POLICE BHAVAN KALABURAGI

POLICE BHAVAN KALABURAGI

16 February 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-15/02/15 ರಂದು ರಾತ್ರಿ 11:30 ಗಂಟೆ ಸುಮಾರಿಗೆ ತನ್ನ ಗಂಡ ವಿಜಯಕುಮಾರ ಇತನು ತನ್ನ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಅಂಬಿಕಾ ವೈನ ಶಾಪ ಹಿಂದುಗಡೆ ನಮ್ಮ ಮನೆಯ ಪಕ್ಕದ ಲಕ್ಷ್ಮಣ ತಂದೆ ಗುಂಡಪ್ಪ ಇತನು ಮನೆಗೆ ಹೋಗೋಣಾ ನಡೆ ಅಂತಾ ಕರೆದಾಗ ಬರುದಿಲ್ಲಾ ಅಂತಾ ತನ್ನ ಹತ್ತಿರ ಇದ್ದ ಬಿದಿರನ ಬಡಿಗೆಯಿಂದ ಲಕ್ಷ್ಮಣನಿಗೆ ಹೊಡೆದಿದ್ದು ಲಕ್ಷ್ಮಣ ಇತನು ಅದೇ ಬಿದಿರನ ಬಡಿಗೆಯಿಂದ ವಿಜಯಕುಮಾರನ ತಲೆಯ ಮೇಲೆ 4-5 ಏಟು ಹೊಡೆದು ಕೊಲೆ ಮಾಡಿರುತ್ತಾನೆ ಆಂತಾ ಶ್ರೀಮತಿ ಸಂಪತ್ತಬಾಯಿ ಗಂಡ ವಿಜಯಕುಮಾರ ಕಣ್ಣೂರ ಸಾ:ಭೂಸಣಗಿ ತಾ:ಜಿ:ಕಲಬುರಗಿ ಹಾ:ವ:ಕೆ ಕೆ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 10-02-2015 ರಂದು ಬೆಳಿಗ್ಗೆ ನನ್ನ ಮಗಳಾದ ಅನುಸುಬಾಯಿ ತಂದೆ ತೇಜಪ್ಪ ಜಾನೆ ವಯ: 19 ವರ್ಷ ಉ: ವಿಧ್ಯಾರ್ಥಿ ಇವಳು ಆಳಂದಿನ  ಬಿ.ಆರ್ ಪಾಟೀಲ  ಡಿ.ಎಡ್ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬರದೇ ಇದ್ದುದ್ದರಿಂದ ಕಾಲೇಜಿಗೆ ಹೋಗಿ ವಿಚಾರಿಸಲಾಗಿ ಸದರಿಯವಳು ಕಾಲೇಜಿಗೆ ಬಂದಿಲ್ಲ ಅಂತಾ ತಿಳಿದು ಬಂದಿದ್ದು ದಿನಾಂಕ 15-02-2015 ರಂದು ಶ್ರೀಮತಿ ಸಕ್ಕುಬಾಯಿ ಗಂಡ ಭೀಮಾಶಂಕರ ಸಿಂಗೇ ಇವಳನ್ನು ವಿಚಾರಿಸಿದಾಗಿ ಅವಳು ತಿಳಿಸಿದ್ದೇನೆಂದರೆ ನಿನ್ನ ಮಗಳಾದ ಅನುಸುಬಾಯಿ ನನ್ನ ಮಗನಾದ ಕಾಶಪ್ಪ ತಂದೆ ಭೀಮಾಶಂಕರ ಸಿಂಗೇ ಇವನು ಕಿಡ್ನಾಪ್ ಮಾಡಿಕೊಂಡು ಪುನಾಕ್ಕೆ ಹೋಗಿದ್ದಾನೆ ಇವನ ಸಂಗಡ ಬುದ್ದಪ್ಪ ತಂದೆ ಬಾಬುರಯ ಸಿಂಗೇ, ಸಂತೋಷ ತಂದೆ ದತ್ತಪ್ಪ ಸಿಂಗೇ, ಭೀಮಾಶಂಕರ ತಂದೆ ಹಣಮಂತ ಸಿಂಗೇ, ಇವರೆಲ್ಲರೂ ಇದ್ದಾರೆ ಎಲ್ಲರೂ ಈಗ ಪುನಾದ ಕೋತರೋಡ್ ಎನ್ನುವ ಏರಿಯಾದಲ್ಲಿ ಇದ್ದಾರೆ ಅಂತಾ ತಿಳಿಸಿರುತ್ತಾಳೆ ಅಂತಾ ಶ್ರೀಮತಿ ಮಾಪುರಬಾಯಿ ಗಂಡ  ತೇಜಪ್ಪ ಜಾನೆ ಸಾ: ಭಟ್ಟರಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಶಾಹೀನ್‌ ಗಂಡ ಸುಲ್ತಾನ ಪಟೇಲ  ಕಡಮೊಡ ವ: 22 ವರ್ಷ, ಜಾತಿ: ಮುಸ್ಲೀಂ, ಉ: ಮನೆ ಕೆಲಸ ಸಾ: ಮಾಡ್ಯಾಳ ಹಾ: ವ: ಕವಲಗಾ ( ಕೆ ) ಇವರು ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದೇನೆಂದೆರೆ, ದಿನಾಂಕ: 21/04/2014 ರಂದು ಸುಲ್ತಾನ ಪಟೇಲನೊಂದಿಗೆ ಮದುವೆಯಾಗಿದ್ದು ಮದುವೆಯಲ್ಲಿ  ನನಗೆ ಒಂದುವರೆ ತೊಲೆ ಬಂಗಾರ ಮತ್ತು ನನ್ನ ಗಂಡನಿಗೆ ಒಂದುವರೆ ತೊಲೆ ಬಂಗಾರ ಮತ್ತು 25,000 /- ರೂ  ಹುಂಡಾ ವರದಕ್ಷಣೆ ನೀಡಿದ್ದು ಇದಾದ 2-3 ತಿಂಗಳವರೆಗೆ ನನ್ನ ಜೊತೆ ಸರಿಯಾಗಿ ಇದ್ದು ನಂತರ ನಿನ್ನ ತವರು ಮನೆಯಿಂದ ಇನ್ನೂ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ  ಗಂಡನಾದ 1)  ಸುಲ್ತಾನ ತಂದೆ ಮಹಿಬೂಬಸಾಬ  ಕಡಮೊಡ  ಅತ್ತೆಯಾದ 2) ನೂರಜಾ ತಂದೆ ಮಹಿಬೂಬಸಾಬ  ಕಡಮೊಡ .  ಮಾವನಾದ 3)  ಮಹಿಬೂಬ ತಂದೆ ಗೈಹಿಬೂಸಾಬ ಕಡಮೊಡ. ಗಂಡನ ಮುತ್ಯಾ 4) ಗೈಬೂಸಾಬ ಕಡಮೊಡ  ಅಜ್ಜಿಯಾದ 5) ಬೇಗುಂ ಗಂಡ ಗೈಬೂಸಾಬ  ಮೈದುನರಾದ  6) ಸದ್ದಾಂ ತಂದೆ ಮಹಿಬೂಬಸಾಬ 7)  ಮೌಲಾ ತಂದೆ ಮಹಿಬೂಬಸಾಬ ಕಡಮೊಡ ಇವರೆಲ್ಲರೂ ಸೇರಿ  ನನಗೆ ದೈಹಿಕ ಮತ್ತು ಮಾನಸಿಕ ಹಾಗೂ ವರದಕ್ಷಣೆ ತರುವಂತೆ  ಕಿರಕುಳ ನೀಡಿ  ದಿನಾಂಕ: 21/11/2014 ರಂದು 15.00 ಗಂಟೆಗೆ ನನಗೆ ಎಲ್ಲರೂ ಸೇರಿ  ಕೊಡಲಿ, ಬಡಿಗೆ, ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಜೀವ ಭಯ ಪಡೆಯಿಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ : 15/02/2015 ರಂದು ಸಂಜೆ ನನ್ನ ಅಣ್ಣ ಅಬ್ದುಲ ಸತ್ತಾರ ಈತನು ತನ್ನ ಮೋ.ಸೈ ಬಜಾಜ ಡಿಸ್ಕವರಿ ನಂಕೆಎ-32-ಇಜಿ-3893 ನೇದ್ದನ್ನು ಹರಸೂರದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಕಲಬುರಗಿಯ ಆಳಂದ ಚೆಕ್ ಪೋಸ್ಟಕ್ಕಿಂತ ಮುಂಚಿತ ರಿಂಗ ರೋಡ ಮೇಲೆ ವೇಗವಾಗಿ & ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಆಯಾ ತಪ್ಪಿ ರೋಡಿನ ತಗ್ಗಿಯಲ್ಲಿ ಬಿದ್ದಿದ್ದರಿಂದ ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಎರಡು ಕಿವಿಯಿಂದ ರಕ್ತಸ್ರಾವವಾಗುತ್ತಿದ್ದಾಗ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು , ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಆತನ ತಲೆಗೆ ಆದ ಭಾರಿ ಗಾಯದಿಂದ ಗುಣಮುಖನಾಗದೆ ಇಂದು ದಿನಾಂಕ 16/02/2015 ರಂದು ಬೆಳಗಿನ ಜಾವ ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಮಹ್ಮದ ಮಸ್ತಾನ ತಂದೆ ಅಮೀರ ಅಲಿ ಬಾಂಬೆ ಟೇಲರ್ ಸಾ|| ಮಿಸ್ಬ್ಹಾನಗರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಹಸಮತ ಬಿ ಗಂಡ ಅಲ್ಲಾವುದ್ದಿನ ಮುಲ್ಲಾಗೊಳ ಸಾ: ಮರತೂರ ತಾ: ಚಿತ್ತಾಪೂರ ಜಿ: ಕಲಬುರಗಿ  ರವರು ದಿನಾಂಕ 16-02-2015 ರಂದು ಬೆಳಿಗ್ಗೆ ನಮ್ಮೂರಿನ ಭಗವಾನ ಇತನು ಚಲಾಯಿಸುತ್ತೀರುವ ಟಾಟಾ ಎಸಿಇ ನಂ ಕೆಎ-32-ಸಿ-0731 ನೇದ್ದರಲ್ಲಿ ನಾನು ಮತ್ತು ನನ್ನ ಮಗ ಹರಬಾಸ ಹಾಗೂ ನನ್ನ ಮಗಳಾದ ಇರ್ಫಾನಾ  ಮತ್ತು ಆಫ್ರೀನಾ ಬೇಗಂ ರವರು ಕುಳಿತು ನೀಲೂರ ಗ್ರಾಮದಿಂದ ನಮ್ಮೂರಿಗೆ ಹೋಗುವ ಕುರಿತು ಆರ.ಪಿ.ಸರ್ಕಲದಿಂಧ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವಾಗ ರೈಲ್ವೆ ಓವರ ಬ್ರಿಡ್ಜ ದಾಟಿ ಬಂಜಾರ ಕ್ರಾಸ ಸಮೀಪ ರೋಡ ಮೇಲೆ ಎದುರಿನಿಂದ ಬಸ್ಸ ಚಾಲಕ ವೀರಣ್ಣ ಇತನು ತನ್ನ ಎನ,,ಕೆ,ಆರ,ಟಿ,ಸಿ ಬಸ್ಸ ನಂ ಕೆಎ-36-ಎಫ್-1075 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಸಿಕೊಂಡು ಬಂದು ನಾವು ಕುಳಿತ ಟಾಟಾ ಎಸಿಇ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಹಣೆಗೆ ರಕ್ತಗಾಯ ಮತ್ತು ಮೈಯಲ್ಲಾ ಒಳಪೆಟ್ಟು ಹಾಗೂ ನನ್ನ ಮಗ ಹರಬಾಸ ಇತನಿಗೆ ಹಣೆಗೆ ಪೆಟ್ಟು ಬಿದ್ದಿದ್ದು ಮತ್ತು ಟಾಟಾ ಎಸಿಇ ಚಾಲಕ ಭಗವಾನ ಇತನಿಗೂ ಪೆಟ್ಟು ಬಿದ್ದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: