POLICE BHAVAN KALABURAGI

POLICE BHAVAN KALABURAGI

10 October 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 10/10/2014 ರಂದು ಶ್ರೀ. ರಘು ಎನ್. ಪಿ.ಎಸ್.ಐ ಎಮ್.ಬಿ ನಗರ ಗುಲಬರ್ಗಾರವರು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಮೇಲೆ ಇದ್ದಾಗ ಆಜಾದಪೂರ ರಸ್ತೆಯ ನವಾಬ್ ಸಾಬ ತೋಟದ ಬದಿಗೆ ಸಾರ್ವಜನಿಕ ಸ್ಥಳದ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮರೆಗೆ ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಲು ಅಲ್ಲಿ 13 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ಮುಜಬರ್ ರಹೆಮಾನ ತಂದೆ ಮಹ್ಮದ ಸಲಾವುದ್ದಿನ ಸಾ|| ಜಮ್ ಜಮ್ ಕಾಲೋನಿ ಗುಲಬರ್ಗಾ, 2) ಮಹೆಬೂಬ ತಂದೆ ಉಸ್ಮಾನ ಸಾ|| ಉಮರ ಕಾಲೋನಿ, 3) ಅಬ್ದುಲ ರಶೀದ ತಂದೆ ಅಬ್ದುಲ ಮಜೀದ ಸಾ|| ಯಾದುಲ್ಲಾ ಕಾಲೋನಿ, 4) ಸೈಯದ ಗಫೂರ ತಂದೆ ಸಾಹಬುದ್ದಿನ ಸಾ|| ಯಾದುಲ್ಲಾ ಕಾಲೋನಿ 5) ಅಮ್ಜಾದ ತಂದೆ ಮುನೀರ ಸಾ: ಉಮ್ಮರ ಕಾಲೋನಿ, ಗುಲಬರ್ಗಾ 6) ಸಲಾವುದ್ದಿನ ತಂದೆ ಹಸನ್ ಸಾಬ್ ಬಾಗವಾನ ಸಾ: ಕಮರ ಕಾಲೋನಿ, ಗುಲಬರ್ಗಾ 7) ಅಬ್ದುಲ ಖಾದಿರ್ ತಂದೆ ಅಬ್ದುಲ ಗನಿ ಸಾ: ಬಡಾ ರೋಜಾ, ಗುಲಬರ್ಗಾ 8) ಮೊಹಮ್ಮದ ಆಸೀಫ ತಂದೆ ಎಮ್ಡಿ ಅಜ್ಗರ್ ಸಾ: ಮೆಹಬೂಬ ನಗರ, ಗುಲಬರ್ಗಾ 9) ಅಬ್ದುಲ ರಜಾಕ ತಂದೆ ಅಬ್ದುಲ ಸತ್ತಾರ, ಸಾ: ಮೆಹಬೂಬ ನಗರ ಗುಲಬರ್ಗಾ 10) ಮಲ್ಲಿಕಾರ್ಜುನ ತಂದೆ ರವೀಂದ್ರ ಕುಮಾರ್ ಸಾ: ಬಡಾ ರೋಜಾ ಗುಲಬರ್ಗಾ 11) ಫಯಾಜ್ ಅಹ್ಮದ್ ತಂದೆ ಇಬ್ರಾಹಿಂ ಮೊಹಮ್ಮದ್ ಸಾ: ಮೆಹಬೂಬ ನಗರ, ಗುಲಬರ್ಗಾ 12) ಅಬ್ದುಲ ರಹೀಂ ತಂದೆ ಮೊಹಮ್ಮದ ಅಲಿ ಸಾ: ಮೆಹಬೂಬ ನಗರ, ಗುಲಬರ್ಗಾ 13) ಅಸ್ಲಾಮ್ ತಂದೆ ಅಬ್ಬಾಸ್ ಸಾ: ಬಡೆಪುರ ಕಾಲೋನಿ, ಗುಲಬರ್ಗಾ ಅಂತಾ ತಿಳಿಸಿದ್ದು ಅವರ ಹತ್ತಿರ ಹಾಗೂ ಜೂಜಾಟ ಸ್ಥಳದಿಂದ ಒಟ್ಟು 33,167/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಮೋನಪ್ಪ ತಂದೆ ಸಾಬಣ್ಣ ತಮ್ಮಾಪೂರ ಸಾ:ಹಂದರಕಿ ಗ್ರಾಮ ಇವರು ದಿನಾಂಕ:09-10-2014 ರಂದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ನಮ್ಮ ಹತ್ತಿಬೆಳೆಯ ಹೊಲದಲ್ಲಿ ಎತ್ತುಗಳನ್ನು ಬಿಟ್ಟು ಯಾಕೆ ಮೇಯಿಸುತ್ತಿದ್ದಿ ಅಂತ ಕೇಳಿದ್ದರಿಂದ ಅದೇ ದ್ವೇಶ ಇಟ್ಟುಕೊಂಡು ನಮ್ಮೂರ, ಹಣಮಂತ ತಂದೆ ದೇವಪ್ಪ ಬುನ್ನಾ, ಸಂಗಡ ಐದು ಜನರು ಕೂಡಿಕೊಂಡು ನಮ್ಮ ಮನೆಗೆ ಬಂದು ನಮಗೆ ಏ ಬ್ಯಾಡ ಸೂಳಿ ಮಕ್ಕಳೇ ಬರ್ರಲೇ ಹೊರಗಾ ಅಂತ ಜಾತಿ ಎತ್ತಿ ಬೈಯುತ್ತಿದ್ದಾಗ, ನಾನು ಮತ್ತು ನನ್ನ ತಮ್ಮ ಹೊರಗಡೆ ಬಂದಿದ್ದು ಆಗ ನನಗೆ ಕೊಲೆ ಮಾಡಿ ಮುಗಿಸಬೇಕೆಂಬ ಉದ್ದೇಶದಿಂದ ನನಗೆ ಬಡಿಗೆಯಿಂದ ಎಡಕಿವಿಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದ್ದಲ್ಲದೇ, ಬಿಡಿಸಲು ಬಂದ ನನ್ನ ತಮ್ಮ ಹಾಗೂ ಅತ್ತಿಗೆಯಾದ ಲಕ್ಷ್ಮೀ ಇಬ್ಬರಿಗೂ ಬಡಿಗೆ ಮತ್ತು ಕಲ್ಲುಗಳಿಂದ ಹಾಗೂ ಕೈಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: