POLICE BHAVAN KALABURAGI

POLICE BHAVAN KALABURAGI

15 June 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಬೂಪರಾಯ ತಂದೆ ಶಿವಶರಣಪ್ಪ ಅಲ್ಲಾಪುರ ಸಾ|| ಹರವಾಳ ಹಾ|||| ಗೊಬ್ಬುರ ಬಿ ತಾ|| ಅಫಜಲಪುರ  ರವರು ದಿನಾಂಕ 16.06.2015 ರಂದು ಸಾಯಂಕಾಲ ಕ್ರೂಸರ್ ಜೀಪ್ ನಂ ಕೆ.ಎ32ಬಿ3927 ನೇದ್ದರಲ್ಲಿ ಕೂಳಿತುಕೊಂಡು ನಾನು ಮತ್ತು ನಮ್ಮೂರ ಶರಣು ತಂದೆ ಜಗದೇವಪ್ಪ ಅಲ್ದಿ, ಕಲ್ಯಾಣರಾವ್ ತಂದೆ ಶಂಕ್ರೆಪ್ಪ ಪಡಶೆಟ್ಟಿ, ಸಂಜೀವಕುಮಾರ ತಂದೆ ಶಿವಲಿಂಗಪ್ಪ ಹರಳಯ್ಯ ಜೇವರಗಿ ಪಟ್ಟಣದ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಬರುತ್ತಿದ್ದಾಗ ಸದರಿ ಕ್ರೂಜರ್ ಜೀಪ್‌ ಚಾಲಕನು ತನ್ನ ಜೀಪ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿಂದ ಒಮ್ಮೇಲೆ ಜೀಪ್‌ನ್ನು ಕಟ್ ಹೋಡೆದು ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಇರ್ಪಾನ ಅಲಿ ತಂದೆ ಮಹ್ಮದ ಅಲಿ ಸಾ:ಮ.ನಂ 11/1041/120/18, ಗಾಲಿಬ ಕಾಲೋನಿ ಜಿಲಾನಾಬಾದ ತಾ:ಜಿ:ಕಲಬುರಗಿ ನಿವಾಸಿತನಿದ್ದು ನನ್ನ ಮಹೀಂದ್ರ ಡೂರೊ  ದ್ವಿಚಕ್ರ ವಾಹನ ನಂ; KA 25-ED W-8442 ಬ್ರೌನ ಕಲರ, ಚೆಸ್ಸಿ ನಂ:MC4ND1B1VA1A06652 ಇಂಜಿನ ನಂ: PFEAA240540 ಅ.ಕಿ 25,000/-ರೂ ಬೆಲೆಬಾಳುವದನ್ನು, ನನ್ನ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 03-06-2015 ರಂದು  ಬೆಳಿಗ್ಗೆ 08:00 ಗಂಟೆಗೆ ಕಣ್ಣಿ ಮಾರ್ಕೆಟ ಮುಖ್ಯ ರಸ್ತೆಯ ಪಕ್ಕದಲ್ಲಿ  ಫುಟಫಾತ ಮೆಲೆ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ತರಕಾರಿ ಖರೀದಿಸಲು ಹೋಗಿದ್ದು, ನಂತರ 08:30 ಗಂಟೆಗೆ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: