POLICE BHAVAN KALABURAGI

POLICE BHAVAN KALABURAGI

16 September 2014

Gulbarga District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ಜಗದೀಶ ಚವ್ಹಾಣ ಸಾ:ವಿಶಾಲ ನಗರ 6ನೇ ಕ್ರಾಸ ತಾರಫೈಲ್ ಗುಲಬರ್ಗಾ. ಇವರ ಮಗಳಾದ ಸಂಧ್ಯಾರಾಣಿ ವಯಾ:16 ವರ್ಷ ಇವಳು ಕಾಲೇಜಿನಲ್ಲಿ ಓದುತ್ತಿದ್ದು ಇತ್ತೀಚೆಗೆ ನಮ್ಮ ಓಣಿಯ ಅಜಯ ಇತನು ನನ್ನ ಮಗಳಿಗೆ ಕಾಲೇಜಿಗೆ ಹೋಗುವಾಗ ಬರುವಾಗ ನನಗೆ ಮದುವೆಯಾಗು ಅಂತಾ ಒತ್ತಾಯ ಮಾಡಿದ್ದು, ನಾನು ಇಂದಿಲ್ಲ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನಿದ್ದೆ ಆದರೆ ಬರುಬರುತ್ತಾ ಅಜಯ ಕಾಟ ಹೆಚ್ಚಾಗ ತೊಡಗಿತು ನಿನ್ನನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡುತ್ತೇನೆ ಅಂತಾ ನನ್ನ ಮಗಳಿಗೆ ಸುಮಾರು ಸಲ ಜೀವ ಭಯ ಹಾಕಿದ್ದು, ಇರುತ್ತದೆ. ದಿನಾಂಕ 08-09-2014 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಅಜಯ ಇತನು ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ನನಗೆ ಮನವರಿಕೆಯಾಗಿರುತ್ತದೆ. ನಾವು ಒಂದು ವಾರದಿಂದ ಎಲ್ಲಾ ಕಡೆ ಹುಡುಕಾಡಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಭೀಮಶಾ ವಗ್ಗೆಗೋಳ ಸಾ: ಶ್ರೀನಿವಾಸ ಸರಡಗಿ ಇವರು  ದಿನಾಂಕ 14-09-2014 ರಂದು ನಿಂಬರ್ಗಾದಲ್ಲಿ ನಭೀಸಾಬ ತಂದೆ ಪಕೀರಸಾಬ ಜಮಾದಾರ ಸಾ: ಶ್ರೀನಿವಾಸ ಸರಡಗಿ ಇವರ ಸಂಬಂಧಿಕರ ಮದುವೆ ಮುಗಿಸಿಕೊಂಡು ಫೀರ್ಯಾದಿಯ ಟಂ-ಟಂ ನಂ ಕೆಎ-32-ಎ- 1293 ನೇದ್ದರಲ್ಲಿ ಮರಳಿ ಊರಿಗೆ ಹೋಗುವಾಗ ನಿಲೂರ ಕ್ರಾಸ್ ಹತ್ತಿರ ಸ್ಟೇಶನ್ ಗಾಣಗಾಪೂರದಿಂದ ಪಟ್ಟಣ್ಣದ ಕಡೆಗೆ ಹೋಗುವ ಮುಖ್ಯ ಡಾಂಬರ ರಸ್ತೆಯ ಮೇಲೆ ಮಧ್ಯಾಹ್ನ  04:00 ಗಂಟೆ ಸುಮಾರಿಗೆ ಎದುರಿನಿಂದ ಟಂ-ಟಂ ನಂ ಕೆಎ-32-ಎ-7669 ನೇದ್ದರ ಚಾಲಕನು ತನ್ನ ಟಂ-ಟಂ ನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಹೊಡೆಸಿ ಟಂ-ಟಂ ನಿಂದ ಕೇಳಗೆ ಇಳಿದು ಓಡಿ ಹೋಗಿರುತ್ತಾನೆ ಟಂ-ಟಂ ನಂ ಕೆಎ-32-ಎ- 1293 ನಡೆಸುತ್ತಿದ್ದ ಫೀರ್ಯಾದಿಗೆ ಹಾಗೂ ಅದರಲ್ಲಿದ್ದ ನಭೀಸಾಬ ಜಮಾದಾರ ಮತ್ತು ಆತನ ಸಂಬಂಧಿಕರಿಗೆ ಅಪಘಾತದಲ್ಲಿ ಗಂಭೀರ, ರಕ್ತಗಾಯ, ಗುಪ್ತಗಾಯ ವಾಗಿದ್ದು ಅಲ್ಲದೇ ಟಂ-ಟಂ ನಂ ಕೆಎ-32-ಎ-7669 ನೇದ್ದರಲ್ಲಿ ಚಾಲಕನ ಪಕ್ಕದ  ಶೀಟಿನಿಲ್ಲಿ ಕುಳಿತಿರುವ ರಾಹುಲ್ ಸಾ: ಸ್ಟೇಶನ ಗಾಣಗಾಪೂರ ಇವನಿಗೂ ಕೂಡಾ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ವಾಗಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ  ಗುಲಾಮ್ ದಸ್ತಗಿರಿ ತಂದೆ ಸೈಫನ್ ಸಾಬ್ ಸಾ/ ರಹಿಮತ್ ನಗರ ಹಳೇ ಜೇವರ್ಗಿ ರೋಡ್ ಗುಲಬರ್ಗಾ ಇವರು ದಿನಾಂಕಃ 14/09/2014 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ನನ್ನ ಮಗಳಾದ ಸಾನಿಯಾ ಬೇಗಂ ಇವಳಿಗೆ ಹಲ್ಲು ನೋವಾಗುತ್ತಿದ್ದರಿಂದ ಮಹ್ಮದ್ ರಫೀ ಚೌಕ್ ರಿಂಗ್ ರೋಡ್ ಹತ್ತಿರವಿರುವ ಡಾ/ ಕರ್ನುಲ್ ದವಾಖಾನೆಗೆ ನಮ್ಮ ಟಿವಿಎಸ್ ಎಕ್ಸ್ಎಲ್ ಮೊಟಾರ್ ಸೈಕಲ್ ನಂ. ಕೆಎ.32 ಇಇ-6367 ನೇದ್ದರ ಮೇಲೆ ನಾನು ನನ್ನ ಗಂಡ ಗುಲಾಮ್ ದಸ್ತಗಿರಿ, ಮಗಳಾದ ಸಾನಿಯಾ ಬೇಗಂ ಎಲ್ಲರು ಹೋಗಿ ಚಿಕಿತ್ಸೆ ಪಡೆದುಕೊಂಡು ಮರಳಿ ಮೋ/ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ಬಾರಾ ಹಿಲ್ಸ್ ಹತ್ತಿರವಿರುವ ರೋಡಿನ ಮೇಲೆ, ಟಿವಿಎಸ್ ಮೋ/ಸೈಕಲ್ ನಂ. ಕೆಎ.32 ಇಇ-6367 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಸ್ಕಿಡ್ ಆಗಿ ಬಿದ್ದಿದ್ದು, ನನಗೆ ಮತ್ತು ನನ್ನ ಮಗಳಿಗೆ ಅಷ್ಟೇನು ಪೆಟ್ಟಾಗಿರುವುದಿಕಲ್ಲ, ನನ್ನ ಗಂಡನಿಗೆ ಬಲಗಡೆ ಮೆಲಕಿನ ಹತ್ತಿರ ತೆರಚಿದ ಗಾಯ, ಬಲಕಿವಿಯಿಂದ ರಕ್ತ ಸೋರುತ್ತಿತ್ತು, ಎರಡೂ ಕೈಗಳ ಮುಂಗೈಗಳಿಗೆ ತೆರಚಿದ ಗಾಯಗಳಾಗಿ ಬೇಹೋಷ್ ಆಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 14/09/2014 ರಂದು 8:30 ಪಿ.ಎಂ. ಸುಮಾರಿಗೆ ಹನ್ನು ತಂದೆ ಘನಿ, ಇಮ್ರಾನ್, ಆಖ್ರಿಬ್ ಹಾಗು ಇತರ 10-12 ಜನ ಸೇರಿ, ಫಿರ್ಯಾದಿ ಮನೆಗೆ ಬಂದು, ತಡೆದು ನಿಲ್ಲಿಸಿ, ಫಿರ್ಯಾದಿದಾರರಿಗೆ ಅಬೇ ರಾಂಡ್ಕೆ ಹಮಾರಿ ಬೆಹನ್ ಫೌಜಿಯಾಕೋ ಸೋನಾ ಲಿಯಾ ಕ್ಯಾ ಬೋಲ್ಕೋ ತೂ ಕೈಸಾ ಪೂಚಾ ಚಿನಾಲಕೆ ಅಂತಾ ಅವಾಚ್ಯ  ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಾಲುಗಳಿಂದ ಮನಸಿಗೆ ಬಂದ ಹಾಗೇ ಹೊಡೆ-ಬಡೆ ಮಾಡಿದ್ದು, ನನದನ ಹಣೆಯ ಎಡಭಾಗಕ್ಕೆ ಪಕ್ಕೆಲುಬು ಮತ್ತು ಹೊಟ್ಟೆಗೆ ಭಾರೀ ಗುಪ್ತಗಾಯಗಳಾಗಿರುತ್ತವೆ. ಮತ್ತು ಇವತ್ತು ನಿನಗೆ ಏನೂ ಆಗಿಲ್ಲ ಮುಂದೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಮನೋಹರ ತಂದೆ ಶಿವಲಿಂಗಪ್ಪ ವಠಾರ ಸಾ: ತೋಟ್ನಳ್ಳಿ ತಾ: ಸೇಡಂ ಇವರು ದಿನಾಂಕ: 13-09-2014 ರಂದು 05:00 ಗಂಟೆಗೆ ಫೀರ್ಯಾದಿಯು ತನ್ನ ಹೊಲದಿಂದ ಮನೆಗೆ ಬರುವಾಗ ಹೊಲ ಸರ್ವೆ ನಂ 15/8 ಸಮೀಪ ಚಂದ್ರಕಾಂತ ತಂದೆ ಪೀರಪ್ಪ ನಂದಿಕೂರ ಸಾ: ತೊಟ್ನಳ್ಳಿ ಇತನು ಹಿಂದಿನಿಂದ ಬಂದವನೆ ಬೋಸಡಿ ಮನಗೆ ನಿನ್ನ ಸೊಕ್ಕು ಬಂದಿದೆ ಇವತ್ತು ನಿನಗೆ ಜೀವ ತೆಗೆದು ಬಿಡುವುದಿಲ್ಲಾ  ಎಂದು ಅವನ ಕೈಯಲ್ಲಿದ್ದ ಕುಡುಗೋಲಿನಿಂದ ನನ್ನ ಹೆಡಕಿನ ಮೇಲೆ ಹೊಡೆಯುದನ್ನು ನೋಡಿ ಅವನ ಹೆಂಡತಿ ಶ್ರೀಮತಿ ನಿರ್ಮಲಮ್ಮ ಅವನ ಕೈಯಿಂದ ಕುಡಗೋಲ ಕಸಿದು ಕೊಂಡಳು ಆಗ ಅಲ್ಲೆ ಇದ್ದ ಸಾಯಬಣ್ಣಾ ತಂದೆ ಪುತ್ರಪ್ಪ ಹಾಬಾಳ ಸಾ: ತೊಟ್ನಳ್ಳಿ, ಇತನು ಹೊಡೆಯುವದನ್ನು ನೋಡಿ ಬಿಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಭೈರುಸಿಂಗ್ ತಂದೆ ಪುರಾಣಸಿಂಗ್ ಸೂಲಂಕಿ ಸಾಃ ತಿಲಕ ನಗರ ಗುಲಬರ್ಗಾ ಇವರು ದಿನಾಂಕಃ 15/09/2014 ರಂದು ನನ್ನ ಅಂಗಡಿಗೆ ಬಂದು ನೋಡಲು ಸುರಕ್ಷಿತವಾಗಿದ್ದು ನಂತರ ಅಲ್ಲಿಂದ ನಾನು ನನ್ನ ತಮ್ಮನಿಗೆ ಕರೆದುಕೊಂಡು ಬರಲು ರೈಲ್ವೆ ಸ್ಟೇಷನಕ್ಕೆ ಹೋಗಿ ನನ್ನ ತಮ್ಮನಿಗೆ ಕರೆದುಕೊಂಡು 05:30 ಎ.ಎಂ ಸುಮಾರಿಗೆ ಅಂಗಡಿಗೆ ಬಂದು ನೋಡಲು ಅಂಗಡಿಯಲ್ಲಿದ್ದ ಲೈಟ ಇರಲಿಲ್ಲಾ ಶಟರ ಎರಡು ಕಡೆಯಿಂದ ಬೆಂಡ್ ಮಾಡಿದ್ದು ನಾನು ಮತ್ತು ನನ್ನ ತಮ್ಮ ಇಬ್ಬರೂ ಒಳಗಡೆ ಹೋಗಿ ಚೆಕ್ ಮಾಡಿ ನೋಡಲಾಗಿ ಅಂಗಡಿಯಲ್ಲಿದ್ದ ಹಾರ್ಡವೇರ್ ಸಾಮಾನುಗಳು ಹೀಗೆ ಒಟ್ಟು ಅಃಕಿಃ 23,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: