POLICE BHAVAN KALABURAGI

POLICE BHAVAN KALABURAGI

16 July 2014

Gulbarga District Reported Crimes

ಮಾರಣಾಂತಿಕ ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಜಗದೇವಿ ಗಂಡ ಕೇಶು ಚವ್ಹಾಣ ಸಾ: ಶಿರಸನ ಬುಗಡಿ ತಾಂಡಾ ಚಂದನಕೇರಾ ತಾ:ಚಿಂಚೋಳಿ ಇವರು ದಿನಾಂಕ 15-07-2014 ರಂದು 6-30 ಪಿಎಮಕ್ಕೆ ಗುಲಬರ್ಗಾಕ್ಕೆ ಬರುವ ಕುರಿತು ನಾನು ಬಾಂಬೆಯಿಂದ ಕನ್ಯಾಕುಮಾರಿ ರೇಲ್ವೆಗೆ ಹತ್ತಿ ದಿನಾಂಕ: 16-07-14 ರಂದು ಬೆಳಗಿನ ಜಾವ 3-30 ಎ.ಎಮ ಸುಮಾರಿಗೆ ಗುಲಬರ್ಗಾ ರೇಲ್ವೆ ಸ್ಟೇಷನಗೆ ಬಂದಿದ್ದು. ರಾತ್ರಿಯಾಗಿದ್ದರಿಂದ ರೇಲ್ವೆ ಸ್ಟೇಷನದಲ್ಲಿಯೇ ಉಳಿದು ಬೆಳಿಗ್ಗೆ 6-00 ಗಂಟೆಗೆ ರೇಲ್ವೆ ಸ್ಟೇಷನದಿಂದ ಒಂದು ಆಟೊಕ್ಕೆ ಗಂಜಿನವರೆಗೆ ಬಿಡಲು ಕೇಳಿದಕ್ಕೆ ಅದಕ್ಕೆ ಅವನು 60 ಬಾಡಿಗೆ ಕೇಳಿದ ನಾನು 40 ಕೊಡುತ್ತೇನೆ ಅಂತಾ ಅಂದಿದ್ದಕ್ಕೆ ಅವನು ಅದಕ್ಕೆ ಒಪ್ಪಿ ಆಟೊದಲ್ಲಿ ಕೂಡಿಸಿಕೊಂಡು ಆಟೊ ಚಾಲಕನು ಗುಲಬರ್ಗಾದ ಆಕಡೆ ಈಕಡೆ ಸುತ್ತಾಡಿ ಗುಲಬರ್ಗಾದ ಹೊರವಲಯದ ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ನಾನು ಈ ಕಡೆ ಯಾಕೆ ಕರೆದುಕೊಂಡು ಬದಿರುವಿ ಅಂತಾ ಅಂದಿದ್ದಕ್ಕೆ ಆಟೊ ನಿಲ್ಲಿಸಿ ನನಗೆ ಹೊರಗೆ ಕರೆದಾಗ ನಾನು ಆಟೊದಿಂದ ಇಳಿದೆನು. ಆಗ ಅವನು ನಿನ್ನ ಹತ್ತಿರ ಹಣ ಬಂಗಾರ ಕೊಡು ಅಂತಾ ಕೇಳಿದನು. ಆಗ ನಾನು ಕೂಲಿ ನಾಲಿ ಮಾಡುವಳಿದ್ದು. ನನ್ನ ಹತ್ತಿರ ಹಣ ಬಗಾರ ಇರುವದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಕೈ ಹಿಡಿದು ಜಗ್ಗಿ ಆಟೊ ನಿಲ್ಲಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕರೆದುಕೊಂಡು ಹೋಗಿ ಪುನಃ ನನಗೆ ಬಂಗಾರ ಹಣ ಕೊಡು ಅಂತಾ ಹೆದರಿಸಿದ ಆಗ ನಾನು ನನ್ನ ಹತ್ತಿರ ಇಲ್ಲಾ ಅಂತಾ ಹೇಳಿದರೂ ನೀನು ಸುಳ್ಳು ಹೇಳುತ್ತಿ ಅಂತಾ ಅಂದವನೆ ಆಟೊದಲ್ಲಿದ್ದ ಒಂದು ರಾಡ ತೆಗೆದುಕೊಂಡು ನನೆಗ ಹಣ ಕೊಡುತ್ತಿ ಇಲ್ಲಾ ಸೂಳಿ ಅಂತಾ ಬೈಯುತ್ತಾ ರಾಡದಿಂದ ನನ್ನ ತಲೆಯ ಹಿಂಬದಿಗೆ ಜೋರಾಗಿ ಹೊಡೆದನು ಅದರಿಂದ ಭಾರಿ ರಕ್ತಗಾಯವಾಯಿತು. ಮತ್ತು ಅದೆ ರಾಡದಿಂದ ಎಡಗಣ್ಣಿನ ಕೆಳಗೆ ಬಲಗಣ್ಣಿನ ಹುಬ್ಬಿಗೆ ಎಡಗಲ್ಲಕ್ಕೆ ಹೊಡೆದು ರಕ್ತಗಾಯಪಡಿಸಿದನು. ಆದ ಗಾಯದಿಂದ ನಾನು ನೆಲಕ್ಕೆ ಕುಸಿದು ಬಿದ್ದೆ. ಆಗ ಅವನು ತನ್ನ ಆಟೊ ಚಾಲು ಮಾಡಿಕೊಂಡು ಓಡಿ ಹೋದನು. ಸದ್ರಿ ಆಟೊ ಚಾಲಕನು ಕಪ್ಪು ಬಣ್ಣ ಎತ್ತರದವನಿದ್ದು ನೋಡಿದರೆ ಗುರ್ತಿಸುತ್ತೇನೆ. ನನಗೆ ಬಂಗಾರ ಹಣ ಕೊಡು ಅಂತಾ ಹೆದರಿಸಿ ರಾಡಿನಿಂದ ಹೊಡೆಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ನನ್ನ ಮಾನಭಂಗಕ್ಕೆ ದಕ್ಕೆಯನ್ನುಂಟು ಮಾಡಿ ಓಡಿ ಹೋದ ಆಟೊಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 16-07-2014 ರಂದು 08-50 ಎ.ಎಮ್ ಕ್ಕೆ ಕೆ.ಸಿ.ಟಿ ಕಾಲೇಜ ಕ್ರಾಸ್ ಹತ್ತಿರ ರಿಂಗ ರೋಡಿನ ಮೇಲೆ ಆರೋಪಿ ಅಬ್ದುಲ ಮಜೀದ ಈತನು ತಾನು ಚಲಾಯಿಸುತ್ತಿದ್ದ ಅಲ್ ಖಮರ್ ಶಾಲಾ ಮಿನಿ ಬಸ್ ನಂ. ಕೆ.ಎ 32 7261 ನೇದ್ದನ್ನು ಕೆ.ಸಿ.ಟಿ ಕಾಲೇಜ ಕ್ರಾಸ್ ಒಳಗಡೆ ರಸ್ತೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಿಂಗ ರೋಡಿನ ಮೇಲೆ ಹುಮನಾಬಾದ ರಿಂಗ ರೋಡ ಕಡೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ ನಂ. ಕೆ.ಎ 33 ಎಮ್ 1808 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಕಾರ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಕೆಳಗೆ ಬಂದು ರೋಡಿನ ಪಕ್ಕಕ್ಕೆ ಪ್ರೆಂಡ್ಸ ಬೇಕರಿ ಎದರುಗಡೆ ನಿಂತ ಶ್ರೀ ಮಹ್ಮದ ಖಲೀಲವುದ್ದಿನ ತಂದೆ ಮಹ್ಮದ ಅಲಾವುದ್ದಿನ ಸಾಃ ಇಸ್ಲಾಂಬಾದ ಕಾಲೂನಿ ಗುಲಬರ್ಗಾ ಇವರಿಗೆ ಅಫಘಾತ ಪಡಿಸಿದ್ದರಿಂದ ಅಪಘಾತದಲ್ಲಿ ಫಿರ್ಯಾದಿಯ ಎಡಗಾಲು ಹಿಮ್ಮಡಿಯ ಮೇಲ್ಬಾಗದಲ್ಲಿ ಭಾರಿ ಪೆಟ್ಟು ಬಿದ್ದು ರಕ್ತಗಾಯವಾಗಿ ತೊಡೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: