POLICE BHAVAN KALABURAGI

POLICE BHAVAN KALABURAGI

09 November 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 08.11.2015 ರಂದು ಮಧ್ಯಾಹ್ನ ಚೌಕ ಠಾಣಾ ವ್ಯಾಪ್ತಿಯ ಲಾರಿ ತಂಗುದಾಣದ ಹತ್ತಿರ ಇರುವ ಸಾಲಕ್ಕಿ ಟ್ರಾನ್ಸಪೋರ್ಟದ ಎದುರಗಡೆ ಇರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಚೌಕ ರವರು ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ  ಬಾತ್ಮಿಯಂತೆ ಲಾರಿ ತಂಗುದಾಣದ ಹತ್ತಿರ ಹೋಗಿ ಸಾಲಕ್ಕಿ ಟ್ರಾನ್ಸಪೊರ್ಟ ಹತ್ತಿರ ಮರೆಯಲ್ಲಿ ನಿಂತು ನೋಡಲು ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10-12 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 10 ಜನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರಿಸಲು  ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲು 1) ರೇವಪ್ಪಾ ತಂದೆ ಹನುಮಂತಪ್ಪಾ ಚಿಟಗುಪ್ಪಾ ಸಾ: ತಾಜ ಸುಲ್ತಾನಪೂರ ಕಲಬುರಗಿ 2) ಈರಣ್ಣ ತಂದೆ ಸೈಬಣ್ಣಾ ಜಮಾದಾರ  ಸಾ: ಶಿವಾಜಿ ನಗರ ಕಲಬುರಗಿ 3) ಈರಣ್ಣಾ ತಂದೆ ಪಂಡಿರರಾವ್ ಪಾಟಿಲ ಸಾ; ಯಳವಂತಗಿ ತಾ;ಜಿ  ಕಲಬುರಗಿ 4) ಶಿವರಾಜ ತಂದೆ ರಾಚಪ್ಪಾ ಹುನಗುಂದ ಸಾ: ಕೆ.ಕೆ ನಗರ ಕಲಬುರಗಿ 5) ಸಿದ್ದಣ್ಣಾ ತಂದೆ ಅಮರಪ್ಪಾ ಪಾಟೀಲ ಸಾಃ ಮರಗಮ್ಮ ಗುಡಿ ಹತ್ತಿರ ಶಹಾ ಬಜಾರ ಕಲಬುರಗಿ 6)  ಶ್ರೀಶೈಲ ತಂದೆ ಶರಣಪ್ಪಾ ಮಾದಪ್ಪನವರ ಸಾಃ ಮಹಾದೇವ ನಗರ ಶಹಾ ಬಜಾರ ಕಲಬುರಗಿ 7) ರಾಜು ತಂದೆ ಮಲ್ಲಿಕಾರ್ಜನ ಸಾಃ ಆಶ್ರಯ ಕಾಲೋನಿ ಆಟೋ ನಗರ ಕಲಬುರಗಿ 8) ನಾಗೇಶ ತಂದೆ ಶಿವಾಜಿ ಖಾಜಳೆ ಸಾಃ ಶಿವಾಜಿ ನಗರ ಕಲಬುರಗಿ 9) ನಾಗೇಂದ್ರ ತಂದೆ ಶಂಕರರಾವ್ ಖಾಜಳೆ ಸಾಃ ರೇವಣಸಿದೇಶ್ವರ ಕಾಲೋನಿ ಕೆ.ಕೆ ನಗರ ಕಲಬುರಗಿ 10) ರಾಜು ತಂದೆ ನಾಗೇಂದ್ರಪ್ಪಾ ದೇಗಾವ್ ಸಾಃ ರಾಮ ನಗರ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  43970 =00 ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಜೇವರ್ಗಿ ಠಾಣೆ : ಜೇವರ್ಗಿ ಠಾಣಾ ವ್ಯಾಪ್ತಿಯ ಕೋಳಕೂರ ಸೀಮಾಂತರದ ಭೀಮಾ ನದಿಯಲ್ಲಿ ಮರಳು ತುಂಬಿಕೊಂಡು ಸರಕಾರಕ್ಕೆ ರಾಜಧನ ಭರಿಸದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ ಬಸವರಾಜ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಕಲಬುರಗಿ ರವರು ದಿನಾಂಕ 08.11.2015 ರಂದು ಮುಂಜಾನೆ ಮನ್ನು ಜಾಗಿರದಾರ ಇವರ ಕಲ್ಯಾಣ ಮಂಟಪದ ಹತ್ತಿರ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಬರುತ್ತಿದ್ದ ಅಂ.ಕಿ 7.00.000/- ರೂ ಕಿಮ್ಮತ್ತಿನ ಮರಳು ತುಂಬಿದ ಟಿಪ್ಪರ್ ನಂ ಎಪಿ-29 ಯು-9464 ನೇದ್ದನ್ನು ಪಂಚರ ಸಮಕ್ಷಮದಲ್ಲಿ  ಜಪ್ತಿ ಮಾಡಿಕೊಂಡು ಸದರಿ ಮರಳು ತುಂಬಿದ ಟಿಪ್ಪರ್ ಮತ್ತು ಲಾರಿ ಚಾಲಕನ್ನು ಜೇವರ್ಗಿ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಸವಲಿಂಗ ತಂದೆ ಚಂದ್ರಾಮಪ್ಪ ಸಗರ ಸಾ : ಭಗವತಿ ನಗರ ಕಲಬುರಗಿ ಇವರು ತಮ್ಮ  ಸ್ವಂತ ಊರು ಜೇವರ್ಗಿ ಪಟ್ಟಣ ಇದ್ದು ನಾನು ಕಳೆದ 6 ತಿಂಗಳಿಂದ ಕಲಬುರಗಿ ನಗರದ ಭಗವತಿ ನಗರ ಬಡಾವಣೆಯ ಮಹಾದೇವಪ್ಪ ಪಾಟೀಲ್‌ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆನೆ. ದಿನಾಂಕ:6/11/2015 ರಂದು ಜೇವರ್ಗಿಯ ಮಹಾಲಕ್ಷ್ಮಿ ದೇವಿಯ ಜಾತ್ರೆ ಇರುವದರಿಂದ, ನಾನು ಮತ್ತು ನನ್ನ ಹೆಂಡತಿಯಾದ ರೇಣುಕಾ ಹಾಗೂ ನನ್ನ ಮಕ್ಕಳೊಂದಿಗೆ ಜಾತ್ರೆಗೆ ಹೋಗಿರುತ್ತೆವೆ. ಇಂದು ದಿನಾಂಕ:8/11/2015 ರಂದು ಬೆಳಗ್ಗೆ 6 ಗಂಟೆಗೆ ನಾನು ನನ್ನ ಹೆಂಡತಿ ಜೇವರ್ಗಿಯಲ್ಲಿರುವ ನಮ್ಮ ಮನೆಯಲ್ಲಿರುವಾಗ ಕಲಬುರಗಿಯಿಂದ ನಮ್ಮ ಮನೆಯ ಮಾಲಿಕರಾದ ಮಹಾದೇವಪ್ಪ ಪಾಟೀಲ್‌ ಇವರು ನನಗೆ ಫೊನ್‌ ಮಾಡಿ ತಿಳಿಸಿದ್ದೆನಂದರೆ, ನಾನು ಇಂದು ಬೆಳಗ್ಗೆ 5:45 ಗಂಟೆಗೆ ವಾಕಿಂಗ ಸಲುವಾಗಿ ಮನೆಯಿಂದ ಹೊರಗೆ ಬಂದಾಗ ಯಾರೋ ಕಳ್ಳರು ನಿಮ್ಮ ಮನೆಯ ಬಾಗಿಲು ಕೊಂಡಿ ಮುರಿದಿದ್ದು ಬಹುಷ ಮನೆಯಲ್ಲಿನ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರಬಹುದು ಆದ್ದರಿಂದ ನೀವು ತಕ್ಷಣ ಕಲಬುರಿಗಿಗೆ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ನಮ್ಮ ಮನೆಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲಿನ ಕೊಂಡಿ ಮುರಿದಿದ್ದು ನಾವು ಒಳಗೆ ಹೋಗಿ ನೋಡಲು ಬೆಡ್‌ ರೋಮಿನಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ನಾನು ಮತ್ತು ನನ್ನ ಹೆಂಡತಿ ಆಲಮಾರಿ ನೋಡಲು ಆಲಮಾರಿಯ ಬಾಗಿಲು ಮುರಿದಿದ್ದು ಅದರೊಳಗಡೆ ಇಟ್ಟಿದ್ದ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,89,000/-ನೇದ್ದವುಗಳನ್ನು ದಿನಾಂಕ:7/11/2015 ರಂದು ಅಂದಾಜು ರಾತ್ರಿ 11 ಗಂಟೆಯಿಂದ ಇಂದು ದಿನಾಂಕ:8/11/2015 ರ ಬೆಳಗಿನ ಜಾವಾ 5:45 ಗಂಟೆಯ ಅವದಿಯೋಳಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: