POLICE BHAVAN KALABURAGI

POLICE BHAVAN KALABURAGI

26 June 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಾಯತ್ರಿ ಗಂಡ ಯದುತ್ತಮ್ ಅವಧಾನಿ ಸಾ;ಮನೆ ನಂ.1-891/24/6(ಬಿ)ಪ್ಲಾಟ ನಂ.33 ದತ್ತ ನಗರ ಎನ್.ಜಿ.. ಕಾಲೂನಿ ಜೇವರ್ಗಿ ರೋಡ ಗುಲಬರ್ಗಾರವರು ದಿನಾಂಕ.26-06-2014 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಬಿದ್ದಾಪೂರ ಕಾಲೂನಿ ರಾಯರ ಮಠದ ಹತ್ತಿರ ಕಾಮಾಕ್ಷಿ ಜಾಗೀರದಾರ ಇವರ ಮನೆಯ ಎದರುಗಡೆ ಕಾಮಾಕ್ಷಿಯವರ ಸಂಗಡ ಮಾತಾಡುತ್ತಾ ನಿಂತಿರುವಾಗ ಇಬ್ಬರು ಅಪರಿಚಿತ ಯುವಕರು ತಮ್ಮ ಕಪ್ಪು ಕಲರನ ಪಲ್ಸರ ಮೋಟಾರ ಸೈಕಲ ಮೇಲೆ ಒಮ್ಮಲೆ ಅವರ ಮೈಮೇಲೆ ಬಂದಂತೆ ಮಾಡಿ ಫಿರ್ಯಾದಿದಾರರ ಕೊರಳಲ್ಲಿದ್ದ  ಅಂದಾಜು 2 ತೊಲೆ ಬಂಗಾರದ  ಮಂಗಳಸೂತ್ರ ಮತ್ತು 1 ತೊಲೆ ಬಂಗಾರದ ಚೈನ ಒಟ್ಟು ಅಕಿ.84,000/-ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 26.06.2014 ರಂದು ಬೆಳಿಗ್ಗೆ 6-35 ಗಂಟೆಯ ಸುಮಾರಿಗೆ ಮೃತ ಈರಣ್ಣ ಹಾಗೂ ಗಾಯಾಳು ಬಸವರಾಜ ಇವರು ತಮ್ಮ ಹೊಲಗಳಿಗೆ ಗಳ್ಯಾ ಹೊಡೆಯುವ ಸಂಬಂಧ ಎತ್ತಿನ ಬಂಡಿ ಕಟ್ಟಿ ಅದರೊಳಗೆ ಕುಳಿತುಕೊಂಡು ಹಿಂದೆ 2 ಎತ್ತುಗಳನ್ನು ಕಟ್ಟಿಕೊಂಡು ಪಟ್ಟಣದಿಂದ ತಮ್ಮ ಹೊಲಗಳಿಗೆ ಹೋಗುವಾಗ ನಿಂಗಣ್ಣ ದೂಳಗೊಂಡ ವರ ಹೊಲದ ಹತ್ತೀರ ರೋಡಿನ ಎಡಗಡೆಯಿಂದ ಇಂದ ಹೋಗುವಾಗ ಗುಲ್ಬರ್ಗಾ ಕಡೆಯಿಂದ ಹಿಂದಿನಿಂದ ಲಾರಿ ಟ್ಯಾಂಕರ್ ನಂ: ಎಂ.ಹೆಚ್-12-ಹೆಚ್ಡಿ-3524 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಒಳಗೆ ಕುಳಿತ ಈರಣ್ಣನು ರೋಡಿನ ಮೇಲೆ ಬಿದ್ದಾಗ ಮೇಲಿನಿಂದ ಟ್ಯಾಂಕರ್ ಹಾಯ್ದು ಹೋಗಿದ್ದರಿಂದ ಕಣ್ಣೀನ ಗುಡ್ಡಿಗಳು ಹೊರಗೆ ಬಂದಿದ್ದು ಬಾಯಿ ನಾಲಿಗೆ ಹೊರಗೆ ಬಂದು ಹಾಗೂ ಹೋಟ್ಟೆಯ ಕರಳುಗಳು ಹೊರಗೆ ಬಂದು ಎರಡು ಕೈಕಾಲುಗಳಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಬಸವರಾಜನಿಗೆ ಬಲಗೈ ಮೊಳಕೈಗೆ , ತಲೆಗೆ , ಟೊಂಕಿಗೆ , ಭಾರಿ ಒಳಪೇಟ್ಟಾಗಿ ಬೆಹುಷನಾಗಿದ್ದು ಅಪಘಾತ ಪಡಿಸಿದ ನಂತರ ಟ್ಯಾಂಕರ್ ಚಾಲಕ  ಹೋಗಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಕುಪ್ಪಣ್ಣ ಭೂಂಯಾರ  ಸಾ|| ಪಟ್ಟಣ ತಾ|| ಜಿ|| ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:-25/06/2014 ರಂದು ರಾತ್ರಿ 09:30 ಗಂಟೆ ಸುಮಾರಿಗೆ ಮೃತ ಇಮಾಮ ಸಾಬ ತಂದೆ ಮೌಲಾಸಾಬ ಮುಲ್ಲಾವಾಲೇ ಇತನು ತನ್ನ ಹಿರೋ ಹೊಂಡಾ ಪ್ಯಾಶನ ಮೋಟಾರ ಸೈಕಲ ನಂ ಕೆಎ-32 ವ್ಹಾ-4667 ನೇದ್ದರ ಮೇಲೆ ಗುಲಬರ್ಗಾ ದಿಂದ ತನ್ನೂರಾದ ಸಾವಳಗಿ ಗ್ರಾಮಕ್ಕೆ ಹೋಗುವ ಕುರಿತು ಕೇರಿ ಬೋಸಗಾ ಕ್ರಾಸ ಹತ್ತಿರ ರೋಡಿನ ಎಡಬದಿಯಿಂದ ನಿದಾನವಾಗಿ ಹೋಗುವಾಗ ಅದೇ ವೇಳೆಗೆ ಎದುರಗಡೆಯಿಂದ ಒಬ್ಬ ಟ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ್‌ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಇಮಾಮ್‌ ಸಾಬನಿಗೆ ಜೋರಾಗಿ  ಡಿಕ್ಕಿ ಹೊಡೆದಿದ್ದರಿಂದ್ದ ತಲೆಗೆ ಹುಬ್ಬಿಗೆ ಮುಖಕ್ಕೆ ಭಾರಿ  ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರ್ಯಾಂಕರ ಚಾಲಕನು ಟ್ರ್ಯಾಂಕರನ್ನು ಹಾಗೇಯ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ  ಶ್ರೀ ಭಾಷಾಮಿಯಾ ತಂದೆ ಮೌಲಾಸಾಬ ವಾಲೇ ಸಾ : ಸಾವಳಗಿ (ಬಿ) ತಾ: ಜಿ: ಗುಲಬರ್ಗಾ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: