POLICE BHAVAN KALABURAGI

POLICE BHAVAN KALABURAGI

11 July 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 11-07-2014 ರಂದು ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಹೊರಟು. ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ಮರೆಯಾಗಿ ನಿಂತು  ನೋಡಲು ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಪ್ಪ ತಂದೆ ಅಣ್ಣಪ್ಪ ಹೂಗಾರ ಸಾ|| ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 270/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ  ಪಂಪಣ್ಣ ತಂದೆ ನಿಂಗಪ್ಪ ಸಜ್ಜನ  ಸಾ|| ಮನೆ ನಂ; 1-949/70/2ಡಿ/50-51 ಆಕಾರ್ಶ ನಿಲಯ ಓಜಾ ಕಾಲೊನಿ ಗುಲಬರ್ಗಾ ಇವರು  ತಮ್ಮ ಸೈಕಲ್ ಮೋಟಾರ ಬಜಾಜ ಕ್ಯಾಲಿಬುರ ನಂ ಕೆಎ 38 ಹೆಚ್ 3422 ನೇದ್ದನ್ನು ದಿನಾಂಕ 29-06-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ರೇಲ್ವೆ ಸ್ಟೇಷನ ಹತ್ತಿರ ನಿಲ್ಲಗಡೆ ಮಾಡಿ ತಮ್ಮ ಕೆಲಸ ಮುಗಿಸಿಕೊಂಡು ರಾತ್ರಿ 09-20 ಗಂಟೆಗೆ ಮರಳಿ ಬಂದು ನೋಡಲಾಗಿ ಸದರಿ ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಎಲ್ಲಾಕಡೆ ಹುಡಕಾಡಿದರೂ ಸಹ  ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ನನ್ನ ಸೈಕಲ್ ಮೋಟಾರ ಬಜಾಜ ಕ್ಯಾಲಿಬುರ ನಂ ಕೆಎ 38 ಹೆಚ್ 3422  ಚಸ್ಸಿ ನಂ; DDFBGC79949  ಇಂಜಿನ್ ನಂ;  DDMBGC29134  || ಕಿ|| 15000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: