POLICE BHAVAN KALABURAGI

POLICE BHAVAN KALABURAGI

17 September 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಚನ್ನಮ್ಮ ಗಂಡ ರೇವಣಸಿದ್ದ ಮುರಚಾವರ ಸಾ : ಬಗಲೂರ ತಾ ಸಿಂದಗಿ ಜಿ: ಬಿಜಾಪೂರ ರವರ ಮಗಳಾದ ವಿದ್ಯಾಶ್ರೀ ಇವಳಿಗೆ ಈಗ ಒಂದು ವರೆ ವರ್ಷದ ಹಿಂದೆ ಅಫಜಲಪೂರ ತಾಲೂಕಿನ ಹಳ್ಯಾಳ ಗ್ರಾಮದ ನನ್ನ ಚಿಗವ್ವನ ಮೊಮ್ಮಗನಾದ ರಮೇಶ ತಂದೆ ಶಿವಶರಣಪ್ಪ ಹೇರೂರ ಈತನೊಂದಿಗೆ 2 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ಹಾಗೂ ಗೃಹ ಉಪಯೊಗಿ ವಸ್ತುಗಳನ್ನು ಕೊಟ್ಟು ನಮ್ಮ ಬಗಲೂರ ಗ್ರಾಮದ ಮುಕ್ತಾನಂದ ಮಠದಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ. ನನ್ನ ಮಗಳಾದ ವಿದ್ಯಾಶ್ರೀ ಇವಳ ಗಂಡನ ಮನೆಯಲ್ಲಿ ಅವಳ ಗಂಡ ರಮೇಶ ಮಾವ ಶಿವಶರಣಪ್ಪ, ನಾದನಿಯಾದ ಸವಿತಾ ಹಾಗೂ ಅವಳ ಗಂಡ ಶರಣಪ್ಪ ಹಾಗೂ ಅಜ್ಜಿ ಕಲ್ಲವ್ವ ಎಲ್ಲರೂ ಇರುತ್ತಿದ್ದರು, ನನ್ನ ಮಗಳ ನಾದನಿ ಸವಿತಾ ಇವಳಿಗೆ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಶರಣಪ್ಪ ತಂದೆ ಚನ್ನಬಸಪ್ಪ ಬಿಲ್ಲಾಡ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನನ್ನ ಮಗಳ ಅತ್ತೆ ತೀರಿಕೊಂಡ ನಂತರ ಸವಿತಾ ಇವಳು ತನ್ನ ಗಂಡನೊಂದಿಗೆ ತವರು ಮನೆ ಹಳ್ಯಾಳಕ್ಕೆ ಬಂದು ಅಲ್ಲಿಯೆ ವಾಸವಾಗಿರುತ್ತಾಳೆ. ನನ್ನ ಮಗಳಿಗೆ ಮದುವೆಯಾದ ಒಂದು ವರ್ಷದ ವರೆಗೆ ಅವಳ ಗಂಡ ಮತ್ತು ನಾದನಿ ಹಾಗೂ ಅವಳ ಗಂಡ ಮತ್ತು ಮಾವ ಎಲ್ಲರೂ ಚೆನ್ನಾಗಿ ನೋಡಿಕೊಂಡಿರುತ್ತಾರೆ. ತದನಂತರ ಎಲ್ಲರೂ ನನ್ನ ಮಗಳಿಗೆ ನೀನು ನಮಗ್ಯಾಕ ಮೂಲಾಗಿದಿ ನಿನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಬೈಯುವುದು ಹಾಗೂ ನನ್ನ ಮಗಳ ನಾದನಿ ಇವಳು ನನ್ನ ತಮ್ಮನ ಜೋತೆ ನಿನ್ನ ಮದುವೆ ಮಾಡದಿದ್ದರೆ ನನ್ನ ತಮ್ಮನಿಗೆ ಇನ್ನು ಜಾಸ್ತಿ ವರದಕ್ಷೀಣೆ ಕೋಡುತ್ತಿದ್ದರು ಅದಕ್ಕೆ ನೀನು ನಿನ್ನೆ ತಂದೆ ತಾಯಿಗೆ ಹೇಳಿ ಇನ್ನು ಒಂದು ಲಕ್ಷ ರೂಪಾಯಿ ಹಣ ಮತ್ತು ಬಂಗಾರ ತಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡುತ್ತಿದ್ದಾರೆ ಎಂದು ನನ್ನ ಮಗಳು ನಮ್ಮ ಮನೆಗೆ ಬಂದಾಗ ಹೇಳಿರುತ್ತಾಳೆ ಆಗ ನಾನು ಮತ್ತು ನನ್ನ ಗಂಡ ರೇವಣಸಿದ್ದ ಹಾಗೂ ನೆಂಟಸ್ಥನ ಮಾಡಿಸಿದ ನನ್ನ ಅಣ್ಣಂದಿರಾದ ಯಶವಂತ್ರಾಯ ಬಿರಾದಾರ, ಚನ್ನಬಸಪ್ಪ ಬಿರಾದಾರ  ಹಾಗೂ ಅಣ್ಣ ತಮ್ಮಕಿಯವರಾದ ಮುತ್ತಣ್ಣ ಬಿರಾದಾರ, ಎಲ್ಲರೂ ಕೂಡಿ ನನ್ನ ಮಗಳ ಗಂಡನ ಮನೆಗೆ ಹೋಗಿ 5-6 ಸಲ ನ್ಯಾಯ ಪಂಚಾಯತಿ ಮಾಡಿ, ನನ್ನ ಮಗಳಿಗೆ ಯಾವುದೆ ರೀತಿ ಹಿಂಶೆ ನೀಡಬೇಡಿ ಎಂದು ವಿನಂತಿಸಿಕೊಂಡಿರುತ್ತೇವೆ. ಆದರು ಸಹ ನನ್ನ ಮಗಳ ನಾದನಿ ಮತ್ತು ಅವಳ ಗಂಡ ಹಾಗೂ ಮಾವ, ನಾದನಿಯ ಗಂಡ ಇವರೆಲ್ಲರು ಕೂಡಿ ನನ್ನ ಮಗಳಿಗೆ ಬೈಯುವುದು ಹೊಡೆಯುವುದು ಮಾಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನಿಡುತ್ತಿದ್ದಾರೆ ಎಂದು ನನ್ನ ಮಗಳು ಈಗ ನಾಗರ ಪಂಚಮಿ ಹಬ್ಬಕ್ಕೆ ಊರಿಗೆ ಬಂದಾಗ ನಮಗೆ ತಿಳಿಸಿರುತ್ತಾಳೆ. ಈಗ 8 ದಿವಸದ ಹಿಂದೆ ನನ್ನ ಅಳಿಯ ರಮೇಶ ನಮ್ಮ ಊರಿಗೆ ಬಂದು ನನ್ನ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ.              ಇಂದು ದಿನಾಂಕ 16-09-2015 ರಂದು ಸಂಜೆ ಅಂದಾಜು 7:30 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಮತ್ತು ಮಕ್ಕಳು ಮನೆಯಲ್ಲಿದ್ದಾಗ ನಮ್ಮೂರಿನ ಜಗದೇವಪ್ಪ ಕುರನಳ್ಳಿ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗಳು ವಿದ್ಯಾಶ್ರೀ ತೀರಿಕೊಂಡಿದ್ದಾಳಂತ ಹಳ್ಯಾಳ ಗ್ರಾಮದಿಂದ ಯಾರೋ ಪೋನ ಮಾಡಿದ್ದಾರೆ ಅಂತಾ ತಿಳಿಸಿದ ಮೇರೆಗೆ ಕೆಲವು ಜನರು ಕೂಡಿಕೊಂಡು ಹಾಗೂ ದೇವರನಾವದಗಿಯಿಂದ ಬಂದ ನನ್ನ ಅಣ್ಣಂದಿರು ಹಾಗೂ ಇನ್ನು ಕೆಲವು ಜನರು ಮತ್ತು ಕುಮಸಗಿ ಗ್ರಾಮದ ನಮ್ಮ ಸಂಭಂದಿಕರು ಎಲ್ಲರೂ ಕೂಡಿ ಹಳ್ಯಾಳ ಗ್ರಾಮಕ್ಕೆ ಬಂದು ನನ್ನ ಮಗಳ ಗಂಡನ ಮನೆಗೆ ಹೋಗಿ ನೋಡಲು ಮನೆಯಲ್ಲಿ ಯಾರು ಇರಲಿಲ್ಲ, ನಂತರ ಮನೆಯ ಅಡುಗೆ ಮನೆಯಲ್ಲಿ ಹೋಗಿ ನೋಡಲು ನನ್ನ ಮಗಳ ಶವವು ಮನೆಯ ಆರ್.ಸಿ.ಸಿ ಚಾವಣಿಯ ಕೊಂಡಿಗೆ ಸೀರೆಯಿಂದ ನೇಣು ಹಾಕಿದ ಸ್ಥೀತಿಯಲ್ಲಿ ಇದ್ದಿತ್ತು, ಸಮೀಪದಿಂದ ನನ್ನ ಮಗಳ ಕುತ್ತಿಗೆಯನ್ನು ನೋಡಲು ಕುತ್ತಿಗೇಯ ಮೇಲೆ ಒತ್ತಿದ ಗುರುತು ಹಾಗೂ ಉಗುರಿನಿಂದ ಚೂರಿದ ಗಾಯಗಳು ಕಂಡು ಬಂದಿದ್ದು ನಾಲಿಗೆ ಹೊರಗೆ ಚಾಚಿ ನಾಲಿಗೆಗೆ ಗಾಯವಾಗಿದ್ದು 1) ರಮೇಶ ತಂದೆ ಶಿವಶರಣಪ್ಪ ಹೇರೂರ ಸಾ|| ಹಳ್ಯಾಳ 2) ಸವಿತಾ ಗಂಡ ಶರಣಪ್ಪ ಬಿಲ್ಲಾಡ ಸಾ|| ಕುಮಸಗಿ ತಾ|| ಸಿಂದಗಿ ಹಾ|| || ಹಳ್ಯಾಳ,   3) ಶರಣಪ್ಪ ತಂದೆ ಚನ್ನಬಸಪ್ಪ ಬಿಲ್ಲಾಡ ಸಾ|| ಕುಮಸಗಿ ತಾ|| ಸಿಂದಗಿ ಹಾ|| || ಹಳ್ಯಾಳ, 4) ಶಿವಶರಣಪ್ಪ ತಂದೆ ಶಾಂತಪ್ಪ ಹೇರೂರ ಸಾ|| ಹಳ್ಯಾಳ, 5) ಕಲ್ಲವ್ವ ಗಂಡ ಶಾಂತಪ್ಪ ಹೇರೂ ಸಾ|| ಹಳ್ಯಾಳ ಇವರುಗಳು ತವರು ಮನೆಯಿಂದ  ಒಂದು ಲಕ್ಷ ರೂಪಾಯಿ ಹಣ ಮತ್ತು ಬಂಗಾರ ತಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ನನ್ನ ಮಗಳು ಹಣ ತರಲು ಒಪ್ಪದಿದ್ದಕ್ಕೆ ಸದರಿಯವರೆಲ್ಲರು ಕೂಡಿ ದಿನಾಂಕ 16-09-2015 ರಂದು ಸಂಜೆ ಅಂದಾಜು 6:00 ಗಂಟೆಯಿಂದ 7:00 ಗಂಟೆಯ ಮದ್ಯದ ಅವದಿಯಲ್ಲಿ ಹಳ್ಯಾಳ ಗ್ರಾಮದ ನನ್ನ ಮಗಳ ಗಂಡನ ಮನೆಯ ಅಡುಗೆ ಮನೆಯಲ್ಲಿ ನನ್ನ ಮಗಳ ಕುತ್ತಿಗೆ ಒತ್ತಿ ಹೊಡೆದು ಕೊಲೆ ಮಾಡಿರುತ್ತಾರೆ. ನನ್ನ ಮಗಳ ಶವವು ಅವಳ ಗಂಡನ ಮನೆಯಲ್ಲಿ ನೇಣು ಹಾಕಿದ ಸ್ಥೀತಿಯಲ್ಲಿಯೆ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-15/09/2015 ರಂದು ಬೆಳ್ಳಿಗೆ 7 ಗಂಟೆಗಂಟೆಗೆ ಶ್ರೀಮತಿ ಶಾಂತಾಬಾಯಿ ಗಂಡ ಓಂಕಾರ ತಳವಾರ ಸಾ : ಮತ್ತಿಮೂಡ ತಾ : ಚಿತ್ತಾಪೂರ ರವರ ಮಗ ಮಹಾದೇವ ಇತನು ತನ್ನ ಮೋಟಾರ ಸೈಕಲ ನಂ KA-32 EG-9164 ನೇದ್ದು ತೆಗೆದುಕೊಂಡು ಕಲಬುರಗಿಗೆ ಸೆಟ್ರಿಂಗ್ ಕೆಲೆಸಕ್ಕೆ ಹೊಗಿ ಬರುವುದಾಗಿ ಹೇಳಿ ಹೋದನು ರಾತ್ರಿ 10-30 ಪಿ.ಎಮ್ ಕ್ಕೆ ಇಂಗಿನಕಲ್ ಗ್ರಾಮದ ವೀರಭದ್ರ ತಂದೆ ಭೀಮಾಶಂಕರ ಕಾಳಗಿ ಇವರು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ. ನಿನ್ನ ಮಗಾ ಮತ್ತಿಮೂಡದಿಂದ 1 ಕೆ.ಮಿ ಅಂತರದಲ್ಲಿ ತನ್ನ ಮೋಟಾರ ಸೈಕಲ ಸಮೇತ ರೋಡಿನ ಪಕ್ಕದಲ್ಲಿ ಬಿದ್ದಿರುತ್ತಾನೆ ಅಂತಾ ಹೇಳಿ ಹೋದರು ನಂತರ ನಾನು ಹಾಗೂ ನನ್ನ ಮಗಳಾದ ಶರಣಮ್ಮ ಹಾಗೂ ಹಣಮಂತ ತಟ್ಟಿನ 3 ಜನ ಸೇರಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ರೋಡಿನ ಪಕ್ಕದಲ್ಲಿ ಬಾಯಿಗೆ ಮೂಗಿಗೆ ರಕ್ತಗಾಯವಾಗಿ ಸತ್ತಂತೆ ಬಿದಿದ್ದು ಹಣಮಂತ ಇವರು ಜಿ.ವ್ಹಿ.ಆರ್ ಅಂಬುಲೈನ್ಸ್ ಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ನನ್ನ ಮಗನಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತರುವಾಗ ಮಾರ್ಗ ಮದ್ಯದಲ್ಲಿ ವೃತ್ತ ಪಟ್ಟಿದ್ದು ಇರುತ್ತದೆ. ನನ್ನ ಮಗ ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿ ಮೋಟರ ಸೈಕಲ ಸಮೇತ ಬಿದ್ದು ಮುಖಕ್ಕೆ , ಮೂಗಿಗೆ ರಕ್ತಗಾಯ ತೆಲೆಗೆ ಗುಪ್ತಗಾಯ ಹೊಂದಿ ವೃತ್ತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 13-09-15 ರಂದು ರಾತ್ರಿ ಶ್ರೀ ನಾಗಣ್ಣಾ ತಂದೆ ದೇವಿದಾಸ  ಸೋನಾರ  ಸಾ : ಚನ್ನವೀರ ನಗರ ಕಲಬುರಗಿ ರವರು ತನ್ನ ತಂಗಿ ಗಂಡ ರಾಮಚಂದ್ರ ಇವರಿಗೆ ತನ್ನ ಹಿರೋ ಹೊಂಡಾ ಸ್ಪೆಂಡರ ಕೆಎ 32  ಇಜಿ  2142 ಹಿಂದೆ ಕೂಡಿಸಿಕೊಂಡು ಶ್ರಾವಣ ಮಾಸದ ನಿಮಿತ್ಯ ಪ್ರತಿ ದಿನ ಊರ ಜನರು ಭಜನೆಗೆ ಹೊರಟಿದ್ದು, ರಾತ್ರಿ 9-30 ಗಂಟೆ ಸುಮಾರಿಗೆ ತಾಜ ಸುಲ್ತಾನಪೂರ ರೋಡಿಗೆ ಇವರು ಬಸವಣ್ಣ ಗುಡಿ ದಾಟಿ ಇರುವ  ಹೊಡ್ಡಿನ  ಮೇಲೆ ಬಂದಾಗ,  ಆಗ ಹಿಂದಿನಿಂದ ಒಂದು ಕಪ್ಪು ಬಣ್ಣದ ಹಿರೋ ಸ್ಪೆಂಡರ ಪ್ಲಸ್ ಮೋಟಾರ ಸೈಕಲ ಮೇಲೆ ಮೂರು ಜನರು ಕುಳಿತುಕೊಂಡು ಬಂದು ನನಗೆ ಸೈಡ ಹೊಡೆದು ನನ್ನ ಮುಂದೆ ಹಿರೋ ಸ್ಪೆಂಡರ ಪ್ಲಸ್ ಮೋಟಾರ ಸೈಕಲ ಅಡ್ಡಗಟ್ಟಿ ನಿಲ್ಲಿಸಿ, ಫಿರ್ಯಾದಿ ಮತ್ತು ರಾಮಚಂದ್ರ ಇವರಿಗೆ ಒಬ್ಬನು ಚಾಕು ತೋರಿಸಿ, ಅವರಿಬ್ಬರ ಹತ್ತಿರವಿದ್ದ ಎರಡು ಬೆಳ್ಳಿ ಖಡಾ 5 ತೊಲಿ ಅ:ಕಿ: 2000/- ರೂ. ಸೋನಿ ಎಕ್ಸಪಿರಿಯಾ ಮೋಬಾಯಿಲ್ ಅ:ಕಿ: 7500 ರೂ.  ನಗದು ಹಣ 1100/- ರೂ. ಒಂದು ಬೆಳ್ಳಿ ಅರ್ಧ ತೊಲಿ ನವಗ್ರಹ ಉಂಗರ ಅ:ಕಿ: 350/- ರೂ. ಮತ್ತು ರಾಮಚಂದ್ರಪ್ಪನ ಹತ್ತಿರವಿದ್ದ ಸಾಮಸಂಗ ಮೋಬಾಯಿಲ್ ಅ:ಕಿ: 500 ರೂ.  ಮತ್ತು ನೋಕಿಯಾ ಮೋಬಾಯಿಲ್ ಅ:ಕಿ: 500 ರೂ.  ಅ:ಹೀಗೆ ಒಟ್ಟು 11,950/- ರೂ.  ಜಬರದಸ್ತಿಯಿಂದ ಕಸಿದುಕೊಂಡು  ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ: 14/09/2015 ರಂದು ಶ್ರೀ ಶಿವಕಿರಣ ತಂದೆ ಶ್ರೀಮಂತರಾವ್ ಪಾಟೀಲ್ ಸಾ: ಪಡಸಾವಳಿ  ಗ್ರಾಮ ತಾ: ಆಳಂದ ಜಿ: ಕಲಬುರಗಿ  ಮತ್ತು ಗೆಳೆಯನಾದ ಮಲ್ಲಿನಾಥ ತಂದೆ ವಿಶ್ವನಾಥ ಬಿರಾದರ ಇತನೊಂದಿಗೆ ತನ್ನ ಹೊಂಡಾ ಶೈನ ಮೋಟರ ಸೈಕಲ ನಂ ಕೆಎ32 ವಿ-7420 ನೇದ್ದು ತೆಗೆದುಕೊಂಡು ಕಲಬುರಗಿಗೆ ನಮ್ಮ ಸ್ವಂತ ಕೆಲಸದ ನಿಮಿತ್ಯ ಕಲಬುರಗಿಗೆ ಬಂದು ನಮ್ಮ ಕೆಲಸ ವಗೈರೆ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಬೇಕಂತ ಊಟ ಮುಗಿಸಿಕೊಂಡು ನಮ್ಮ ಮೋಟರ ಸೈಕಲ ಮೇಲೆ ರಾತ್ರಿ 11-00 ಗಂಟೆ ಸುಮಾರಿಗೆ ಕಲಬುರಗಿಯಿಂದ ಹೊರಟು ಮೋಟರ ಸೈಕಲನ್ನು ನನ್ನ ಗೆಳೆಯನಾದ ಮಲ್ಲಿನಾಥ ಇತನು ಚಲಾಯಿಸುತ್ತಿದ್ದು ಆಳಂದ ಚೆಕ್ ಪೊಸ್ಟ ಮಾರ್ಗವಾಗಿ ಹೋಗುತ್ತಿರಲು ವಿಶ್ವರಾಧ್ಯ ಗುಡಿ ದಾಟಿ ಆಳಂದ ರೋಡಿನ ರೇಲ್ವೆ ಬ್ರಡ್ಜ ಹತ್ತಿರ ಹೋಗಲು ಹಿಂದಿನಿಂದ 3 ಜನ ಒಂದು ಮೋಟರ ಸೈಕಲ ಮೇಲೆ ಬಂದವರೇ ನಮಗೆ ಮೋಟರ ಸೈಕಲ ನಿಲ್ಲಿಸಿರಿ ಅಂತ ಅಂದರು. ಆಗ ನಾವು ಯಾಕೆ ಅಂದಾಗ ಪೆಟ್ರೋಲ ಮುಗಿದಿದೆ ನಿಲ್ಲಿಸಿರಿ ಅಂತ ಅಂದಾಗ ಆಗ ನಾವು ಹಾಗೇ ಮುಂದೆ ಹೋಗುತ್ತಿರಲು ಸದರಿಯವರು ಹಿಂದಿನಿಂದ ನಮ್ಮ ಮುಂದೆ ಬಂದು ತಮ್ಮ ಮೋಟರ ಸೈಕಲನ್ನು ಅಂದಾಜು 11-20 ಗಂಟೆ ಸುಮಾರಿಗೆ ರೇಲ್ವೆ ಬ್ರಡ್ಜ ಮೇಲೆ ನಿಲ್ಲಿಸಿದರು. ಆಗ ನಾವು ಕೆಳಗೆ ಇಳಿದಾಗ ಆ ಮೂರು ಜನರು ನಮಗೆ ನಿಮ್ಮ ಹತ್ತಿರದ ಹಣ ಮೊಬೈಲ್ ತೆಗೆಯಿರಿ ಅಂತ ಅಂದರು ಆಗ ನಾವು ಸುಮ್ಮನೇ ನಿಂತಾಗ ಅದರಲ್ಲಿ ಒಬ್ಬನು ನನಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ನನ್ನ ಹತ್ತಿರ ಇದ್ದ 2500/-ರೂ ಹಾಗೂ ಎರಡು ಸ್ಯಾಮಸಂಗ ಕಂಪನಿಯ ಮೋಬೈಲ್ ಎರಡ ಅಂದಾಜ ಕಿಮ್ಮತ್ತು 8500/-ರೂ ಹಾಗೂ ಮಲ್ಲಿನಾಥನ ಇತನ ಹತ್ತಿರ ಮತ್ತೊಬ್ಬನು ಹೋಗಿ ಕೈಯಿಂದ ಹೊಟ್ಟೆಯ ಮೇಲೆ ಹೊಡೆದು ಚಾಕು  ತೋರಿಸಿ ಅವನ ಹತ್ತಿರ ಇದ್ದ 500/-ರೂ ನಗದು ಹಣ ಹಾಗೂ ಒಂದು ಸ್ಯಾಮಸಂಗ ಕಂಪನಿಯ ಒಂದು ಮೋಬೈಲ ಅ.ಕಿ= 1500/-ರೂ ಮತ್ತು ಒಂದು ನೋಕಿಯಾ ಕಂಪನಿಯ ಮೋಬೈಲ ಅ.ಕಿ=1800/-ರೂ ಇವುಗಳನ್ನು ಕಸಿದುಕೊಂಡಿದ್ದು ಇನ್ನೊಬ್ಬನು ನಮ್ಮ ಮೋಟರ ಸೈಕಲದ ಪ್ಲಗ ವಾಯರ ಕಿತ್ತುತ್ತಿದ್ದನು. ಅವರೆಲ್ಲರೂ ನಮ್ಮ ಹತ್ತಿರದ ಹಣ ಹಾಗೂ ಮೋಬೈಲಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ತಾವು ತಂದಿದ್ದ ಮೋಟರ ಸೈಕಲ ಮೇಲೆ ಹೋದರು.ಸದರಿ ಮೋಟರ ಸೈಕಲ ನೋಡಲಾಗಿ  ಸಿಲ್ವರ ಕಲರ ಸ್ಲ್ಲೇಂಡರ ಮೋಟರ ಸೈಕಲ ಇದ್ದು ಅದರ ನಂಬರ ಪ್ಲೇಟ ನೋಡಲಾಗಿ ನಂಬರ ಪ್ಲೇಟ ಇರಲಿಲ್ಲ. ಅವರು ಅಂದಾಜು 20 ರಿಂದ 25 ವಯಸ್ಸಿನವರಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: