರ ಪುನರ್ವಸತಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಹಾಗೆಯೇ ಇಲಾಖೆಯಲ್ಲಿ ಕಾಣೆಯಾದ ಪ್ರಕರಣಗಳು 2011 ರಿಂದ ಇಲ್ಲಿಯ ವರೆಗೆ ಒಟ್ಟು 42 ಪ್ರಕರಣಗಳು ತನಿಖೆಯಲ್ಲಿದ್ದು, ಈ ಕಾರ್ಯಾಚರಣೆಯಲ್ಲಿಯೇ ಪತ್ತೆ ಕಾರ್ಯವು ಅತೀ ಚುರುಕಾಗಿ ನಡೆಯುತಿದ್ದು, ಸದರ ಕಾರ್ಯಾಚರಣೆಯು  ಆಗಸ್ಟ ಮಾಸಾಂತ್ಯದವರೆಗೆ ಮುಂದುವರೆಯಲಿದ್ದು ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸುವದು, ಮೇಲೆ ನಮೂದ ಮಾಡಿದ ಮಾಹಿತಿ ಕಂಡು ಬಂದಲ್ಲಿ ಪೊಲೀಸ ಕಂಟ್ರೋಲ್ ರೂಮಿನ ದೂರವಾಣಿ ಸಂಖ್ಯೆ 100 ಅಥವಾ ಮಕ್ಕಳ ಉಚಿತ ಸಹಾಯವಾಣೆ  1098 ಗೆ  ತಿಳಿಸತಕ್ಕದ್ದು.
                                                                                                         ಪೊಲೀಸ ಅಧೀಕ್ಷಕರು
                                                                                                                ಕಲಬುರಗಿ

No comments: