POLICE BHAVAN KALABURAGI

POLICE BHAVAN KALABURAGI

26 March 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕವಿತಾಬಾಯಿ ಗಂಡ ದತ್ತು ಜಮದಾರ  ಸಾ; ಕೆರಿಬೋಸಗಾ ಗ್ರಾಮ ತಾ;ಜಿ;ಕಲಬುರಗಿ ಇವರ ಗಂಡ ದತ್ತು ತಂದೆ ಅಂಬರಾಯ @ ಅಮೃತ ಜಮದಾರ ಇವರು ದಿನಾಂಕ.24-3-2016 ರಂದು ಮುಂಜಾನೆ ಉಪಳಾಂವದಲ್ಲಿರುವ ತನ್ನ ಅಕ್ಕಳಿಗೆ ಭೇಟಿಯಾಗಿ ಬರುವದಾಗಿ ನಮ್ಮ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.28 ಇಎ 4301 ನೆದ್ದರ ಮೇಲೆ ಅವರ ಸಂಗಡ ನಮ್ಮ ಗ್ರಾಮದ ಶಾರದಾಬಾಯಿ ಗಂಡ ಬಸವರಾಜ ಪೊಲೀಸ್ ಗೌಡರ ಇವರನ್ನು ಕರೆದುಕೊಂಡು ಮನೆಯಿಂದ ಹೋದರು  ಸಾಯಂಕಾಲ 3 ಪಿ.ಎಂ.ದ ಸುಮಾರಿಗೆ ಯಾರೋ ನಮ್ಮ ಮಗ ಆಕಾಶನ ಮೋಬಾಯಿಲಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ  ಹುಮನಾಬಾದ ರೋಡನ  ಉಪಳಾಂವ ಕ್ರಾಸ ಹತ್ತಿರ ನನ್ನ ಗಂಡನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದಿದರಿಂದ ತಲೆಗೆ ,ಎದೆಗೆ ಹಾಗೂ ಶಾರದಾಬಾಯಿ ಪೊಲೀಸ ಗೌಡರ ಇವರಿಗೆ ಗಾಯಗಳಾಗಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವದಾಗಿ ತಿಳಿಸಿದರು ಆಗ ನಾನು ಮತ್ತು ನನ್ನ ಮಗ ಆಕಾಶ ಇಬ್ಬರು ಕೂಡಿಕೊಂಡು ಒಂದು ಮೋಟಾರ  ಸೈಕಲ್ ಮೇಲೆ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಗಂಡ ದತ್ತು ಇವರಿಗೆ ವಿಚಾರಿಸಲು ತಿಳಿಸಿದ್ದು ಏನೆಂದರೆ  ಮದ್ಯಾನ 2-00 ಗಂಟೆಯ ಸುಮಾರಿಗೆ  ಉಪಾಳಂವ ದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಹುಮನಾಬಾದ ರೋಡನ ಉಪಳಾಂವ ಕ್ರಾಸ ಹತ್ತಿರ  ವೇಗವಾಗಿ ಬರುತ್ತಿರುವಾಗ ಒಮ್ಮಲೆ ಬ್ರೇಕ್ ಹಾಕಿದಾಗ ಮೋಟಾರ ಸೈಕಲ್ ಸ್ಕೀಡಾಗಿ ಕೆಳಗೆ ಬಿದ್ದಾಗ ಇದರಿಂದ  ತನೆಗೆ ತಲೆಗೆ ಮುಖಕ್ಕೆ, ಎದೆಗೆ ಭಾರಿ ಪೆಟ್ಟಾಗಿರುತ್ತದೆ , ಮತ್ತು ಶಾರದಬಾಯಿ ಗಂಡ ಬಸವರಾಜ ಪೊಲೀಸ್ ಗೌಡ ಇವಳಿಗೆ ಬಲಕಣ್ಣಿ ಪಕ್ಕದಲ್ಲಿ ಬಾರಿ ರಕ್ತಗಾಯವಾಗಿರುತ್ತವೆ ಅಂತಾ ತಿಳಿಸಿದನು,ನನ್ನ ಗಂಡನಿಗೆ ತಲೆಗೆ ಎದೆಗೆಭಾರಿಪೆಟ್ಟಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ .ಎ.ಎಸ್.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಗುಣ ಮುಖನಾಗದ ಕಾರಣ ದಿನಾಂಕ.   25-3-2016 ರಂದು ಪುನಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಉಪಚಾರ ದಲ್ಲಿ ಗುಣ ಮುಖನಾಗದೆ ದಿನಾಂಕ.26-3-2016 ರಂದು 00-15 ಎ.ಎಂ.ಕ್ಕೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭುಲಿಂಗ ತಂದೆ ಸದಾಶಿವ ಗಳವೇರಿ ಸಾ|| ಕರಜಗಿ ಗ್ರಾಮ ಇವರು ಮಾಹಾರಾಷ್ಟ್ರದ ಪೂನಾದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಅಜ್ಜ ಕರಜಗಿ ಸೀಮಾಂತರದಲ್ಲಿ ಬರುವ ಹೊಲ ಸರ್ವೆ ನಂಬರ 242/2 ರಲ್ಲಿ 31 ಎಕರೆ 30 ಗುಂಟೆ ಹಾಗೂ ಸರ್ವೆ ನಂಬರ 241/1 ರಲ್ಲಿ 35 ಎಕರೆ 21 ಗುಂಟೆ ಇರುವ ಜಮೀನುಗಳ ವಿಷಯವಾಗಿ ನಮಗೂ ಮತ್ತು ನಮ್ಮ ತಂದೆಯ ಸೋದರ ಅತ್ತೆಯ ಮಕ್ಕಳಾದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಸಾ|| ಎಲ್ಲರೂ ಕರಜಗಿ ಗ್ರಾಮ ಇವರುಗಳಿಗೂ ತಕರಾರು ಇದ್ದು, ಸದರಿ ವಿಷಯವಾಗಿ ಅಫಜಲಪೂರ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ನಡೆದಿರುತ್ತದೆ. ನಾಳೆ ದಿನಾಂಕ 27-03-2016 ರಂದು ಕರಜಗಿ ಗ್ರಾಮದ ಶ್ರೀ ಯಲ್ಲಾಲಿಂಗ ದೇವರ ಜಾತ್ರೆ ಇದ್ದರಿಂದ ನಿನ್ನೆ ದಿನಾಂಕ 25-03-2016 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಆಯಿ ಮುತ್ಯಾನ ಊರಾದ ಸಾಲುಟಗಿ ಗ್ರಾಮದ ಮಲಕಪ್ಪ ತಂದೆ ಭಿಮಶಾ ಧನ್ನಿಂಗ್ರ ಇವರೊಂದಿಗೆ ಕರಜಗಿ ಗ್ರಾಮಕ್ಕೆ ಬಂದಿರುತ್ತೇನೆ. ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ಮತ್ತು ಸದರಿ ಮಲಕಪ್ಪ ಇಬ್ಬರು ಲಕ್ಷ್ಮೀ ಗುಡಿಗೆ ಕಾಯಿ ಒಡೆದುಕೊಂಡು ಬರಲು ಕರಜಗಿ ಗ್ರಾಮದ ಉಡಚಾಣ ರಸ್ತೆಗೆ ಇರುವ ಪೆಟ್ರೋಲ ಬಂಕ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ನಮ್ಮ ಜೋತೆಗೆ ಹೊಲದ ವಿಷಯವಾಗಿ ಜಗಳ ಮಾಡುತ್ತಿದ್ದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಇವರುಗಳು ನನ್ನ ಎದುರಿಗೆ ಬಂದು ಏನೋ ಬೋಸಡಿ ಮಗನೆ ಇಷ್ಟು ದಿನ ಊರ ಬಿಟ್ಟಿದಿ ಈಗ್ಯಾಕ ಬಂದಿ, ನಮ್ಮ ಜೋತೆನೆ ಕೋರ್ಟನಲ್ಲಿ ಕೇಸ್ ನಡೆಸ್ತಿ ಬೋಸಡಿ ಮಗನಾ ಅಂತಾ ಹೊಲಸ ಹೊಲಸು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಕೋರ್ಟನಲ್ಲಿ ಕೇಸ್ ನಡೆದಾದ, ಕೋರ್ಟನಲ್ಲೆ ತಿರ್ಮಾನ ಆಗ್ಲಿ ಅಂತಾ ಹೇಳಿದೆನು, ಅದಕ್ಕೆ ಸದರಿಯವರು ಮಗನೆ ನಮಗೆ ತಿರುಗಿ ಮಾತಾಡ್ತಿ ಅಂತಾ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆಯುತ್ತಿದ್ದರು, ಹಣಮಂತ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಬಲಭಾಗಕ್ಕೆ ಹೊಡೆದನು, ಇದರಿಂದ ನನ್ನ ತಲೆಗೆ ರಕ್ತಗಾಯವಾಯಿತು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆ ಇದ್ದ ಮಲಕಪ್ಪ ಧನ್ನಿಂಗ್ರ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ಮಗನೆ ನೀನು ಊರಲ್ಲಿ ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಕಟ್ಟಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: