POLICE BHAVAN KALABURAGI

POLICE BHAVAN KALABURAGI

27 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಅಮೇರ್ ಸೊಹೆಲ್ ತಂದೆ ಅನ್ವರ್ ಶರೀಫ್ ಸಾಃ ಮನೆ ನಂ. 121, ಗಂಜ್ ಕಾಲೋನಿ ಕಲಬುರಗಿ ರವರು ದಿನಾಂಕಃ 23/02/2015 ರಂದು ಕೆ.ಎನ್.ಝೆಡ್ ಫಂಕ್ಷನ್ ಹಾಲ್ ಹತ್ತಿರ ಇರುವ ರಿಂಗ್ ರೋಡದ ಮೇಲೆ ಇಂಡಿಕಾ ಕಾರ ನಂ. ಕೆ.ಎ 36 ಎಂ. 5816 ನೇದ್ದರ ಚಾಲಕನು ತನ್ನ ಕಾರನ್ನು ಹುಮನಾಬಾದ ರಿಂಗ್ ರೋಡ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆ.ಎ 37 ಎಲ್ 4086 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನಗೆ ತಲೆಗೆ ರಕ್ತಗಾಯ, ಎಡಗಡೆ ಮಗ್ಗಲಿಗೆ ಮತ್ತು ಹೊಟ್ಟೆಯ ಕೆಳಗೆ ಗುಪ್ತಗಾಯಗಳಾಗಿದ್ದು ನನ್ನ ತಂದೆಯಾದ ಅನ್ವರ ಶರೀಫ್ ಇವರಿಗೆ ತಲೆಗೆ ಭಾರಿ ರಕ್ತಗಾಯ, ಎರಡು ಮುಂಗೈಗೆ, ಎರಡು ಕಾಲುಗಳ ಮೊಳಕಾಲಿಗೆ ಹಾಗು ಪಾದಗಳಿಗೆ ತರಚಿದ ರಕ್ತಗಾಯಗಳಾಗಿದ್ದು ನನ್ನ ತಂದೆಯವರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ನಮಗೆ ಅಪಘಾತ ಪಡಿಸಿದ ಕಾರ ಚಾಲಕನು ಅಪಘಾತ ಪಡಿಸಿದ ನಂತರ ಕಾರನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾರೆ. ದಿನಾಂಕಃ 26/02/2015 ರಂದು ಮದ್ಯಾಹ್ನ 12:30 ಪಿ.ಎಂ. ಕ್ಕೆ ವಾತ್ಸಲ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸೇಡಂ ಠಾಣೆ : ದಿನಾಂಕ 25-02-2015 ರಂದು ನನ್ನ ಅಣ್ಣನ ಮಗನಾದ ಮಹಾನಂದ ಇತನು ತನ್ನ ಗೆಳೆಯನಾದ ಭೀಮಾಶಂಕರ ವಡ್ಡರ ಇತನೊಂದಿಗೆ ಸೇಡಂಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯ ಮುಂದೆ ಇದ್ದ ತನ್ನ ಮೊ.ಸೈ ನಂ-KA32-ED0712 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ನನಗೆ ನಮ್ಮೂರ ಮಶಾಕಸಾಬ ಫೋನ ಮಾಡಿ ತಿಳಿಸಿದ್ದೇನೆಂದರೆ, ಮಹಾನಂದ ತನ್ನ ಮೋಟಾರು ಸೈಕಲ್ ಮೇಲೆ ಭೀಮಾಶಂಕರ ವಡ್ಡರ ಇತನನ್ನು ಕೂಡಿಕೊಂಡು ಸೇಡಂದಿಂದ ಬಟಗೆರಾಗೆ ಬರುತ್ತಿರುವಾಗ ವಿ.ಸಿ.ಎಫ್. ಕಂಪನಿಯ ಕಡೆಯಿಂದ ಲಾರಿ ನಂ-MH12HD4724 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ಮಹಾನಂದ ಇತನ ಮೊಟಾರು ಸೈಕಲ ನಂ- KA32-ED0712 ನೇದ್ದಕ್ಕೆ ಡಿಕ್ಕಿ ಪಡೆಯಿಸಿದ್ದರಿಂದ ಮಹಾನಂದನ ತಲೆ ಭಾರಿ ರಕ್ತಗಾಯವಾಗಿ ಮೆದಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಜೊತೆಯಲ್ಲಿದ್ದ ಭೀಮಾಶಂಕರ ಇತನಿಗೆ ತಲೆಗೆ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ ಮತ್ತು ಬಲಭುಜಕ್ಕೆ ರಕ್ತಗಾಯವಾಗಿರುತ್ತದೆ. ಅಪಘಾತಪಡಿಸಿದ ಲಾರಿ ಚಾಲಕ ಓಡಿ ಹೋಗಿರುತ್ತಾನೆ, ಅಂತಾ ತಿಸಿರುತ್ತಾರೆ ಅಂತಾ  ಬಸ್ಸಯ್ಯಸ್ವಾಮಿ ತಂದೆ ಅನ್ನದಾನಯ್ಯಸ್ವಾಮಿ ಹಿರೆಮಠ, ಸಾ:ಬಟಗೆರಾ( (ಕೆ) ಗೇಟ್, ತಾ:ಸೇಡಂ. ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :

ಜೇವರ್ಗಿ ಠಾಣೆ : ಶ್ರೀ ಸೊಮಲಿಂಗಪ್ಪ ಬಿರಾದಾರ ಪಿ.ಡಿ.ಓ ಹರವಾಳ ಇವರು ಹರವಾಳ ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜುನ ಅಂದಾ ಇವರಿಗೆ 13 ನೇ ಹಣಕಾಸಿನ ಯೋಜನೇಯ ಅಡಿಯಲ್ಲಿ ನಿರ್ವಹಣೆ ಮತ್ತು ನೈರ್ಮಲ್ಯ ಕಾಮಗಾರಿ ಅಡಿಯಲ್ಲಿ ಜೇವರ್ಗಿ ಪಟ್ಟಣದ ಪ್ರಗತಿ ಕ್ರಿಷ್ಣಾ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 74001969745 ನೇದ್ದರ ಚೆಕ್‌ ಸಂಖ್ಯೆ 775892 ನೇದ್ದರಲ್ಲಿ ಒಟ್ಟು 14.800/- ರೂ ಗಳ ಚೆಕ್‌ನ್ನು ನೀಡಿದ್ದು ಸದರಿ ಮಲ್ಲಿಕಾರ್ಜುನ ಅಂದಾ ಈತನು ಪ್ರಗತಿ ಕ್ರಿಷ್ಣಾ ಗ್ರಾಮೀಣ ಬ್ಯಾಂಕ್ ಸಿಬ್ಬಂದಿರವರೊಂದಿಗೆ ಸೇರಿಕೊಂಡು ಚೆಕ್‌ ಸಂಖ್ಯೆ 775892 ನೇದ್ದರಲ್ಲಿ ಮೊತ್ತ ಮತ್ತು ದಿನಾಂಕವನ್ನು ತಿದ್ದುಪಡಿ ಮಾಡಿ ಒಟ್ಟು 1.14.800/- ರೂಪಾಯಿಯನ್ನು ದಿನಾಂಕ 27.05.2014 ರಂದು ಸದರಿ ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಹರವಾಳ ಗ್ರಾಮ ಪಂಚಾಯತಿಗೆ ಮತ್ತು ಸರ್ಕಾರಕ್ಕೆ ಮೋಸ, ವಂಚನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: