POLICE BHAVAN KALABURAGI

POLICE BHAVAN KALABURAGI

18 June 2014

Gulbarga District Reported Crimes

ಗೃಹಿಣಿಗೆ ಕಿರುಕಳ ನೀಡಿ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಗಂಪುಬಾಯಿ ಗಂಡ ಪಂಡಿತ ರಾಠೋಡ ಮು:ನಾಯಕ ನಗರ ಮುರುಮ ತಾ:ಉಮರ್ಗಾ ಜಿ: ಉಸ್ಮಾನಾಬಾದ ಇವರ ಮಗಳಾದ ಸಂಗಿತಾ ಇವಳಿಗೆ ಆಳಂದ ತಾಲ್ಲೂಕಿನ ಹೊದಲೂರ ತಾಂಡಾದ ಅರ್ಜುನ ಇತನಿಗೆ 3 ವರ್ಷಗಳ ಹಿಂದೆ ನಮ್ಮ ದಾರ್ಮಿಕ ಪದ್ದತಿಯಂತೆ ಮದುವೆ ಮಾಡಿ ಕೊಟ್ಟಿದ್ದು ಕೇಲವು ದಿನಗಳ ಕಾಲ ಗಂಡ ಹೆಂಡತಿ ಚೆನ್ನಾಗಿ ಇದ್ದು ಅವರಿಗೆ ನೀಷಾ ಒಂದು ವರ್ಷದ ಹೆಣ್ಣು ಮಗಳು ಇರುತ್ತಾಳೆ. ಈ ಹಿಂದೆ ಒಂದುವರೆ ವರ್ಷದಿಂದ ಅವಳ ಗಂಡ ಅತ್ತೆ ಮಾವ ಮೈದುನ ಇವರೂ ನನ್ನ ಮಗಳಿಗೆ ಕೆಲಸಕ್ಕೆ ಹೊಗುವುದಿಲ್ಲಾ ನಿನಗೆ ಕೆಲಸ ಬುರುವುದಿಲ್ಲಾ ಅಂತಾ ಜಗಳ ತಗೆದು ಹೊಡೆಬಡೆ ಮಾಡಿ ತವರು ಮನೆಗೆ ಕಳುಹಿಸಿದ್ದರಿಂದ ಅವಳಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದರಿಂದ ಅವಳು ನಮ್ಮೂರಿಗೆ ಬಂದಾಗ ನಾನು ಮತ್ತು ವೆಂಕಟ , ಕಮಲಾಬಾಯಿ ಇವರು ಕೂಡಿ ಅವಳ ಗಂಡನಿಗೆ ತಿಳಿ ಹೇಳಿ ಗಂಡನೊಂದಿಗೆ ಸಂಸಾರ ಮಾಡಲು ಹೇಳಿ ಕಳುಹಿಸಿರುತ್ತೇವೆ. ನಂತರ ನನ್ನ ಮಗಳಿಗೆ ಹೆಣ್ಣು ಮಗಳು ಹುಟ್ಟಿದ್ದರಿಂದ ನೀನು ಗಂಡು ಮಗು ಏಕೆ ಹಡೆದಿಲ್ಲಾ ಎಂದು ಹಿಂಸೆ ಕೊಟ್ಟು ಅವಳಿಗೆ ಹೊಡೆ ಬಡೆ ಮಾಡುತ್ತಿದ್ದ ಬಗ್ಗೆ ನನ್ನ ಮಗಳು ಊರಿಗೆ ಬಂದಾಗ ವಿಷಯ ತಿಳಿಸಿರುತ್ತಾಳೆ. ದಿನಾಂಕ 16/06/2014 ರಂದು ರಾತ್ರಿ 8 ಗಂಟೆಗೆ ನನ್ನ ಮಗಳು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನನ್ನ ಗಂಡ 1) ಅರ್ಜುನ ತಂದೆ ತುಳಸಿರಾಮ ಚವ್ಹಾಣ  2) ತುಳಸಿರಾಮ ತಂದೆ ಕಿಶನ ಚವ್ಹಾಣ 3) ಲಲಿತಾಬಾಯಿ ಗಂಡ ತುಳಸಿರಾಮ ಚವ್ಹಾಣ 4) ಅರವಿಂದ ತಂದೆ ತುಳಸಿರಾಮ ಚವ್ಹಾಣ ಇವರು ಕೂಡಿ ಗಂಡು ಮಗು ಹುಟ್ಟಿಲ್ಲಾ ಗಂಡು ಮಗು ಹಡೆದಿಲ್ಲಾ ಎಂದು ಹೊಡೆಬಡೆ ಮಾಡುತ್ತಿದ್ದಾರೆ ನನಗೆ ಬಹಳ ತ್ರಾಸ ಕೊಡುತ್ತಿದ್ದಾರೆ ನಾನು ಸಾಯುತ್ತೇನೆ ಎಂದು ತಿಳಿಸಿರುತ್ತಾಳೆ. ದಿನಾಂಕ 17/06/2014 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನನಗೆ ಗೊತ್ತಾಗಿದೆನೆಂದರೆ ನನ್ನ ಮಗಳು ಸಂಗಿತಾ ಗಂಡ ಅರ್ಜುನ ವಯ: 25 ವರ್ಷ ಇವಳು ಮದ್ಯಾಹ್ನ 1 ಗಂಟೆ ಸುಮಾರಿಗೆ ಮನೆಯಲ್ಲಿ ಯ್ಯಾರು ಇಲ್ಲದ ಸಮಯದಲ್ಲಿ ಅವರ ತ್ರಾಸ ತಾಳಲಾರದೆ ಮನನೊಂದುಕೊಂಡು ಸೀಮೆ ಎಣ್ಣೆ ಮೈ ಮೇಲೆ ಸುರಿದು ಕೊಂಡು ಮೈ ಸುಟ್ಟು ಕೊಂಡಿರುತ್ತಾಳೆ ಆಸ್ಪತ್ರೆಗೆ ಒಯ್ದಿರುತ್ತಾರೆ ಅಂತಾ ವಿಷಯ ಗೊತ್ತಾಗಿ ನಾವು ಬಂದು ನೋಡಲು ನನ್ನ ಮಗಳು ಗುಲಬರ್ಗಾದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಅಂಬರಾಯ ತಂದೆ ಸಿದ್ದಣ್ಣಾ ಪಾಟೀಲ ಸಾಃ ಮನೆ ನಂ. 12-75 ರಾಜಾಪೂರ ಗುಲಬರ್ಗಾ ರವರು  ದಿನಾಂಕಃ 17/06/2014 ರಂದು 06:45 ಪಿ.ಎಂ. ಸುಮಾರಿಗೆ ನಾನು ನನ್ನ ಆಟೋ ನಂ. ಕೆ.ಎ 32 ಎ 6445 ನೇದ್ದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹುಮನಾಬಾದ ರಿಂಗ್ ರೋಡ್ ಕಡೆಗೆ ಹೋಗುವ ಸಲುವಾಗಿ ಆದರ್ಶ ನಗರ ರಿಂಗ್ ರೋಡ್ ಸಮೀಪ ಹೋಗುತ್ತಿರುವಾಗ ಆದರ್ಶ ನಗರ ಕಡೆಯಿಂದ ಕಾರ ನಂ. ಕೆ.ಎ 32 ಎನ್ 1893 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿದ್ದರಿಂದ ಆಟೋ ಉರುಳಿ ಬಿತ್ತು. ಆಗ ನಾನು ರೋಡಿನ ಮೇಲೆ ಬಿದ್ದೇನು. ಆಟೋದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲಾ. ನನಗೆ ಬಲಗಡೆ ಕಪಾಳಕ್ಕೆ ಭಾರಿರಕ್ತಗಾಯ, ಬಲಭುಜಕ್ಕೆ ಮತ್ತು ಭುಜದ ಕೆಳಗೆ ಹಾಗು ಎಡಕಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: