POLICE BHAVAN KALABURAGI

POLICE BHAVAN KALABURAGI

06 November 2014

Kalaburagi District Reported Crimes

ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಕೃಷ್ಣ ತಂದೆ ಪಾಂಡುರಂಗ ಟಿಕೋಳೆ ವಿಳಾಸ: ಸ್ಟೇಷನ ಗಾಣಗಾಪೂರ ತಾ: ಅಫಜಲಪೂರ ಜಿ: ಕಲಬುರಗಿ ರವರ ಮಗನಾದ ಕುಶಾಲ ಇತನಿಗೆ ದಿನಾಂಕ: 28/10/2014 ರಂದು 2-3 ದಿವಸ ಕಾಲೇಜಿಗೆ ಹೋಗದೆ ಇರುವದಕ್ಕೆ ನನ್ನ ಹಿರಿಮಗ ವಿಶಾಲನು ಕಾಲೇಜಿಗೆ ಯ್ಯಾಕೆ ಹೋಗುತಿಲ್ಲ ಅಂತ ಬೈದಿದ್ದನಂತೆ ಅದಕ್ಕೆ ಕುಶಾಲನು ಸಿಟ್ಟು ಮಾಡಿಕೊಂಡು ದಿನಾಂಕ:29/10/2014 ರಂದು ಬೆಳಿಗ್ಗೆ 5:30 ಗಂಟೆ ಸುಮಾರಿಗೆ 3 ಜೋತೆ ಬಟ್ಟೆ ಬ್ಯಾಗನಲ್ಲಿ ಹಾಕಿಕೊಂಡು ಯಾರಿಗು ಹೇಳದೆ ಕೇಳದೆ ಸಾಯಿ ಮಂದಿರದ ಹತ್ತಿರ ಇರುವ ನಮ್ಮ ಅಳಿಯನ ಮನೆಯಿಂದ ಹೋಗಿರುತ್ತಾನೆ ನಾವೆಲ್ಲರು ಗುಲಬರ್ಗಾದಲ್ಲಿ ಮತ್ತು ನಮ್ಮ ಸಂಬಂಧಿಕರಿಗೆ ಫೋನ ಮಾಡಿ ವಿಚಾರಿಸಿ ಎಲ್ಲಾಕಡೆ ಹುಡುಕಾಡಿದ್ದು ಎಲ್ಲೂ ಸಿಕ್ಕಿರುವದಿಲ್ಲ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರುಕ್ಸಾನ ಗಂಡ ಚಾಂದಸಾಬ ಜಮಾದಾರ ಸಾ|| ಕರಜಗಿ ರವರು ಪತಿಯಾದ ಚಾಂದ ಸಾಬ  ಹಾಗೂ ಅತ್ತೆ ಮಾವ ಹಾಗೂ ನಾದಿನಿ ಇವರೆಲ್ಲರು ನನಗೆ ದಿನಾಂಕ 21/10/2014 ರಂದು 9 ಎಎಮ್ ಕ್ಕೆ ಹೊಡೆ ಬಡೆ ಮಾಡಿ ನನಗೆ ಜೀವ ಬೇದರಿಕೆ ಹಾಕಿದ್ದು ತಾವು ನನಗೆ ಸಾಹಾಯ ಮಾಡಿ ಜೀವನ ನಡೆಸಲು ಸಾಹಾಯ ಮಾಡಲು ಸಂಭಂಧ ಪಟ್ಟ ಠಾಣೆ ಹಾಗೂ ಅಧಿಕಾರಿಗಳಿಗೆ ಆದೇಶಿಸಿ ನನಗೆ ನ್ಯಾಯಾ ದೋರಕಿಸಿ ಕೊಡಲು ಮನವಿ ಇಲ್ಲದ ಪಕ್ಷದಲ್ಲಿ ಗಂಡ, ಅತ್ತೆ, ನಾದಿನಿ, ಮಾವ ಇವರೆಲ್ಲರು ನನ್ನ ಜೀವ ತಗೆಯುವ ಸಂಬವ ಇರುತ್ತದೆ ಆದ್ದರಿಂದ ಮಾನ್ಯರು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: