POLICE BHAVAN KALABURAGI

POLICE BHAVAN KALABURAGI

15 October 2014

Gulbarga District Reported Crimes

ಮನೆ ಕಳವು ಮಾಡುತ್ತಿದ್ದ ಆರೋಪಿತರ ಬಂಧನ :
ಅಶೋಕ ನಗರ ಠಾಣೆ : ಠಾಣಾ ವ್ಯಾಪ್ತಿಯ ಶಕ್ತಿ ನಗರ ಬಡಾವಣೆಯಲ್ಲಿ ದಿನಾಂಕ 4-3-2010 ರಂದು ಮದ್ಯಾಹ್ನ 2 ಗಂಟೆಗೆ ಶ್ರೀ ಗುರುರಾಜ ತಂದೆ ಅಣ್ಣಾರಾವ ಕುಲಕರ್ಣಿ ಸಾ: ಶಕ್ತಿ ನಗರ ಗುಲಬರ್ಗಾ ಇವರು ಮನೆಯ ಕೀಲಿ ಮುರಿದು ಅಲಮಾರಿಯಲ್ಲಿದ್ದ ಬೆಳ್ಳಿಯ ಪೂಜಾಸಾಮಾನುಗಳನ್ನು ದಿನಾಂಕ 2/3-3-2010 ರ ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ದೂರು ಸಾರಾಂಶದ  ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯ ಗುನ್ನೆ ನಂ 23/2010 ಕಲಂ 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು  ಶ್ರೀ ಅಮೀತಸಿಂಗ್ IPS ಎಸ್.ಪಿ.. ಗುಲಬರ್ಗಾ, ಶ್ರೀ ಮಹಾಂತೇಶ. ಬಿ ಅಪರ ಎಸ.ಪಿ ಗುಲಬರ್ಗಾ ಮತ್ತು ಶ್ರೀ ಮಹಾನಿಂಗ ನಂದಗಾಂವಿ ಡಿವೈಎಸ್.ಪಿ ಉಪ ವಿಬಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ  ಅಶೋಕನಗರ ಪೊಲೀಸ ಠಾಣೆಯ ಶ್ರೀಮತಿ ಸುಧಾ ಆದಿ ಪಿಐ, ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಕೆ.ಎಸ್‌.ಕಲ್ಲದೇವರ ಪಿ.ಎಸ್‌.ಐ(ಕಾ.ಸು) ಶಿವಪುತ್ರಪ್ಪಾ ಎ.ಎಸ.ಐ ಹಾಗೂ ಸಿಬ್ಬಂದಿ ಜನರಾದ ಪ್ರವೀಣಕುಮಾರ ಪಿಸಿ 907, ಗುರುಮೂರ್ತಿ ಪಿಸಿ 269 ಬಸವರಾಜ ಪಿಸಿ 765, ಸುರೇಶಕುಮಾರ ಪಿಸಿ 534  ಡ್ರೈವರ ಶಿವಯ್ಯ ಎಪಿಸಿ 10 ರವರು ಒಂದು ತಂಡವನ್ನು ರಚಿಸಿ ಮನೆಕಳ್ಳತನವಾಗದಂತೆ ಹಾಗೂ ಆರೋಪಿತರನ್ನು ಪತ್ತೆ ಹಚ್ಚಲು ಕ್ರಮ ಕೈಕೊಂಡಿದ್ದು  ಕನ್ಯಾ ಕಳವು ಮಾಡುವ ಆರೋಪಿತರನ್ನು ಹಿಡಿದು ಅವರಿಂದ ಒಂದುವರೆ ಕೆ.ಜಿ ಯ ಬೆಳ್ಳಿಯ ಅ.ಕಿ 40,000/- ರೂ ಮೌಲ್ಯದ ಮಾಲನ್ನು  ಜಪ್ತಿ ಮಾಡಿಕೊಂಡಿರುತ್ತಾರೆ
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:-14/10/2014 ರಂದು ಮುಂಜಾನೆ ಮೃತ ರಾಜೇಶ್ವರಿ ಗಂಡ ಗಿರೀಶ ದಾನಪ್ಪಗೌಡ ಇವರು ಕರ್ತವ್ಯದ ಕುರಿತು ಆಳಂದ ಚೆಕ್ಕ ಪೊಸ್ಟದ ಹತ್ತಿರ ಇರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗಿ ಕರ್ತವ್ಯ ಮುಗಿಸಿಕೊಂಡು ಮರಳಿ ಮನೆಗೆ ಸಂಜೆ 06:00 ಗಂಟೆ ಸುಮಾರಿಗೆ ಮೃತಳು ನಡೆದುಕೊಂಡು ಆಳಂದ ಪೊಸ್ಟದ ಆಟೋ ಸ್ಟಾಂಡಕ್ಕೆ ಬಂದು ರೋಡ ಬದಿಯಿಂದ ರೋಡ ಕ್ರಾಸ ಮಾಡುತ್ತಿದ್ದಾಗ ಆಗ ಆಳಂದ ಕಡೆಯಿಂದ ಟವರಸ್ ಲಾರಿ ನಂ ಎಂ.ಎಚ್-12 ಹೆಡಿ-2074 ನೇದ್ದರ ಚಾಲಕನು ಅತೀವೇಗದಿಂದ ಮತ್ತು ನಿಸ್ಕಾಜಿತನದಿಂದ ನಡೆಸುತ್ತಾ ಯಾವುದೇ ಸಿಗ್ನಲ್ ಲೈಟ ಹಾಕದೇ ಮತ್ತು ಮುನ್ಸೂಚನೇ ನೀಡದೇ ವೇಗದಲ್ಲಿ ಟರ್ನ ಮಾಡಿ ರಾಜೇಶ್ವರಿ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೃತ ರಾಜೇಶ್ವರಿ ಇವಳಿಗೆ ಬಲಗಣ್ಣಿನ ಮೇಲೆ ಹರಿದ ಭಾರಿ ರಕ್ತಗಾಯ ಮತ್ತು ಕಣ್ಣಿಗೆ ರಕ್ತಗಾಯವಾಗಿ ಉಬಿದ್ದು, ಬಲ ಹೊಟ್ಟೆಯ ಮೇಲೆ ತರಚಿದ ರಕ್ತಗಾಯಗಳಾಗಿ ರಕ್ತಸ್ರಾವ ಆಗಿದ್ದು ಅವಳಿಗೆ ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ವೈದ್ಯರು ಅವಳಿಗೆ ನೋಡಿ ಸದರಿಯವಳು ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಅಪಘಾತವಾದ ನಂತರ ಸದರಿ ಟವರಸ್ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಅರುಣ ತಂದೆ ದೇವಿಂದ್ರಪ್ಪ ಪೂಜಾರಿ ಸಾ: ಶಿವಲಿಂಗೇಶ್ವರ ಗುಡಿ ಹತ್ತಿರ ಶಿವಾಜಿ ನಗರ ಗುಲಬರ್ಗಾ  ರವರು ದಿನಾಂಕ 14-10-2014 ರಂದು ಸಾಯಂಕಾಲ ಪಿ,ಡಿ,ಎ ಕಾಲೇಜದಿಂದ ತನ್ನ ಗೆಳಯನಾದ ಅಭಿಷೇಕ ಇತನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಕೆಎ-32 ಇಬಿ-7184 ರ ಹಿಂದುಗಡೆ ನಾನು ಕುಳಿತು ಮನೆಯ ಕಡೆಗೆ ಹೋಗುವಾಗ ಐವಾನ ಈ ಷಾಯಿ ಎದುರು ಬಸವೇಶ್ವರ ಶಿಕ್ಷಣ ಸಂಸ್ಥೆಗೆ ಸಂಬಂದಿಸಿದ ಆಫೀಸ ಎದುರಿನ ರೋಡ ಮೇಲೆ ಮೋ/ಸೈಕಲ ನಂಬರ ಎಮ್.ಹೆಚ್-03 ಎಇ-3359 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಗಡೆ ಕಟ್ಟ ಹೊಡೆದು ತಿರುಗಿಸಿ  ಎದುರಿನಿಂದ ಅಭಿಷೇಕ ಇತನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಮತ್ತು ಅಭಿಷೇಕ ಇತನಿಗೆ ಗಾಯಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ನಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-10-2014 ರಂದು  ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಪಂಚರೊಂದಿಗೆ ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಲಭೀಮ ತಂದೆ ಸುಭಾಶ ಜಮಾದಾರ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 620/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 14-10-2014 ರಂದು  ಅಫಜಲಪೂರ ಪಟ್ಟಣದಲ್ಲಿ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಪಂಚರೊಂದಿಗೆ ಹೊರಟು. ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಮಲ್ಲಿಕಾರ್ಜುನ ಚೌಕ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪೀರಪ್ಪ ತಂದೆ ಹೀರಗಪ್ಪ ಮಾಗಣಗೇರಿ ಸಾ|| ಬಗಲೂರ ತಾ|| ಸಿಂದಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 460/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

No comments: