POLICE BHAVAN KALABURAGI

POLICE BHAVAN KALABURAGI

28 July 2014

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಂಕರ ಹನಗುಂದಿ ಸಾ: ಹರಿಕ್ರಷ್ಣ ನಗರ ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ 25/07/2014 ರಂದು ರಾತ್ರಿ ವೇಳೆಯಲ್ಲಿ ತನ್ನ ದ್ಚಿಚಕ್ರ ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿದ್ದು ಮುಂಜಾನೆ ಎದ್ದು ನೋಡಲು ನನ್ನ ಬೈಕ್ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲಾ. ಕಾರಣ ನನ್ನ ಹೊಂಡಾ ಶೈನ್ ದ್ವಿಚಕ್ರ ವಾಹನ ನಂ. ಕೆ.ಎ-51 ಇಎ-6641 ಚೆಸ್ಸಿ ನಂ. ME4JC36DGB8144688 ಇಂಜನ ನಂ. JC36E2419368  ಇದರ ಕಿಮ್ಮತ್ತು  45,000/- ರೂ ನೇದ್ದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ವಸಂತಾ ಗಂಡ ದೇವಿದಾಸ ಲಂಬುನವರ  ಸಾ: ಗುಬ್ಬಿ ಕಾಲೋನಿ ಸೇಡಂ ರೋಡ  ಗುಲಬರ್ಗಾ ರವರು ದಿನಾಂಕ: 28/07/2014 ರಂದು ಬೆಳಿಗ್ಗೆ 8=15 ಗಂಟೆಗೆ ಫಿರ್ಯಾದಿಯು ಆರ್.ಟಿ.ಓ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 6453 ನೆದ್ದರಲ್ಲಿ ಕುಳಿತು ಜಿ.ಜಿ.ಹೆಚ್. ಸರ್ಕಲ್ ಕಡೆಗೆ ಬರುತ್ತಿದ್ದಾಗ ಎಮ್.ಆರ್.ಎಮ್.ಸಿ. ಕಾಲೇಜ ಎದುರಿನ ರೋಡ ಮೇಲೆ ಅಟೋರೀಕ್ಷಾ ಚಾಲಕ ಅಟೋರೀಕ್ಷಾ ಎಡ ಬಲ ತಿರುಗಿಸಿ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಚಾಲಕ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: