POLICE BHAVAN KALABURAGI

POLICE BHAVAN KALABURAGI

01 December 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಡಾ:ಚಂದ್ರಕಲಾ ಗಂಡ ಶ್ರೀನಿವಾಸರಾವ ಬನ್ನೂರಕರ  ಉ: ಬಿ.ಎ.ಎಂ.ಎಸ್. (ಎಂ.ಎಸ್.) ಡಾಕ್ಟರ ವೃತ್ತಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ ರವರಿಗೆ ದಿನಾಂಕ 6-2-2013 ರಂದು ಕಲಬುರಗಿ ನಗರದ ಬಿದ್ದಾಪೂರ ಕಾಲನಿ ರಾಣಪ್ಪ ಬನ್ನೂರಕರ ಇವರ ಮಗನಾದ ಡಾ:ಶ್ರೀನಿವಾಸ ಇತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ ವರಉಪಚಾರಕ್ಕೆಂದು 8 ತೊಲೆ ಬಂಗಾರ ಮತ್ತು 1 ಲಕ್ಷ ರೂಪಾಯಿ ಕೊಟ್ಟಿದ್ದು  ಹಾಗೂ ಲಗ್ನಕ್ಕೆ ಬೇಕಾಗುವ ಸಾಮಾನುಗಳನ್ನು ಕೊಟ್ಟು ಕಲಬುರಗಿ ನಗರದ ಕೋಠಾರಿ ಭವನದಲ್ಲಿ ಮದುವೆ ಮಾಡಿದ್ದು, ಮದುವೆಯಾದ 2-3 ತಿಂಗಳ ವರೆಗೆ  ನನ್ನ ಗಂಡ ಶ್ರೀನಿವಾಸರಾವ ತಂದೆ ರಾಣಪ್ಪ ಬನ್ನೂರಕರ  ಅತ್ತೆ ಸುಲೋಚನಾ ಗಂಡ ರಾಣಪ್ಪ ಬನ್ನೂರಕರ  ಮಾವ ರಾಣಪ್ಪ ತಂದೆ ಶರಣಪ್ಪ ಬನ್ನುರಕರ ಇವರೆಲ್ಲರೂ ಸರಿಯಾಗಿ ನೋಡಿಕೊಂಡು ನಂತರ ನನ್ನ ಗಂಡ  ಅತ್ತೆ, ಮಾವ ಹಾಗೂ ನಾದಿನಿಯರಾದ ಲಲಿತಾ ಗಂಡ ಮೋಹನಚಂದ್ರ ಸುತಾರ ಸಾ:ಬಿದ್ದಾಪೂರ ಕಾಲನಿ ಕಲಬುರಗಿ, ಸುಧಾ ಗಂಡ ಸಂತೋಷ ಗೊರಟಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ, ಸುನಿತಾ ಗಂಡ ಶರಣಬಸಪ್ಪ ಹೋಳಕರ ಸಾ: ಬಿದ್ದಾಪೂರ ಕಾಲನಿ ಕಲಬುರಗಿ ಇವರೆಲ್ಲರೂ ನನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಮತ್ತು ನಾನು ಈ ಹಿಂದೆ ವಿದ್ಯಾಭ್ಯಾಸ ಮಾಡುವ ಕಾಲಕ್ಕೆ ಸರಕಾರದಿಂದ ಬರುತ್ತಿದ್ದ ಸೈಫಂಡರ್ಸ (ಶಿಷ್ಯ ವೇತನ) ತಿಂಗಳ 25,000/-ರೂ. ಕೊಡುವಂತೆ ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಈ ಹಿಂದೆ ಅಂದರೆ ನನ್ನ ಮದುವೆಕ್ಕಿಂತ ಮುಂಚಿತವಾಗಿ ನನ್ನ ಹತ್ತಿರ ಇದ್ದ ಶಿಷ್ಯ ವೇತನದ  ಜಮಾ ಇದ್ದ ಸುಮಾರು 1,50,000 ರೂ. ಹಣ ಸಹಾ ನನ್ನ ಗಂಡ ಪಡೆದುಕೊಂಡಿರುತ್ತಾರೆ. ನಾನು ಈಗ ಸುಮಾರು 10 ತಿಂಗಳಿಂದ ಕಲಬುರಗಿ ನಗರದ ಹಿಂಗುಲಾಂಬಿಕಾ ಆರ್ಯುವೇದಿಕ ಮೆಡಿಕಲ ಕಾಲೇಜನಲ್ಲಿ ಸಹಾಯಕಿ ಉಪನ್ಯಾಸಕಿ ಅಂತಾ  ಕೆಲಸಕ್ಕೆ ಹೋಗುತ್ತಿದ್ದು, ನನಗೆ ಪ್ರತಿ ತಿಂಗಳು 14,500 ರೂ. ಸಂಬಳ ಕೊಡುತ್ತಿದ್ದಾರೆ ಸದರಿ ಸಂಬಳವು ಸಹ ನನ್ನ ಗಂಡ ಮನೆಯವರು  ತೆಗೆದುಕೊಳ್ಳುತ್ತಿದ್ದು ನಾನು ಎನಾದರು ಕೇಳಿದರೆ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರಂಡಿ ನೀನು ನಾವು ಹೇಳಿದ ಹಾಗೇ ಕೇಳಬೇಕು ಅಂತಾ ನನ್ನ ವೃತ್ತಿ ಕೆಲಸಕ್ಕೆ  ಕಳಹಿಸದೇ ಕೆಲಸ ಮಾಡು ಅಂತಾ ಹೊಡೆ ಬಡಿ ಮಾಡಿ  ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು , ದಿನಾಂಕ. 15-11-2015 ರಂದು 5-00 ಪಿ.ಎಂ.ಕ್ಕೆ ಬಿದ್ದಾಪುರ ಕಾಲೂನಿಯ ಮನೆಯಲ್ಲಿ ಫಿರ್ಯಾದಿದಾರಳ ಗಂಡ ಡಾ;ಶ್ರಿನಿವಾಸ , ಅತ್ತೆಸುಲೋಚನಾ , ಮಾವ ರಾಣಪ್ಪಾ , ನಾದನಿಯರಾದ ಲಲಿತಾ , ಸುಧಾ , ಸುನೀತಾ  ಎಲ್ಲರೂ ಕೂಡಿಕೊಂಡು   ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೆ  ಇನ್ನೂ ವರದಕ್ಷಣೀ ರೂಪದಲ್ಲಿ ಹಣ , ಬಂಗಾರ ಮತ್ತು ಕಾರ ತೆಗೆದುಕೊಂಡು ಬಾ ಎಂದು ಎಲ್ಲರೂ ಜಗಳ ತೆಗೆದು ನನಗೆ ಹೊಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ  ದಿನಾಂಕ 15-11-2015 ರಂದು ನನ್ನ ಗಂಡ ಮತ್ತು ಮನೆಯವರೆಲ್ಲರೂ ಕೂಡಿ ನನಗೆ ಹೊಡೆ ಬಡಿಮಾಡಿದಕ್ಕೆ  ನನಗೆ ಮನಸಿನ ಮೇಲೆ ಆಘಾತವಾಗಿದಕ್ಕೆ  ಸರಿಯಾಗಿ ಫಿರ್ಯಾದಿ ನೀಡಲು ಆಗಿರುವದಿಲ್ಲಾ . ಅಲ್ಲದೆ  ನನ್ನ ಮಾವ ರಾಣಪ್ಪಾ ಇವರು ನನಗೆ ರಂಡಿ ನಮ್ಮ ಮನೆಯು ನಿನಗೆ ಲಾಡ್ಜ, ಬೋರ್ಡಿಂಗ ಮಾಡರುವದು ನಿನು ನಮ್ಮ ಮನೆಗೆ ಬಂದು ಆರಾಮ ಇರುವದಕ್ಕೆ ಕಟ್ಟಿರುವದಿಲ್ಲಾ ಮನೆಯಲ್ಲಿರುವ ನೀನು ಕೂಡಾ ಪ್ರತಿತಿಂಗಳ ಸಂಬಳ ನನ್ನ ಕೈಯಲ್ಲಿ ಕೊಡಬೇಕು ಎಂದು  ಹಿಂಸೆ ಕೋಡುತ್ತಾ ಬಂದಿರುತ್ತಾರೆ, ಅಲ್ಲದೆ ಜುಲೈ 2015 ತಿಂಗಳಲ್ಲಿ ನನ್ನ ಅಕೌಂಟನಲ್ಲಿದ್ದ  ಹಣವನ್ನು ಕೂಡಾ ತೆಗೆದುಕೊಂಡಿರುತ್ತಾರೆ, ಆದರೆ ನನ್ನ ಗಂಡ ಶ್ರೀನಿವಾಸ, ಅತ್ತೆ ಸುಲೋಚನಾ, ಮಾವ ರಾಣಪ್ಪ, ನಾದಿನಿಯರಾದ ಲಲಿತಾ, ಸುಧಾ ಎಲ್ಲರೂ ಕೂಡಿಕೊಂಡು  ಕಳೆದ 1 ವರ್ಷದಿಂದ ನನಗೆ ರಂಡಿ ಮದುವೆ ಕಾಲಕ್ಕೆ ವರದಕ್ಷಿಣೆ ಕೊಟ್ಟಿರುವದಿಲ್ಲಾ ನಿನಗೆ ಬಿಟ್ಟರೆ ಬಹಳಷ್ಟು ವರದಕ್ಷಿಣೆ ಕೋಡುತ್ತಿದ್ದರು ಈಗ ನಿಮ್ಮ ತಾಯಿಯಿಂದ 5 ಲಕ್ಷ ರೂಪಾಯಿ ಒಂದು ಕಾರು  ಹಾಗೂ ಒಂದು ಡೈನಿಂಗ ಟೇಬಲ್ ಮತ್ತು 5 ತೊಲೆಬಂಗಾರ ವರದಕ್ಷಣೆ ರೂಪದಲ್ಲಿ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿರಬೇಕು ಇಲ್ಲದಿದ್ದರೆ ಈ ಮನೆಯಲ್ಲಿ ನಿನಗೆ ಜಾಗ ಇಲ್ಲಾ ಎಂದು ನನಗೆ ಹೊಡೆ ಬಡಿ ಮಾಡುತ್ತಾ  ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ ಸಾ:ವಿದ್ಯಾನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಸಂಡಾಸಕ್ಕೆ ಕಟ್ಟಿಗೆ ಅಡ್ಡಾದ ಹತ್ತಿರ ನಮ್ಮೂರ ರಾಜು ತಂದೆ ಹಣಮಂತ ದ್ಯಾಗಾಯಿ ಇವನ ತಮ್ಮ ರವಿ ದ್ಯಾಗಾಯಿ ಅಕ್ಕನ ಮಗ ಅವಿನಾಶ, ಕೆಕೆ ನಗರದ ಆನಂದ ಸೂಗುರ, ಪಾಂಡು ಭಾಂಡೆದ ಇವರೆಲ್ಲರೂ ಕುಳಿತ್ತಿದ್ದರು. ನಾನು ಸಂಡಾಸ ಮಾಡಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಅಡ್ಡಾದ ಹತ್ತಿರ ಕುಳಿತ್ತಿದ್ದ ರಾಜು ದ್ಯಾಗಾಯಿ ಇವನು ಅವನ ಸಂಗಡ ಕುಳಿತ್ತಿದ್ದವರು ನಾನು ಬರುವುದು ಹೇಳಿ ಅಲ್ಲಿಂದ ಎದ್ದು ಸ್ವಲ್ಪ ದೂರದಲ್ಲಿ ಹೋಗಿ ನಿಂತನು ಮನೆಯ ಕಡೆಗೆ ಹೋಗುತ್ತಿರುವನಿಗೆ ರಾಜುನ ತಮ್ಮ ರವಿ ದ್ಯಾಗಾಯಿ ಕರೆದನು ನಾನು ಅವರಲ್ಲಿಗೆ ಹೋದ ಕೂಡಲೇ ಎಲ್ಲರೂ ಕೂಡಿ ನನ್ನ ಸಂಗಡ ತೆಕ್ಕಿಗೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಎಳೆದಾಡುತ್ತಾ ಹೊಡೆಯುತ್ತಾ ಕಮಿಟಿ ಹಾಲದ ಕಪೌಂಡ ಒಳಗೆ ಎಳೆದುಕೊಂಡು ಹೋಗುತ್ತಿದ್ದರು ರಾಜು ದ್ಯಾಗಾಯಿ ಬೀಡಬೇಡಿರಿ ಅವನಿಗೆ ಖೂನಿ ಮಾಡಿಯೇ ಬಿಡಿರಿ ಎಂದು ಹೇಳತ್ತಿದ್ದನು ಇವರೆಲ್ಲರೂ ನನ್ನನ್ನು ಕಮಿಟಿ ಹಾಲಿನಲ್ಲಿ ಖೂನಿ ಮಾಡುತ್ತೇವೆ ಭೋಸಡಿ ಮಗನಿಗೆ ನಿನ್ನೆಗೆ ಬೀಡಿವುದಿಲ್ಲಾ ಎಳೆದುಕೊಂಡು ಹೋಗುತ್ತಿದ್ದಾಗ ಅವರಿಂದ ಬಿಡಿಸಿ ಕೊಂಡು ನಾನು ನನ್ನ ಮನೆಗೆ ಓಡಿ ಬಂದೇನು ಆವಾಗ ರಾತ್ರಿ ಅಂದಾಜು ಒಂದು ಗಂಟೆ ಆಗಿರಬಹುದು.ನಾನು ಮನೆಗೆ ಓಡಿ ಬಂದ ಕೂಡಲೇ ಸದರಿಯವರೆಲ್ಲರೂ ನನ್ನ ಹಿಂದೆಯೇ ಮನೆಗೆ ಬಂದು ಮನೆಯಲ್ಲಿದ್ದವನನ್ನು ಏಳದಾಡಿ ಹೊಲಸು ಶಬ್ದದಿಂದ ಬೈಯ್ಯತ್ತಾ ಕಲ್ಲು ಮನೆಯ ಮೇಲೆ ಹೊಡೆದರು ಹೆಣ್ಣು ಮಕ್ಕಳು ನಮ್ಮ ಅಣ್ಣನು ಕುಪೇಂದ್ರ ಎಲ್ಲರೂ ಬಂದ ಕೂಡಲೇ ಮನೆಯ ಮುಂದಿನಿಂದ ಹೋದರು  , ಸದರಿಯವರು ನನಗೆ ಮುಖದ ಮೇಲೆ ಬಾಯಿಯ ಮೇಲೆ ಹೊಡೆದಿದ್ದರಿಂದ ತುಟಿಗೆಗಳಿಗೆ ಪೆಟ್ಟು ಆಗಿ ರಕ್ತ ಬಂದು ಬಾವು ಬಂದಿರುತ್ತದೆ ಮತ್ತು ಗುಪ್ತ ಪೆಟ್ಟು ಆಗಿರುತ್ತದೆ, ಸದರಿಯವರು ಕಪನೂರ ಸಿಮಾಂತರದಲ್ಲಿರುವ  ಹೊಲಾ ಸರ್ವೆ ನಂ 56/1 ನೇದ್ದರ ಬಗ್ಗೆ ನಮ್ಮ ಅಣ್ಣನಿಗೂ ಅವರಿಗು ಕೇಸ ನಡೆದಿರುತ್ತದೆ ಅಣ್ಣನಿಗೆ ಇವನೇ ಸಹಾಯ ಮಾಡುತ್ತಿದ್ದಾನೆ ಎಂದು ಎಳೆದುಕೊಂಡು ನನಗೆ ಕೊಲೆ ಮಾಡಲು ಪ್ರಯತ್ನಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಆನಂದ ತಂದೆ ಮಲ್ಲಪ್ಪ ಸೂಗುರ ಸಾ:ಕೆಕೆ ನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯದಿ ಹಾಗು ಗಾಯಾಳು ರವಿಂದ್ರ ತಂದೆ ಹಣಮಂತ ದ್ಯಾಗಾಯಿ ಹಾಗು ಅವಿನಾಶ ಚಿಂಚೋಳಿ ಎಲ್ಲರೂ ಕಪನೂರದ ಹರಿಜನವಾಡಾದ ಕಮಿಟಿ ಹಾಲದಲ್ಲಿ ಕುಳಿತುರುವಾಗ ಆಗ ಅದೇ ಸಮಯಕ್ಕೆ ನಮ್ಮ ಪೈಕಿಯವರಾದ 1) ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ, 2) ಕುಪೇಂದ್ರ ತಂದೆ ಮಲ್ಲೇಶಪ್ಪ ಶಿವಕೇರಿ, 3) ರೇಖಾ ಗಂಡ ಚಂದ್ರಕಾಂತ ಶಿವಕೇರಿ, 4) ರವಿ ತಂದೆ ಕುಪೇಂದ್ರ ಶಿವಕೇರಿ 5) ಶಿವಕುಮಾರ ತಂದೆ ಕುಪೇಂದ್ರ ಶಿವಕೇರಿ 6) ವಿನೋದ ತಂದೆ ಕುಪೇಂದ್ರ ಶಿವಕೇರಿ 7) ಸುರೇಶ ತಂದೆ ದೇವಿಂದ್ರಪ್ಪ ಶಿವಕೇರಿ 8) ಅನ್ನಪೂರ್ಣ ಗಂಡ ಹಣಮಂತ ಶಿವಕೇರಿ ಸಾ:ಎಲ್ಲರೂ ಕಪನೂರ ಇವರೆಲ್ಲರೂ ಕಪನೂರ ಸಿಮಾಂತರದ ಹೋಲಾ ಸರ್ವೆ ನಂ 56/1 ಹಾಗು ರೇಶನ ಹಂಚುವ ವಿಷಯದ ಸಂಬಂದ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಬ್ಬಿಣದ ರಾಡ, ಕಲ್ಲು ಚಾಕು ಹಿಡಿದುಕೊಂಡು ಬಂದವರೇ ಫಿರ್ಯಾದಿಗೆ ಹಾಗು ಗಾಯಾಳುದಾರನಾದ ರವಿಂದ್ರ ದ್ಯಾಗಾಂವ ಇಬ್ಬರಿಗೆ ಹೊಡೆದು ಭಾರಿ ಮತ್ತು ಸಾದಾ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 30/11/2015 ರಂದು ಬೆಳಿಗ್ಗೆ ಶ್ರೀ ಹುಚ್ಚಪ್ಪ ತಂದೆ ಭೀಮಣ್ಣ ನಾಯಿಕೊಡಿ ಸಾ ಉಡಚಣ ರವರು ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಮೊಟಾರ ಸೈಕಲ್ ನಂ. ಕೆಎ32 ಇಇ-9674 ನೇದ್ದರ ಚಾಲಕನಾದ ಸಾಯಿಬಣ್ಣ ಜಮಾದಾರ ಮತ್ತು ಅವನ ಬೈಕೆ ಮೇಲೆ ಕುಳಿತ ಇನ್ನು ಒಬ್ಬ, ಇಬ್ಬರು ಸೇರಿಕೊಂಡು ತಮ್ಮ ಮೊಟಾರ ಸೈಕಲ್ ನೇದ್ದನ್ನು ನಮ್ಮ ಸರಕಾರಿ ಬಸ್ಸಿನ ಮುಂದೆ ನಿಲ್ಲಿಸಿ ಸರಕಾರಿ ಕೆಲಸಕ್ಕೆ ಅಡತಡೆ ಮಾಡಿ ಸರಕಾರಿ ಕೆಲಸದ ಮೇಲಿರುವ ನನಗೆ ಮುಂದೆ ಹೊಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಮತ್ತು ಕಾಲಿನಿಂದ ಒದ್ದು ನೋವುಂಟು ಮಾಡಿ ಜೀವ ಭಯ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಮಹ್ಮದ ಶೇಖ ಈತನು ತನ್ನ ಆಟೋರೀಕ್ಷಾ ನಂ: ಕೆಎ 32 8868 ನೇದ್ದರಲ್ಲಿ ಮೃತ ಹಸೀನಾಬೇಗಂ ಗಂಡ ಸಲೀಮಶೇಖ ಹಾಗೂ ಅವಳ ಮಗ ಸೋಹೇಲ್ ಇವರಿಗೆ ಕೂಡಿಸಿಕೊಂಡು ಮದುವೆಯ ಆಮಂತ್ರಣ ಪತ್ರ ಕೊಡಲು ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು ಮರಳಿ ಮನೆಯ ಕಡೆಗೆ ಬರುವಾಗ ತನ್ನ ಆಟೋವನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ಪೀರ ಬಂಗಾಲಿ ದರ್ಗಾದ ಎದುರುಗಡೆ ಬಂದಾಗ ಒಂದು ನಾಯಿ ಅಡ್ಡ ಬರಲು ತಪ್ಪಿಸಲು ಹೋಗಿ ವೇಗದಲ್ಲಿದ್ದ ಆಟೋವನ್ನು ಬಲಕ್ಕೆ ತಿರುಗಿಸಿದಾಗ ವೇಗದ ನಿಯಂತ್ರಣ ತಪ್ಪಿ ಆಟೋ ಪ್ಲಟಿಯಾಗಿ ರೋಡಿನ ಮೇಲೆ ಬಿದ್ದಾಗ ಒಳಗೆ ಕುಳಿತ ಹಸೀನಾ ಬೇಗಂ ಇವಳಿಗೆ ಬಲಗೈ ಮುಂಗೈ ಮೇಲೆ, ಬಲಗೈ ಮೊಣಕಟ್ಟಿಗೆ ಹಣೆಗೆ, ಬಲಗಾಲ ಮೊಳಕಾಲಿಗೆ, ತಲೆಗೆ ಭಾರಿ ಪೆಟ್ಟಾಗಿದ್ದು, ಮಗ ಸೊಹೇಲ್ ಹಾಗೂ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಹಸೀನಾ ಬೇಗಂ ಇವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿ ಆಗದೆ ಬೆಳಿಗ್ಗೆ 10:38 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಮಹ್ಮದಶೇಖ ತಂದೆ ಜಾವೀದ ಶೇಖ ಆಟೋ ನಂ-ಕೆಎ32 8868ನೇದ್ದರ ಚಾಲಕ ಸಾ|| ಉಮರ ಕಾಲೋನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ನನ್ನ ಕಾಕನ ಮಗಳ ಲಗ್ನವಿದ್ದ ಪ್ರಯುಕ್ತ ಲಗ್ನ ಪತ್ರಿಕೆಯನ್ನು ಸಂಬಂದಿಕರಿಗೆ ಹಂಚಿಕೆ ಮಾಡಲು ನನ್ನ ಗಂಡ ವಿರೇಶ ಇವರು ನಿನ್ನೆ ದಿನಾಂಕ-29/11/2015 ರಂದು ನಮ್ಮ ಸಂಭಂದಿಕರಾದ ರಾಮಯ್ಯಾ ಇವರ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದನ್ನು ಪಿ.ಎಮ್ ಕ್ಕೆ ತೆಗೆದುಕೊಂಡು ಕಲಬುರಗಿಗೆ ಹಾಗೂ ಇತರ ಕಡೆಗೆ ಹಂಚಿ ಬರುವುದಾಗಿ ಹೇಳಿ ಹೋದನು. ನಂತರ ಸಾಯಾಂಕಾಲ 6-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ನಮ್ಮೂರಿನ ಕಾಶಪ್ಪಾ ಇವರು ಫೋನ್ ಮಾಡಿ ತಿಳಿಸಿದೆನೆಂದರೆನಾನು ಸೇಡಂದಿಂದ ಟೆಂಗಳಿ ಕ್ರಾಸ್ ಗೆ ಹೋಗುತ್ತಿರುವಾಗ ಪಿ.ಎಮ್ ದ ಸುಮಾರಿಗೆ ಮಲಕೂಡ ಕ್ರಾಸ್ ದಾಟಿ ಸ್ವಲ್ಪ ದೂರದಲ್ಲಿ ರಾಜ್ಯ ರಸ್ತೆ ಹೆದ್ದಾರಿ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು  ಮೋಟಾರ ಸೈಕಲ ಸಮೇತ ರೊಡಿನ ಮೇಲೆ ಬಿದಿದ್ದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ವಿರೇಶ ಮಠ ಅಂತಾ ಗುರ್ತಿಸಿದ್ದು ಸದರಿಯವನಿಗೆ ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿರುತ್ತಾನೆ ಆತನಿಗೆ ಜಿ.ವ್ಹಿ.ಆರ್ ಅಂಬುಲೈನ್ಸ್ ನಲ್ಲಿ ಹಾಕಿಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರಗೆ ಕಳುಹಿಸಿಕೊಟ್ಟಿರುತ್ತೇನೆ ತಾವು ಹೋಗಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನಮ್ಮ ದೂರಿನ ಸಂಭಂದಿಕರಾದ ಕಲ್ಲಯಾ ಇವರಿಗೆ ಪೋನ್ ಮಾಡಿ ಕಲಬುರಗಿಗೆಯ ಯುನೈಟೇಡ ಆಸ್ಪತ್ರೆಗೆ ಬರಲು ತಿಳಿಸಿ ನಾವು ಊರಿನಿಂದ ನಮ್ಮ ಅತ್ತೆ ಇಬ್ಬರೂ ರಾತ್ರಿ 8-30 ಪಿ.ಎಮ್ ದ ಸುಮಾರಿಗೆ ಕಲಬುರಗಿಗೆ ಬಂದಾಗ ಕಲ್ಲಯಾ ಇವರೂ ಸಹ ಬಂದಿದ್ದು ನಾವು ಜನ ಕೂಡಿ ನನ್ನ ಗಂಡನ ಹತ್ತಿರ ಹೋಗಿ ನೋಡಲು ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿದ್ದು ಬ್ಯಾಂಡೆಜ್ ಹಚ್ಚಿರುತ್ತಾರೆ ಮಾತನಾಡುವ ಸ್ಥಿತ್ತಿಯಲ್ಲಿರಲ್ಲಿಲ್ಲಾ ನನ್ನ ಗಂಡ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ-30/11/2015 ರಂದು ಬೆಳಿಗ್ಗೆಗ ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ.   ಕಾರಣ ನಿನ್ನೆ ದಿನಾಂಕ-29/11/2015 ರಂದು ಸಾಯಂಕಾಲ ಗಂಟೆ ಸುಮಾರಿಗೆ ನನ್ನ ಗಂಡ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದರ ಮೇಲೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಊರಿಗೆ ಬರುವಾಗ ಮೋಟರ ಸೈಕಲ ಸಮೇತ ರೊಡಿನ ಕೆಳಗೆ ಬಿದ್ದು ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿದ್ದು ಯುನೈಟೇಡ ಆಸ್ಪತ್ರೆಯಲ್ಲಿ ಉಪಚಾರ ಹೊಂದದೆ ದಿನಾಂಕ-30/11/2015 ರಂದು ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಕಾವೇರಿ ಗಂಡ ವರೇಶ ಮಠ ಸಾ : ಸೇಟ್ಟಿ ಹೂಡಾ ತಾ : ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರ5ಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರಾವುತಪ್ಪ ಅಮ್ಮಣ್ಣಿ ಸಾ ಘತ್ತರಗಾ . ರವರ  ಹಿರೋ ಸ್ಪೇಂಡರ ಪ್ರೋ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಕೆ-3458 ಅಂತಾ ಇರುತ್ತದೆ, ಚೆಸ್ಸಿ ನಂಬರ:- MBLHA10BFFHF07053 ಇಂಜೆನ ನಂಬರ:- HA10ERFH14096 ಅಂತಾ ಇದ್ದು, ಅಂದಾಜು 35,000/- ರೂ ಕಿಮ್ಮತ್ತಿನದ್ದನ್ನು ದಿನಾಂಕ 19-11-2015 ರಂದು 9;00 ಪಿ.ಎಂ ಸುಮಾರಿಗೆ ನಾನು ನಮ್ಮ ಹೊಲದಿಂದ ಮನೆಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟರ ಸೈಕಲ್ ನಿಲ್ಲಿಸಿದ್ದು ನಂತರ 20-11-2015 ರಂದು ಬೆಳಗಿನ ಜಾವ 04:00 ಗಂಟೆಗೆ ಏಕಿ ಮಾಡಲು ಮನೆಯಿಂದ ಹೊರಗಡೆ ಬಂದು ನನ್ನ ಮೋಟರ ಸೈಕಲ್ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಸದರಿ ನನ್ನ ಮೋಟಾರ ಸೈಕಲನ್ನು ಕಳ್ಳತನವಾದ ದಿನದಿಂದ ನಾನು ಮತ್ತು ನಮ್ಮ ಗ್ರಾಮ ಮಹೀಬೂಬ ಪಟೆಲ ಹಾಗೂ ಸಂಗಯ್ಯ ತಂದೆ ಸಿದ್ದಯ್ಯ ಮಠಪತಿ  ರವರು ಕೂಡಿ ಜೆರಟಗಿ, ಮೋಟಗಿ,ಚವಡಾಪೂರ ಮತ್ತು ಅಫಜಲಪೂರ ಪಟ್ಟಣದಲ್ಲಿ ಎಲ್ಲಾಕಡೆ ಹುಡಕಾಡಿದರು ಕಳತನವಾದ ನಮ್ಮ ಮೋಟರ ಸೈಕಲ್ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: