POLICE BHAVAN KALABURAGI

POLICE BHAVAN KALABURAGI

22 August 2015

Kalaburagi District Reported Crimes.

ಗ್ರಾಮೀಣ ಠಾಣೆ  : ದಿನಾಂಕ: 20/08/2015 ರಂದು  4-00 ಎ.ಎಂ.ಕ್ಕೆ. ಶ್ರೀ.ರೇವಣಸಿದ್ದ ತಂದೆ ಜಗನಾಥ  ಬೆಡಸೂರ ವಯ;35 ವರ್ಷ ಜ್ಯಾತಿ;ಲಿಂಗಾಯತ ಉ;ನ್ಯೂಸುಪರ ಡ್ರೈಕ್ಲೀನರನಲ್ಲಿ ಕೆಲಸ ಸಾ;ಮರಗಮ್ಮ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ಇವರು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶ ಏನೆಂದರೆ ದಿನಾಂಕ. 19-8-2015 ರಂದು 5-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಡ್ರೈಕ್ಲೀನರ ಮಾಲಿಕರಾದ  ಸದಾಶಿವ  ರೇವಯ್ಯಾ ಮಠಪತಿ ಸಾ;ಗೋದು ತಾಯಿನಗರ ಕಲಬುರಗಿ ಇಬ್ಬರು ಕೂಡಿಕೊಂಡು ವಗ್ದರಿಯ ರಾಚೋಟೆಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ಸದಾಶಿವಯ್ಯಾ ಮಠಪತಿ ಇವರ ಮೋಟಾರ ಸೈಕಲ್ ಬಜಾಜ ಪಲ್ಸರ ನಂ.ಕೆ.ಎ.32. ಇಇ.1726  ನೆದ್ದರ ಮೇಲೆ ಕಲಬುರಗಿಯಿಂದ ವಗ್ದರಿಗೆ ಹೋಗಿದ್ದು ದೇವರ ದರ್ಶನ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುತ್ತಿರುವಾಗ ಪಟ್ಟಣ್ಣ ಟೂಲ್ ನಾಕಾ ದಾಟಿದ ನಂತರ ಪಟ್ಟಣ ಕ್ರಾಸ ಕ್ಕಿಂತ ಮುಂಚಿತ ಮೋಟಾರ ಸೈಕಲನ್ನು ನಿಲ್ಲಿಸಿ  ಎಕೀ ಗೆ ( ಮೂತ್ರ ವಿಸರ್ಜನೆ ) ಗೆ ಹೋಗಿ ಮರಳಿ ಬಂದು ಮೋಟಾರ ಸೈಕಲ್ ಮೇಲೆ ಕುಳಿತು ಸದಾಶಿವನು ಮೋಟಾರ ಸೈಕಲನ್ನು ಚಾಲು ಮಾಡಿದನು ನಾನು ಅವನ ಹಿಂದು ಕೂಡುವಷ್ಟರಲ್ಲಿ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಂದು ವಾಹನವು ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಮಗೆ ಡಿಕ್ಕಿ ಹೋಡೆನು ಆಗ ನಾನೂ ರೋಡ ಕೆಳಗೆ ಬಿದ್ದೇನು ಮತ್ತು ಸದಾಶಿವನು ಕೂಡಾ ಕೆಳಗೆ ಬಿದ್ದನು   ಆಗ ರೋಡಿಗೆ ಹೋಗಿಬರುವ ವಾಹನಗಳ ಬೆಳಕಿನಲ್ಲಿ  ಡಿಕ್ಕಿ ಹೊಡೆದ ವಾಹನ ನೋಡಲಾಗಿ ಒಂದು ಬಿಳಿ ನಮೂನೆಯ ಜೀಪ /ಕಾರಿನಂತೆ ಇರುವ ವಾಹನವಿದ್ದು ಅದರ ಚಾಲಕನು  ಹಾಗೆ ಓಡಿಸಿಕೊಂಡು ಕಲಬುರಗಿಕಡೆಗೆ ಬಂದನು ,ಇದರಿಂದ ನನಗೆ ತಲೆಯ ಹಿಂದುಗಡೆ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿರುತ್ತದೆ.ಎಡಕಿನ ಕಿವಿಯ ಮೇಲೆ ತರಚಿದಗಾಯ , ಎಡಗಡೆ ಗಲ್ಲದ ಮೇಲೆ ತರಚಿದಗಾಯ, ಎಡ ಮುಂಡಿಯ ಮೇಲೆ ತರಚಿದಗಾಯ,ಬಲಕಿನ ತೋಡೆಯ ಮೇಲೆ ಗುಪ್ತ ಪೆಟ್ಟಾಗಿರುತ್ತದೆ. ಎಡಗಾಲಿನ ಹಿಂಬಡಿಗೆ ತರಚಿದಗಾಯ ವಾಗಿರುತ್ತವೆ. ಹಾಗೂ ಸದಾಶಿವ ಮಠಪತಿ ಇತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತ ಪಟ್ಟಾಗಿದ್ದು,ಬಲಗೈ ಭುಜಕ್ಕೆಮೋಳಕೈಗೆ ರಕ್ತಗಾಯ ತರಚಿದ ಗಾಯಗಳಾಗಿದ್ದು ,ಸದರಿ ಘಟನೆ ಸಂಭವಿಸಿದ್ದಾಗ ರಾತ್ರಿ ಅಂದಾಜು 10-55 ಗಂಟೆಯಾಗಿತ್ತು, ಅಂತಾ ವಗೈರೆ ಕೊಟ್ಟ ಫಿರ್ಯಾದಿ ಸಾರಂಶಧ ಮೇಲಿಂದ ನಮ್ಮ ಠಾಣೆ ಗುನ್ನೆ ನಂ. 328/2015 ಕಲಂ. 279,337,338 ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ದಿನಾಂಕ.21-8-2015 ರಂದು 10-00 ಎ.ಎಂ.ಕ್ಕೆ. ಶ್ರೀ ಬಾಬು ತಂದೆ ರೇವಯ್ಯಾ ಮಠಪತಿ ವಯ;35 ವರ್ಷ ಜ್ಯಾತಿ;ಜಂಗಮ್ಮಾ ಉ;ಲೆಕ್ಚರ ಸಾ; ಮನೆ ನಂ.1-14-95-202 ಗೋದುತಾಯಿ ನಗರ  ಕಲಬುರ ಇವರು ಕೊಟ್ಟ ಪುರವಣೆ ಹೇಳಿಕೆ ಏನೆಂದರೆ ಸದರಿ ಪ್ರಕರಣದಲ್ಲಿ ಭಾರಿಗಾಯಗೊಂಡ ತನ್ನತಮ್ಮ ಸದಾಶಿವ ತಂದೆ ರೇವಯ್ಯಾ ಮಠಪತಿ ವಯ;28ವರ್ಷ ಇತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಂದ ಹೈದ್ರಾಬಾದ ಗ್ಲೋಬಲ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿದ್ದ ಮರಳಿ ಕಲಬುರಗಿಗೆ ಬರುವಾಗ ದಿನಾಂಕ. 21-8-2015 ರಂದು 1-00 ಎ.ಎಂ.ಕ್ಕೆ. ಮದ್ಯದ ಮಾರ್ಗದಲ್ಲಿ  ಮೃತ ಪಟ್ಟಿರುತ್ತಾನೆ ಅಂತಾ ವಗೈರೆ ಕೊಟ್ಟ ಪುರವಣೆ ಹೇಳಿಕೆ ಸಾರಂಶಧ ಮೇಲಿಂದ ಸದರಿ ಗುನ್ನೆ ನಂ.328/2015 ಕಲಂ. 279,337,338, ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕರಣದಲ್ಲಿ ಕಲಂ.304 (ಎ) ಐಪಿಸಿ ನೆದ್ದನ್ನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ  :      ದಿನಾಂಕ: 21.08.2015 ರಂದು 13:00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 11:15 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕೋಳಕೂರ ಗ್ರಾಮದ ಈಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 4025/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 226/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ    :    ದಿನಾಂಕ: 21.08.2015 ರಂದು 17:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 16-00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕಟ್ಟಿಸಂಗಾವಿ ಬ್ರೀಡ್ಜ ಯಲ್ಲಾಲಿಂಗ ಗುಡಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 600/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 227/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ  :     ಮೃತ ಆಶಮಾ ಬೇಗಂ ವಯಾ:20 ವರ್ಷ ಇವಳ ಮದುವೆಯು ದಿನಾಂಕ:-19/05/2015 ರಂದು ಆರೋಪಿ ನಸೀರ ಇತನೊಂದಿಗೆ ಆಗಿದ್ದು ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ವರದಕ್ಷಣೆ ಮಾತಾಡಿದ್ದು ಅದೇ ಹಣವನ್ನು ಮದುವೆ ಮತ್ತು ಒಲಿಮಾಕ್ಕೆ ಖರ್ಚ ಮಾಡಬೇಕು ಅಂತಾ ಮಾತುಕತೆ ಆಗಿ ನಂತರ ಸದರಿ ಆರೋಪಿತರಾದ ನಸೀರ ಹಾಗು ಸೈಯದಮಾ ಇವರು ಇನ್ನು 20000/-ರೂ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪ ತಾಳಲಾರದೇ ಇಂದು ದಿನಾಂಕ:-21/08/2015 ರಂದು ಮದ್ಯಾಹ್ನ 03:30 ಗಂಟೆ ಸುಮಾರಿಗೆ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಆಗಿದಾಗ ಉಪಚಾರ ಫಲಕಾರಿಯಾಗದೇ ರಾತ್ರಿ 08:00 ಗಂಟೆಗೆ ಮೃತಪಟ್ಟಿದ್ದು ಈ ಮೇಲಿನಂತೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.                                                  

No comments: