POLICE BHAVAN KALABURAGI

POLICE BHAVAN KALABURAGI

27 November 2014

Kalaburagi Police Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ  ರಾಜ್ಯ, ಬೆಂಗಳೂರುರವರು ದಿನಾಂಕ: 27-11-2014 ರಂದು ಬೆಂಗಳೂರುನಿಂದ ವಿಶೇಷ ವಿಮಾನದ ಮೂಲಕ ಬೀದರದಿಂದ ಕಲಬುರಗಿ ನಗರಕ್ಕೆ ಆಗಮಿಸಿ ಐವಾನ-ಎ-ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ ದಿನಾಂಕ 28-11-2014 ರಂದು ಬೆಳಿಗ್ಗೆ 11:00 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಸಭಾಂಗಣ ಮಿನಿ ವಿಧಾನ ಸೌಧ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿ ನಂತರ ಕೆ.ಸಿ.ಟಿ. ಕಾಲೇಜ ಆವರಣದಲ್ಲಿ ಜರುಗುವ ಸಭೆಯಲ್ಲಿ ಭಾಗವಹಿಸಿ ತದನಂತರ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಪ್ರಾದೇಶಿಕ ಕೇಂದ್ರ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಲಬುರಗಿಯಿಂದ ರಸ್ತೆಯ ಮೂಲಕ ಸಾಯಂಕಾಲ 06-00 ಗಂಟೆಗೆ ನಿರ್ಗಮಿಸಿ ಬೀದರ ಎರಬೇಸಗೆ ತೆರಳಲಿರುವರು.
ಹೈದ್ರಾಬಾದ ಕರ್ನಾಟಕ  ಪ್ರದೇಶದಲ್ಲಿ ಇರುವ ಬೀದರ, ಯಾದಿಗಿರ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಮಾನ್ಯ ಮುಖ್ಯಮಂತ್ರಿಯವರಿಗೆ ಭೇಟಿಯಾಗುವ ಕುರಿತು ಕಲಬುರಗಿಗೆ ಬರುವವರಿದ್ದರೆ ಅವರಿಗೆ ವಾಹನ ಪಾಸುಗಳನ್ನು ಜಿಲ್ಲಾ ವಿಶೇಷ ಶಾಖೆ ಪೊಲೀಸ್ ಭವನ ಕಲಬುರಗಿಯಲ್ಲಿ ಪಡೆದುಕೊಳ್ಳಲು ಈ ಮೂಲಕ ತಿಳಿಯಪಡಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂ. 08472-263610. 

No comments: