POLICE BHAVAN KALABURAGI

POLICE BHAVAN KALABURAGI

11 September 2014

Gulbarga District Reported Crimes

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಭೀಮರಾಯ ಇವರ ಮಗಳಾದ ಕುಮಾರಿ ಇವಳಿಗೆ ದಿನಾಂಕ 11.09.2014 ರಂದು ಮುಂಜಾನೆ ವೀರಭದ್ರಪ್ಪ ಪುಜಾರಿ ಇವರ ಹೊಲದಲ್ಲಿನ ಮನೆಗೆ ಹೋಗಿ ಎತ್ತಿನ ಗಾಡಿಯ ಕೀಲಿಗೆ ಹಾಕುವ ಎಣ್ಣೆಯನ್ನು ತರಲು ಕಳುಹಿಸಿದ್ದು ಫಿರ್ಯಾದಿಯ ಮಗಳು ಕಿಲೆಣ್ಣೆಯನ್ನು ತರಲು ಹೋದಾಗ ನಮ್ಮೂರ ಕುರುಬ ಜನಾಂಗದ ವೀರಭದ್ರಪ್ಪ ಈತನ ಮಗನಾದ ಆರೋಪಿತ ಮರಲಿಂಗಪ್ಪ ಪುಜಾರಿ ಈತನು ಬೆಳಗ್ಗೆ 08:00 ಗಂಟೆಯ ಸುಮಾರಿಗೆ ಕೀಲೆಣ್ಣೆ ಕೊಡುತ್ತೆನೆ ಬಾ ಅಂತ ಮನೆಯೋಳಗೆ ಕರೆದುಕೊಂಡು ಹೋಗಿ ತನ್ನ ಹೊಲದಲ್ಲಿನ ಮನೆಯಲ್ಲಿ ಮೈಮೆಲಿನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಬಸವಂತರಾವ ತಂದೆ ಗುಂಡಪ್ಪಾ ಟರಕೆ ಸಾ: ಸಂಗಾ ಕಾಲೋನಿ ಆಳಂದ ಇವರ ಮಗನಾದ ಕು:ನಾಗರಾಜ ತಂದೆ ಬಸವಂತರಾಯ ಟರಕೆ ವಯಾ: 16 ವರ್ಷ ಇತನು ದಿನಾಂಕ 08-09-2014 ರಂದು ಬೆಳಿಗ್ಗೆ 8:15 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವನು ಇನ್ನುವರೆಗೆ ಮನೆಗೆ ಬಂದಿರುವುದಿಲ್ಲ. ನಾವು ಇತನ ಬಗ್ಗೆ ನಮ್ಮ ಸಂಬಂದಿಕರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನಮಗೆ ಯಾವದೇ ಸುಳಿವು ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: