POLICE BHAVAN KALABURAGI

POLICE BHAVAN KALABURAGI

16 December 2014

Kalaburagi District Reported Crimesಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ವೀರಬಸವಂತರಾವ ಪಾಟೀಲ್ ಸಾ|| ಹತ್ಯಾನ ಗಲ್ಲಿ ಆಳಂದ ರವರು  ದಿನಾಂಕ 16/12/2014 ರಂದು ಬೆಳಿಗ್ಗೆ 11;00 ಗಂಟೆಗೆ ಅಂಗಡಿಯಲ್ಲಿ ಇದ್ದಾಗ ಜನರು ಅಂದಾಡುವುದರಿಂದ ನನಗೆ ಗೊತ್ತಾಗಿದ್ದೆನೆಂದರೆ ಎಪಿಎಮ್‌ಸಿ ಯಾರ್ಡದ ಹಿಂದಿನ ಎಪಿಎಮ್‌ಸಿ ಗೆ ಸಂಭಂಧಿಸಿದ ಜಾಗೆಯಲ್ಲಿ ಸರಕಾರಿ ಜಾಲಿ ಕಂಟಿಯಲ್ಲಿ ಒಂದು ಗಂಡಸು ಮನುಷ್ಯನ ಶವ ಬಿದ್ದಿದ್ದು ಗೊತ್ತಾಗಿ ನಾನು ಹಾಗೂ ನನ್ನಂತೆ ಇತರರು ಹೋಗಿ ನೋಡಲಾಗಿ ಎಪಿಎಮ್‌ಸಿ ಯಾರ್ಡದಿಂದ 150 ಫೀಟ್ ಮೇಲೆ ಪೂರ್ವಕ್ಕೆ ಜಾಲಿ ಕಂಟಿಯಲ್ಲಿ ಅಂಗಾತ ಆಗಿ 35 ರಿಂದ 40 ವರ್ಷದ ವಯಸ್ಸಿನ್ ಅಪರಿಚಿತ ಗಂಡಸು ಮನುಷ್ಯನ ಶವ ಬಿದ್ದದ್ದು ನೋಡಿ ಆಳಂದ ಪೊಲೀಸ್  ಠಾಣೆಗೆ  ದೂರವಾಣಿಯ ಮೂಲಕ ತಿಳಿಸಿದಾಗ ಆಳಂದದ ಪಿಎಸ್‌ಐ ಸಾಹೇಬರು ಹಾಗೂ ಸಿಬ್ಬಂದಿಯವರು ಶವ ಬಿದ್ದ  ಸ್ಥಳಕ್ಕೆ ಬಂದು ನೋಡಿ ಅಲ್ಲಿ ನೆರೆದಿದ್ದ ಜನರ ಸಹಾಯದಿಂದ ಶವ ಕಂಟಿಯಿಂದ ಹೊರಗೆ ತೆಗೆದು ನೋಡಿದ್ದು ಸದರಿಯವನು ಅಂದಾಜು 5 ರಿಂದ 5 ½ ಫೀಟ್ ಎತ್ತರವಿದ್ದು ಆತನ ಕುತ್ತಿಗೆಯ ಬಲಭಾಗದ ಮುಂದುಗಡೆ ಒಂದು ಇಂಚಿನಷ್ಟು ರಕ್ತಗಯವಾಗಿದ್ದು & ಎಡಭಾಗದ ಮುಂದುಗಡೆ 1 ½ ಇಂಚು ಸುತ್ತಳತೆಯ ರಕ್ತಗಾಯವಾಗಿದ್ದು ಅದರಿಂದ ರಕ್ತ ಒಂದೆ ಸಮನೆ ಸೋರುತ್ತಿದ್ದು ಹಾಗೂ ಕುತ್ತಿಗೆ ಮೇಲ್ಭಾಗದಲ್ಲಿ 1 ಇಂಚು ಉದ್ದ ಕೊಯ್ದಂತೆ ಗಾಯವಾಗಿದ್ದು ಎಡಗಣ್ಣಿನ ಕೆಳಗೆ ಮೂಗಿನ ಪಕ್ಕ ಹಾಗೂ ಬಾಯಿಯ ಎಡಭಾಗದಲ್ಲಿ ತರಚಿದ ಗಾಯವಾಗಿದ್ದು ಹಾಗೂ ಆತನ ಶರ್ಟ ಹಾಗೂ ಬನಿಯನಗಳಿಗೆ ರಕ್ತ ಆಗಿದ್ದು ಆತನ ಪ್ಯಾಂಟ ಸರಿಸಿ ನೋಡಲು ಅವನ ಶಿಶ್ನದ ಜೋತೆಗೆ ಎರಡು ತೊರಡಿನ ಬಿಜಗಳು ತೊಗಲು ಸುಲಿದು ಕೊಯ್ದಂತೆ ಆಗಿ ಜೋತು ಬಿದ್ದು ರಕ್ತಗಾಯವಾಗಿರುತ್ತದೆ, ಶವದ ಬಲಗಾಲಿನ ಎರಡನೆ ಬೆರಳು ಒಂದಿಚಿನಷ್ಟು ಮೊಂಡಾಗಿದೆ, ಎಡಗೈಯಲ್ಲಿ ಒಂದು ಹೆಚ್‌ಎಮ್‌ಟಿ ಕೈ ಗಡಿಯಾರ (ಗೋಲ್ಡನ್ ಕಲರ್) ಇದೆ, ಸದರಿ ಶವವು ಸಧೃಡ ಮೈಕಟ್ಟು ಹೋದಿದ್ದು ಸಾಧಾರಣ ಗಪ್ಪು ದುಂಡು ಮುಖ ತಲೆಯ ಮೇಲೆ 2 ಇಂಚು ಕಪ್ಪು ಕೂದಲು ಹೊಂದಿದವನಿರುತ್ತಾನೆ,ಸದರಿಯವನಿಗೆ ಯಾವುದೋ ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಸದರಿ ಸ್ಥಳದಲ್ಲಿ ತಂದು ಶವ ಎಸೆದು ಹೋದಂತೆ ಕಂಡು ಬಂದಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 15.12.2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 16.12.2014 ರ ಮುಂಜಾನೆ ೦5:00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರ್ಗಿ ಪಟ್ಟಣದ ಬಜಾರ್‌ ರೋಡಿನಲ್ಲಿ ಇರುವ ಫಿರ್ಯಾದಿಯ ಶ್ರೀ. ಬಿ.ಎಸ್ ರಾಮಪೂರ್ ಕಿರಾಣ ಅಂಗಡಿ ಮತ್ತು ವಿಜಯಲಕ್ಷ್ಮಿ ಜ್ಯುವೇಲರ್ಸ ಅಂಗಡಿಯ ಸಟರ್ ನ್ನು ಮೇಲೆ ಎತ್ತಿ ಒಳಗೆ ಪ್ರವೇಶ ಮಾಡಿ ಅಂಗಡಿಗಳಲ್ಲಿದ್ದ ನಗದು ಹಣ ಮತ್ತು ಹಳೆಯ ಬೆಳ್ಳೀಯ ಆಭರಣಗಳು ಸೇರಿ ಒಟ್ಟು ಅ.ಕಿ 8.000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಬಸವರಾಜ ತಂದೆ ಶರಣಪ್ಪ ರಾಮಪೂರ ಲಕ್ಕಪ್ಪ ಲೇಔಟ್‌ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ 15.12.2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 16.12.2014 ರ ಮುಂಜಾನೆ ೦5:00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರ್ಗಿ ಪಟ್ಟಣದ ಬಜಾರ್‌ ರೋಡಿನಲ್ಲಿ ಇರುವ ಫಿರ್ಯಾದಿಯ ಶ್ರೀ. ಸಿದ್ದೆಶ್ವರ ಜ್ಯುವೇಲರ್ಸ ಅಂಗಡಿಯ ಸಟರ್ ನ್ನು ಮೇಲೆ ಎತ್ತಿ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಹಳೆಯ ಬೆಳ್ಳೀಯ ಆಭರಣಗಳು ಒಟ್ಟು 1 ಕೇಜಿ ಅಂ.ಕಿ 19.000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಹೇಶ ತಂದೆ ರಾಮಚಂದ್ರ ಪತ್ತಾರ್ ಸಾ|| ಲಕ್ಷ್ಮಿ ಚೌಕ್‌ ಜೇವರ್ಗೀ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: