POLICE BHAVAN KALABURAGI

POLICE BHAVAN KALABURAGI

26 May 2015

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ: 25.05.2015 ರಂದು 22:30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 25.05.2015 ರಂದು 20:30 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಗಂವ್ಹಾರ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಡಬ್ಬಾ ಎದುರು ಇರುವ ಖುಲ್ಲಾ ಜಾಗದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು 3.940/- ರೂ ಕಿಮ್ಮತ್ತಿ ಮಧ್ಯದ ಬಾಟಲಿ ಜಪ್ತಿ ಮಾಡಿದ್ದು ಅವನ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತುಅಂತ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 147/2015 ಕಲಂ 32. 34 ಕೆ.ಇ ಆಕ್ಟ್‌ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಅಫಜಲಪೂರ ಪೊಲೀಸ್ ಠಾಣೆ : ಫಿರ್ಯಾದುದಾರರು ಅಫಜಲಪೂರ ಬಸ್ ಡೀಪೊದಲ್ಲಿ ಬಸ್ಸಿನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುತ್ತೆನೆ. ಇಂದು ದಿನಾಂಕ 25-05-2015 ರಂದು ಅಫಜಲಪೂರ - ಮಣೂರ ಮಾರ್ಗಕ್ಕೆ ನನಗೆ ಚಾಲಕನಾಗಿ, ನನ್ನ ಜೋತೆಗೆ ರಾಜಕುಮಾರ ತಂದೆ ಮಲ್ಲಪ್ಪ ಅಡ್ಡಿ ಇವರಿಗೆ ನಿರ್ವಾಹಕನಾಗಿ ನೇಮಿಸಿದ ಮೇರೆಗೆ ನಾವಿಬ್ಬರು ಬಸ್ ಡಿಪೋದಿಂದ ಬಸ್ ತಗೆದುಕೊಂಡು ಬಂದು ಅಫಜಲಪೂರ ಮಣೂರ ಮಾರ್ಗದಲ್ಲಿ ಸಂಚರಿಸಿ, ಮರಳಿ ಸಾಯಂಕಾಲ 6:00 ಗಂಟೆ ಸುಮಾರಿಗೆ ಮಣೂರ ಗ್ರಾಮದಿಂದ ಪ್ರಯಾಣಿಕರನ್ನು ಕರೆದುಕೊಂಡು ಅಫಜಲಪೂರಕ್ಕೆ ಬಂದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಬಸ್ ಡಿಪೋದಲ್ಲಿ ನಮ್ಮ ಅದಿಕಾರಿಗಳ ಮುಂದೆ ವರದಿ ಒಪ್ಪಿಸಲು ನಾವಿಬ್ಬರು ಕರ್ತವ್ಯದ ಮೇಲೆ ಬಸ್ ನಿಲ್ದಾಣದಿಂದ ಬಸ್ ಡಿಪೋಕ್ಕೆ ಬಸ್ ತಗೆದುಕೊಂಡು ಹೊರಟಿರುತ್ತೆವೆ. ನಮ್ಮ ಬಸ್ಸು ನಮ್ಮ ಡೀಪೊದ ಸಮೀಪ ಇರುವ ಪೆಟ್ರೋಲ ಪಂಪ ಹತ್ತಿರ ಹೊಗುತ್ತಿದ್ದಾಗ, ನಮ್ಮ ಬಸ್ಸಿನ ಹಿಂದೆ ಒಬ್ಬ ವ್ಯಕ್ತಿ ಮೋ/ಸೈ ಮೇಲೆ ಬರುತ್ತಿದ್ದನು. ಆಗ ನಾನು ಸದರಿ ಮೋ/ಸೈ ಸವಾರನಿಗೆ ಸೈಡ ಕೊಡಲು ಬಸ್ಸನ್ನು ರೋಡಿನಿಂದ ಕೆಳಗೆ ಇಳಿಸಿದಾಗ, ಸದರಿ ಸವಾರನು ನಮ್ಮ ಬಸ್ಸಿನ ಪಕ್ಕದಲ್ಲಿ ಹೋಗುತ್ತಿದ್ದಾಗ, ನಮ್ಮ ಬಸ್ಸನ ಗಾಲಿಗಳು ರೋಡಿನಲ್ಲಿರುವ ತಗ್ಗಿಗೆ ಇಳಿದಾಗ ಬಸ್ಸು ಜೋಲಿ ಹೊಡೆದಂತೆ ಆಗಿತು, ಆಗ ಮೋ/ಸೈ ಸವಾರನು ತನ್ನ ಮೋ/ಸೈ ನ್ನು ಮುಂದೆ ಒಯ್ದು ನಿಲ್ಲಿಸಿ ನಮ್ಮ ಬಸ್ಸನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟನು. ಆಗ ನಾನು ನನ್ನ ಬಸ್ಸನ್ನು ನಿಲ್ಲಿಸಿದಾಗ, ಮೋ/ಸೈ ಸವಾರ ನಮ್ಮ ಬಸ್ಸಿನ ಹತ್ತಿರ ಬಂದನು. ಸದರಿ ಮೋ/ಸೈ ಸವಾರ ನನಗೆ ಗೊತ್ತಿದ್ದ ಬಸವರಾಜ ತಂದೆ ರೇವಣಸಿದ್ದಪ್ಪ ಕೋರಳ್ಳಿ ಜಾ: ಲಿಂಗಾಯತ ಸಾ: ಅಫಜಲಪೂರ ಈತನಿದ್ದು, ಸದರಿ ಬಸವರಾಜನು ನನಗೆ ಏನೊ ಸೂಳೆ ಮಗನೆ ಬಸ್ಸನ್ನು ನನ್ನ ಮೈ ಮೇಲೆ ತರುತ್ತಿಯಾ, ನೋಡಿ ನಡೆಸೊದಕ್ಕೆ ಬರೊದಿಲ್ಲಾ ಅಂತಾ ಹೇಳಿ ನನಗೆ ಬೈಯತೋಡಗಿದನು. ಆಗ ನಾನು ಸದರಿ ಬಸವರಾಜನಿಗೆ ಹೊಲಸು ಬೈ ಬ್ಯಾಡರಿ ರೋಡೆ ಸರಿಯಿಲ್ಲಾ ನಾನೇನು ಬೇಕು ಅಂತಾ ನಡೆಸಿಲ್ಲಾ ಅಂತಾ ಹೇಳಿದೆನು. ಆಗ ಅವನಿಗೂ ಬಾಯಿ ಜಗಳವಾಯಿತು, ಆಗ ಸದರಿ ಬಸವರಾಜ ಕೋರಳ್ಳಿ ಆಯ್ತು ನಡಿ ಮಗನೆ ನಿಮ್ಮ ಡೀಪೊಕ್ಕೆ ಬರುತ್ತೆನೆ ಅಂತಾ ಹೇಳಿದನು. ಆದಾದ ನಂತರ ನಾನು ಬಸ್ಸನ್ನು ಡಿಪೊದಲ್ಲಿ ಒಯ್ದು ನಮ್ಮ ಮೇಲಾದಿಕಾರಿಗಳಿಗೆ ವರದಿ ಒಪ್ಪಿಸಲು ಕರ್ತವ್ಯದ ಮೇಲೆ ಹೊಗುತ್ತಿದ್ದಾಗ, ಸದರಿ ಬಸವರಾಜ ಕೋರಳ್ಳಿ ಈತನು ನನ್ನ ಹತ್ತಿರ ಬಂದು ಏನೊ ಲಂಬಾಣಿ ಸೂಳೆ ಮಗನೆ ನನ್ನ ಮೇಲೆ ಬಸ್ಸು ಹಾಯಿಸಲು ಬಂದು, ನನಗೆ ಬೈದು ಬರುತ್ತಿಯಾ ಅಂತಾ ನನ್ನ ಏದೆಯ ಮೇಲಿನ ಸಮವಸ್ತ್ರ ಹಿಡಿದು ತನ್ನ ಕಾಲಿನ ಚಪ್ಪಲಿಯನ್ನು ತಗೆದು ಚಪ್ಪಲಿಯಿಂದ ಹಾಗೂ ಕೈಯಿಂದ ನನಗೆ ಹೊಡೆಯಲಾರಂಬಿಸಿದನು, ಆಗ ಅಲ್ಲೆ ಇದ್ದ ನಮ್ಮ ಬಸ್ಸಿನ ನಿರ್ವಾಹಕ ರಾಜಕುಮಾರ ಅಡ್ಡಿ, ಹಾಗೂ ನಮ್ಮ ಡಿಪೊದ ಸಿಬ್ಬಂದಿಗಳಾದ ಉಮೇಶ, ರಾಜಕುಮಾರ, ಪ್ರಕಾಶ ಇತರರು ಬಂದು ನನಗೆ ಹೊಡೆಯುವುದನ್ನು ಬೀಡಿಸಿರುತ್ತಾರೆ, ಸದರಿ ಘಟನೆ ಇಂದು ದಿನಾಂಕ 25-05-2015 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ಅಫಜಲಪೂರ ಬಸ್ ಡೀಪೊದಲ್ಲಿ ಜರೂಗಿದ್ದು ಇರುತ್ತದೆ. ಸದರಿ ಲಿಂಗಾಯತ ಜಾತಿಯವನಾದ ಬಸವರಾಜ ತಂದೆ ರೇವಣಸಿದ್ದಪ್ಪ ಕೋರಳ್ಳಿ ಸಾ: ಅಫಜಲಪೂರ ಈತನು, ಲಂಬಾಣಿ ಜಾತಿಯವನಾದ ನನಗೆ, ನಾನು ಕರ್ತವ್ಯದ ಮೇಲೆ ನನ್ನ ಮೇಲಾದಿಕಾರಿಗಳಿಗೆ ವರದಿ ಒಪ್ಪಿಸಲು ಹೋಗುತ್ತಿದ್ದಾಗ ನನ್ನನ್ನು ನಿಲ್ಲಿಸಿ, ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ಚಪ್ಪಲಿಯಿಂದ ಮತ್ತು ಕೈಯಿಂದ ಹೊಡೆದು ಸರ್ಕಾರಿ ಕೆಲಸಕ್ಕೆ ಅಡೆ ತಡೆ ಮಾಡಿರುತ್ತಾನೆ. ಕಾರಣ ಸದರಿಯವರನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಎಂದು ಹೇಳಿಕೆ ನೀಡಿದ್ದು ನೀಜವಿರುತ್ತದೆ.
ಆಳಂದ ಪೊಲೀಸ್ ಠಾಣೆ  : ದಿನಾಂಕ:25/05/2015  ರಂದು  ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿ  ತಿಮ್ಮಣ್ಣಾ ತಂದೆ ದಾದಪ್ಪ ಬೆಳಮಂ ವಯಾ: 59 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಮು: ಪಡಸಾವಳಗಿ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ನಾನು ನಮ್ಮೂರ ಧರ್ಮರಾಯ ದೇವಸ್ಥಾನ ಕಮೀಟಿಯ ಅಧ್ಯಕ್ಷನಾಗಿದ್ದು  ಸದರಿ ದೇವಾಲಯದ ಕಟ್ಟಡ ಕೆಲಸ ನಡೆಯುತ್ತಿದ್ದು ಸದರಿ ಕೆಲಸಕ್ಕಾಗಿ ರಾಜಶೇಖರ ತಂದೆ ಲಕ್ಷ್ಮಣ ಪಾತ್ರೋಟ ಸಾ: ನಾಗಠಾಣಾ ತಾ:ಜಿ:ವಿಜಯಾಪೂರ ಇತನಿಗೆ 3 ವರ್ಷಗಳಿಂದ ಕಟ್ಟಡ ಕೆಲಸಕ್ಕಾಗಿ ನಮ್ಮ ಗ್ರಾಮದಲ್ಲಿ ಇದ್ದು ದೇವಾಲಯದಲ್ಲಿಯೇ ಮಲಗಿಕೊಳ್ಳುತ್ತಾನೆ. ಹೀಗಿದ್ದು ದಿನಾಂಕ:25/05/2015 ರಂದು ಬೆಳಿಗ್ಗೆ 4:30 ಗಂಟೆ ನನಗೆ ಪೋನ ಮೂಲಕ ರಾಜಶೇಖರ ತಿಳಿಸಿದ್ದೆನೆಂದರೆ ನಾನು ಎಂದಿನಂತೆ ರಾತ್ರಿ 10:00 ಗಂಟೆ ಸುಮಾರಿಗೆ ಆಲಮರಿಯ ಕೀಲಿ ಹಾಕಿ ಊಟ ಮಾಡಿ ಮಲಗಿಕೊಂಡಿದ್ದು ದಿನಾಂಕ 25/05/2015 ರಂದು ಬೆಳಿಗ್ಗೆ 4:00 ಗಂಟೆಗೆ ನನಗೆ ಆಕಸ್ಮಿಕವಾಗಿ ಎಚ್ಚರ ಆದಾಗ ನಾನು ಎದ್ದು ನೋಡಲು ನಮ್ಮ ಆಲಮೇರಿ ಕೀಲಿ ಮುರಿದಂತೆ ಆಗಿದ್ದು ಅದರಲ್ಲಿಯ ಸಾಮಾನುಗಳು ಕಳ್ಳತನವಾದಂತೆ ಆಗಿದೆ ಅಂತಾ ನಮಗೆ ತಿಳಿಸಿದ್ದರಿಂದ ನಾನು ಮತ್ತು ಕಮೀಟಿಯ ಕಾರ್ಯದರ್ಶಿಯಾದ ಗಣಪತಿ ಕುಂಬಾರ, ಸದಸ್ಯರಾದ ಪ್ರಬುಲಿಂಗ ಘೊಡಕೆ , ಬಸವರಾಜ ಜಮಾದಾರ ಹೋಗಿ ನೋಡಲು ಸದರಿ ಘಟನೆ ನಿಜವಿದ್ದು  ಸದರಿ ಆಲಮರಿಯಲ್ಲಿದ್ದ  1) 20,000 ನಗದು ಹಣ 2) 3 ಹಳೆಯ ಮೋಬೈಲಗಳು 3) ಒಂದು ಕ್ಯಾಮರಾ 4) 2 ಗ್ರಾಂಡರ ಮಷಿನ್ 5) ಒಂದು ಬ್ಯಾಗ ಅದರಲ್ಲಿ ಇದ್ದ ಬಟ್ಟೆಗಳು ಹೀಗೆ ಒಟ್ಟು 24000/-ರೂಪಾಯಿ ಕಿಮ್ಮತ್ತಿನ ಹಣ ಮತ್ತು ವಸ್ತುಗಳು ಯ್ಯಾರೋ ಕಳ್ಳರು ದಿನಾಂಕ:24/05/2015 ರ ರಾತ್ರಿ 11 ಗಂಟೆಯಿಂದ ದಿನಾಂಕ 25/05/2015 ರ ಬೆಳಗಿನ 4 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ  ಕಳುವಾದ ಮಾಲು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:98/2015 ಕಲಂ:457,380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

No comments: