POLICE BHAVAN KALABURAGI

POLICE BHAVAN KALABURAGI

06 August 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಮಾಹಾದೇವಪ್ಪ ತಂದೆ ಮಾರುತಿ ವಡ್ಡರ ಸಾ: ಬಟಗೇರಾ(ಕೆ) ಗೇಟ್ ಇವರು ದಿನಾಂಕ: 04-08-14 ರಂದು 3-30 ಪಿಎಮ್.ದ ಸುಮಾರಿಗೆ ಸಾಧಿಕ್ ಇವರ ಹೊಟೇಲನಲ್ಲಿ ಚಹಾ ಕುಡಿದು ಮೊಬೈಲ್ ರಿಚಾರ್ಜ ಕಾರ್ಡ ತಗೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನನ್ನ ಕಾಲು ಆನಂದ ತಂದೆ ವೀರಯ್ಯ ಸ್ವಾಮಿ ಇತನಿಗೆ ಹತ್ತಿದ್ದರಿಂದ ಆನಂದ ಮತ್ತು ಮಾಹಾನಂದ ಇಬ್ಬರೂ ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಆನಂದ ಇತನು ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು ಗುಪ್ತ ಗಾಯ, ಕೈಯಿಂದ ತುಟಿಗಳಿಗೆ ಹೊಡೆದು ರಕ್ತ ಗಾಯ ಮತ್ತು ಗುಪ್ತ ಗಾಯ ಮಾಡಿದ್ದು ಆನಂದ ಇತನು ಕಲ್ಲಿನಿಂದ ಈ ರಂಡೀ ಮಗನ ಸೊಕ್ಕೆ ಬಹಳ ಇದೆ ಅಂತ ಅಂದವನೇ ಕಲ್ಲಿನಿಂದ ಬಲ ಮೆಲಕಿನ ಹತ್ತಿರ ಹೊಡೆದು ರಕ್ತ ಗಾಯ ಮತ್ತು ಗುಪ್ತ ಗಾಯ ಪಡಿಸಿ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಆಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ ;
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಫಿರೋಜ್ ತಂದೆ ಮಹ್ಮದ ಯಾಕೂಬ್ ಇವರು ಈಗ ಸುಮಾರು 06 ತಿಂಗಳ ಹಿಂದೆ ನನಗೆ ಹಣದ ಅಡಚಣೆ ಇದ್ದ ಪ್ರಯುಕ್ತ ನಮ್ಮ ಓಣಿಯಲ್ಲಿರುವ ರಾಮು ಡಿಗ್ಗಿ ಇವರ ಹತ್ತಿರ 10,000/- ರೂ. ಸಾಲವನ್ನು ಬಡ್ಡಿಯಿಂದ ತೆಗೆದುಕೊಂಡಿದ್ದು ಅದರಂತೆ ಪ್ರತಿ ತಿಂಗಳು ಬಡ್ಡಿ ಹಣ ಕೊಡುತ್ತಾ ಬಂದಿದ್ದು, ರಂಜಾನ್ ಹಬ್ಬ ಇದ್ದ ಪ್ರಯುಕ್ತ ಒಂದು ತಿಂಗಳ ಬಡ್ಡಿ ಹಣ ಕೊಡಲು ಆಗಿಲ್ಲಾ. ದಿನಾಂಕಃ 04/08/2014 ರಂದು ರಾತ್ರಿ 09:00 ಪಿ.ಎಂ. ಸುಮಾರಿಗೆ ನಾನು ರಾಮು ಡಿಗ್ಗಿ ಇವರ ಮನೆಗೆ ಹೋಗಿ ನಾನು ಕೇವಲ ಬಡ್ಡಿ ಹಣ ಮಾತ್ರ ಕೊಡುತ್ತೇನೆ ಪ್ರತಿ ದಿನ 100/- ರೂ. ಹಾಕಿ ಕೊಡುವುದಿಲ್ಲಾ ಅಂದಿದ್ದಕ್ಕೆ ಸದರಿ ರಾಮು ಈತನು 100/- ರೂ. ಕೊಡುವುದಿಲ್ಲಾ ಅಂತಿಯಾ ಭೋಸಡಿಕೆ ಅಂದವನೇ ಅಲ್ಲಿಯೇ ಇದ್ದ ಬಡಿಗೆ ತೆಗೆದುಕೊಂಡು ನನಗೆ ಎಡಗೈ ರಟ್ಟೆಯ ಮೇಲೆ, ಎಡಗಡೆ ಮಗ್ಗಲಿಗೆ ಕಾಲುಗಳಿಗೆ ಹೊಡೆದನು ಮತ್ತು ಕೈಗಳಿಂದ ಎಡ ಕಪಾಳಿನ ಮೇಲೆ ಹಾಗು ಕಿವಿಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಅಜರಉದ್ದಿನ ಸಿದ್ದಿಕಿ ತಂದೆ ಮಹ್ಮದ ನಸೀರೋದ್ದಿನ ಸಿದ್ದಿಕಿ ಸಾ|| ಗಾಲಿಬ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ|| 31-07-2014 ರಂದು ಮನೆ ಕೆಲಸ ಮುಗಿಸಿಕೊಂಡು ಸಾಯಂಕಾಲ 07-00 ಗಂಟೆ ಸುಮಾರಿಗೆ  ತನ್ನ ಹೀರೋ ಹೊಂಡಾ ಸ್ಲೇಂಡರ್ ಮೋಟಾರ ಸೈಕಲ ನಂ ಕೆಎ-32-ಎಲ್-8392  ಮನೆಯ ಮುಂದೆ ನಿಲ್ಲಿಸಿ ಲಾಕ್ ಹಾಕಿ ಮನೆಯ ಒಳಗೆ  ಹೋಗಿ ನಂತರ ಊಟ ಮುಗಿಸಿಕೊಂಡು ನಮ್ಮ ತಾಯಿಯವರಿಗೆ ಮಾತ್ರೆಗಳು ತೆಗೆದುಕೊಂಡು ಬರಲು ಅಂತಾ ರಾತ್ರಿ  09-15 ಗಂಟೆಗೆ ಹೊರಗೆ ಬಂದು ನೋಡಲು ಸದರಿ ನನ್ನ ಹೀರೋ ಹೊಂಡಾ ಸ್ಲೇಂಡರ್ ಕಪ್ಪು ಬಣ್ಣದು  ಅಲ್ಲಿ ಇರಲಿಲ್ಲ ಸದರ ನನ್ನ ಮೋಟಾರ ಸೈಕಲ ಯಾರಾದರೂ ನಮ್ಮವರೆ ತೆಗೆದುಕೊಂಡು ಹೋಗಿರಬಹುದು ಅಂತಾ ಅಲ್ಲಿಯವರೆಗೆ ಕಾಯ್ದು ನೋಡಲು ಸದರ ಮೋಟಾರ ಸೈಕಲ ಸಿಕ್ಕಿರುವದಿಲ್ಲ  ಸದರ ಮೋಟಾರ ಸೈಕಲ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂದಾಜ ಕಿಮ್ಮತ್ತು 25,000/- ರೂಪಾಯಿ ಅಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಮಲ್ಲಿಕಾರ್ಜುನ ತಂದೆ ಶಿವಶರಣಪ್ಪಾ ಕಲಶೆಟ್ಟಿ ಸಾ|| ಹೆಬಳಿ ತಾ|| ಆಳಂದ ರವರದೊಂದು ರೇವಣಸಿದ್ದೇಶ್ವರ ಕಾಲನಿಗೆ ಹೋಗುವ ದಾರಿಯಲ್ಲಿ ಆಳಂದ ಪೋಸ್ಟ ಆಫಿಸ್ ಹತ್ತಿರ ಮೋಬಾಯಿಲ್ ಶಾಪ್ ಇಟ್ಟುಕೊಂಡುದ್ದು ದಿನಾಂಕ 04/08/2014 ರಂದು ಎಂದಿನಂತೆ ರಾತ್ರಿ 8:30 ಪಿಎಮ್‌ಕ್ಕೆ ನಾನು ನನ್ನ ಮೋಬಾಯಿಲ್ ಶಾಪ್ ಬಂದ ಮಾಡಿಕೊಂಡು ಮನೆಗೆ ಹೋಗಿ ಊಟ ಮಾಡಿ ಮಲಗಿರುತ್ತೇನೆ, ಮರುದಿನ ಬೆಳಿಗ್ಗೆ 8 ಎಎಮ್‌ಕ್ಕೆ ದಿನಾಂಕ 05/08/2014 ರಂದು ಮೋಬಾಯಿಲ್ ಶಾಪಗೆ ಬಂದು ತೆರೆದು ನೋಡಿದಾಗ ಒಳಗಡೆ ಇದ್ದ ಮೋಬಾಯಿಲ್ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹೊರಗಡೆಯಿಂದ ಶೆಟರ್ ಒಡೆದು ಒಳಗಡೆ ನುಗ್ಗಿ ಯಾರೋ ಕಳ್ಳರು ಒಳಗಡೆ ಇದ್ದ ಮೋಬಾಯಿಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅವುಗಳ ಅ.ಕಿ.ಒಟ್ಟು 22000/- ಸಾವಿರ ರೂಪಾಯಿ ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: