POLICE BHAVAN KALABURAGI

POLICE BHAVAN KALABURAGI

25 January 2016

Kalaburagi District Reported Crimes

ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುನೀತಾ ಗಂಡ ದಯಾನಂದ ಮೇಲಿನಕೇರಿ ಸಾ:ವಿಜಯನಗರ ಕಾಲೋನಿ ಕಲಬುರಗಿ ಇವರು ಮಗಳಾದ ಲಕ್ಷ್ಮಿ ಇವಳು ಮಹಾದೇವಿ (ಅಪ್ಪಾ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ದಿನಾಲೂ ಶಾಲೆಗೆ ಒಬ್ಬಳೇ ಹೋಗಿ ಬಂದು ಮಾಡುತ್ತಾಳೆ.ದಿನಾಂಕ 20-01-2016 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಲಕ್ಷ್ಮೀ ಇವಳು ಟಿವಿಷನಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ರಾತ್ರಿಯಾದರೂ ಮರಳಿ ಮನೆಗೆ ಬಂದಿರುವುದಿಲ್ಲ ಅಲ್ಲಿಂದ ಇಲ್ಲಿಯವರೆಗೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳು ಲಕ್ಷ್ಮೀ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕೆರ ತಂದೆ ನಾಗಣ್ಣ ಗಾಡಿ ಸಾ: ಮಾತೋಳಿ ಮತ್ತು ಅವನ ಗೆಳೆಯನಾದ ಸಚಿನ ತಂದೆ ವಿಶ್ವನಾಥ ಗೋಳಸಾರ ಸಾ: ಅತನೂರ ಇಬ್ಬರು ಕೂಡಿ ಮೋ/ಸೈ ನಂ ಕೆಎ-32 ಇಸಿ- 4263 ನೇದ್ದರ ಮೇಲೆ, ಸಚಿನ ಈತನ ಮೋ.ಸೈ ನಡೆಸಿಕೊಂಡು ಮಾತೋಳಿ ಗ್ರಾಮದಿಂದ ಘತ್ತರಗ ರೋಡಿಗೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದಕ್ಕೆ ಮೋ.ಸೈ ನಡೆಸುತ್ತಿದ್ದ ಸಚಿನ ಮತ್ತು ಶಂಕರ ಇಬ್ಬರು ಮೋ.ಸೈ ದೊಂದಿಗೆ ಬಿದ್ದಾಗ ಸಚೀನ ಈತನ ತಲೆಗೆ ಮತ್ತು ಮೈ ಕೈಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯ ಆಗಿರುತ್ತದೆ. ಘಟನೆ ಆದ ತಕ್ಷಣ ಟ್ಯಾಕ್ಟರ ಚಾಲಕ ಟ್ಯಾಕ್ಟರ ತಗೆದುಕೊಂಡು ಓಡಿ ಹೋಗಿರುತ್ತಾನೆ. ಸದರಿ ಟ್ಯಾಕ್ಟರ ನಂ ಹಾಗೂ ಚಾಲಕನ ಬಗ್ಗೆ ಗೊತ್ತಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: