POLICE BHAVAN KALABURAGI

POLICE BHAVAN KALABURAGI

21 July 2014

Gulbarga District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 20-07-2014 ರಂದು 11-30 ರಿಂದ 5 ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ನನ್ನ ಅಂಗಡಿ ಸೆಟರ್ ಮುರಿದು ಒಳಗೆಡೆ ಇರುವ ಝರಾಕ್ಸ ಯಂತ್ರ ಸ್ಟೆಷನರಿ  ಸಾಮಾನುಗಳು ಮತ್ತು ನಗದು ಹಣ 10,000/- ರೂ ಹೀಗೆ ಒಟ್ಟು 24,000/- ರೂ ಬೆಲೆ ಬಾಳುವ ವಸ್ತುಗಳು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ನಾನು ಮುಂಜಾನೆ 5 ಗಂಟೆ ಸುಮಾರಿಗೆ ನಾನು ಮನೆಯ ಹೊರಗಡೆ ಬಂದಾಗ ನೋಡಿರುತ್ತೇನೆ ಅಂತಾ ಶ್ರೀ ಸಾತಪ್ಪ ತಂದೆ ವಿಠಲ ಭಜಂತ್ರಿ ಸಾ: ಪ್ಲಾಟ ನಂ 59/1 ನ್ಯೂ ಘಾಟಗೇ ಲೇಔಟ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಕಲ್ಯಾಣಿ ತಂದೆ ಮಾಪು ಮಾಂಗ ಸಾ|| ಹೊದಲೂರ ತಾ|| ಆಳಂದ ಇವರ ಮಗನಾದ ಸುನೀಲ ಇತನು ಆಳಂದದಲ್ಲಿ ಐಟಿಐ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ, ದಿನಾಂಕ 20/07/2014 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಫೋನ್ ಮೂಲಕ ಮಾಹಿತಿ ತಿಳಿದಿದ್ದೆನೆಂದರೆ ನನ್ನ ಮಗ ಸುನೀಲ್ ಇತನು ನಮ್ಮೂರ ಪ್ರಶಾಂತ & ರಮೇಶ ಇವರು ಎಲ್ಲರೂ ಕೂಡಿ ಹೊದಲೂರದಿಂದ ಖಸಗಿ ಧಾಬಾಕ್ಕೆ ಹೋಗಿ ಊಟ ಮಾಡಿಕೊಂಡು ಬರಬೇಕು ಅಂತಾ ಮೋಟಾರ ಸೈಕಲ್ ನಂ ಕೆಎ 32 ಇಜಿ 594 ನೇದರ ಮೇಲೆ ನನ್ನ ಮಗ ವಾಹನ ಚಲಾಯಿಸಿಕೊಂಡು ಹೋಗುವಾಗ ತನ್ನಿಂದ ತಾನೆ ಬೈಕಿನ ಲೈಟ್ ಆಫ್ ಆಗಿದ್ದದರಿಂದ ದಾರಿ ಗೊತ್ತಾಗದೆ ರೋಡಿನ ಮೇಲೆ ಜವಳಗಾ & ಖಜೂರಿ ಬಾರ್ಡರ್ ನಡುವೆ ಬಿದ್ದು ತಲೆಗೆ ಪೆಟ್ಟಾಗಿ ಕಿವಿಯಿಂದ ರಕ್ತ ಸೋರುತ್ತಿದೆ ಬೆಹೋಷ ಆಗಿ ಬಿದ್ದಿದ್ದಾನೆ ನನಗೆ ಎಡಗೈ ಅಂಗೈಗೆ,ಎಡಗಡೆ ಭುಜಕ್ಕೆ ಪಾದಕ್ಕೆ ಚರ್ಚಿದ ಗಾಯವಾಗಿದೆ, ಪ್ರಶಾಂತನಿಗೆ ಎಡಗಡೆ ಸೊಂಟಕ್ಕೆ ಚಪ್ಪೆಗೆ ಚರ್ಚಿದ ಗಾಯವಾಗಿದೆ, ಅಂತಾ ರಮೇಶನು ನಾಗನಾಥನ ಫೋನಿಗೆ ಫೋನ್ ಮಾಡಿ ವಿಷಯ ತಿಳಿಸಿ ಉಮರ್ಗಾ ದವಾಖಾನೆಗೆ ಒಯ್ಯುತ್ತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನನಗೆ ರಾತ್ರಿ ಹೋಗಲು ವಾಹನದ ಸೌಕರ್ಯ ಇರದಿದ್ದ ಕಾರಣ ನನ್ನ ಮಗನ ಹತ್ತಿರ ಹೋಗಲು ಆಗಿರುವುದಿಲ್ಲ, ನಂತರ ಸ್ವಲ್ಪ ಸಮಯದ ಮೇಲೆ ನನ್ನ ಮಗ ಸುನೀಲ ಇತನು ಅಪಘಾತದಲ್ಲಿ ಮೋಟಾರ ಸೈಕಲ್ ನೇದನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಆಯ ತಪ್ಪಿ ಬಿದ್ದು ಗಾಯಹೊಂದಿ ಮೃತಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: