POLICE BHAVAN KALABURAGI

POLICE BHAVAN KALABURAGI

02 June 2014

Glbarga District Reported Crimes

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಬಸಪ್ಪಾ ತಂದೆ ಬಿಮಪ್ಪಾ ಬಜಂತ್ರಿ ಪಿ.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ರವರು. ದಿನಾಂಕ. 18.05.2014 ರಂದು ಶ್ರೀ ಗಣೇಶ ತಂದೆ ರಾಮಚಂದ್ರ ಇವರ ದೂರಿನ ಮೇರೆಗೆ ಠಾಣೆ ಗುನ್ನೆ ನಂ. 87/2014 ಕಲಂ. 420, 384, 387, 448, 323, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣವು ಗುರುಶಾಂತ ಪಟ್ಟೆದಾರ ಇವರ ವಿರುದ್ದ ಇರುತ್ತದೆ. ಸದರಿಯವನು ತನಿಖೆಗೆ ಸಹಕರಿಸುತ್ತಿಲ್ಲ. ದಿನಾಂಕ. 31.05.2014 ರಂದು 6.30 ಪಿ.ಎಂಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಕಛೇರಿ ಸ್ಟೇಪ ಹತ್ತಿರ ಗುರುಶಾಂತ ಪಟ್ಟೆದಾರ ಇವನು ನನ್ನನ್ನು ನೋಡಿ ನಿನಗೆ ಸಸ್ಪೆಂಡ ಮಾಡುತ್ತೇನೆ ಅಂತಾ ಒದರಾಡಿದನು. ಮತ್ತು ಇಂದು ದಿನಾಂಕ. 01.06.2014 ರಂದು 12.20 ಪಿ.ಎಂಕ್ಕೆ ನಾನು ಮತ್ತು ಪಿ.ಎಸ್.ಐ (ಅವಿ) ಮತ್ತು ಸಿಬ್ಬಂದಿಯವರಾದ ಅಶೋಕ ಪಿಸಿ-625, ಶಿವರಾಜ ಪಿಸಿ-277, ಚನ್ನಮಲ್ಲಪ್ಪಾ ಪಿಸಿ-241, ಹಾಜಿಮಲಂಗ ಪಿಸಿ-640, ಶಿವಾನಂದ ಪಿಸಿ-1240, ಅಕ್ಬರ ಪಿಸಿ-784 ಕೂಡಿ ಡಿ.ಎಸ್.ಪಿ ಆಫಿಸಿನಿಂದ ಠಾಣೆಗೆ ಬರುವಾಗ ತಾಲ್ಲುಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ ಎದುರಿಗೆ ಸದರಿ ಗುರುಶಾಂತ ಪಟ್ಟೆದಾರ ಇವನು ನನ್ನ ಜೀಪನ್ನು ತಡೆದು ನಿಲ್ಲಿಸಿ ಏ ನಿನ್ನ ಒಂದು ವಾರದಲ್ಲಿ ಸಸ್ಪೆಂಡ ಮಾಡುತ್ತೇನೆ ನಾನು ಸಿ.ಎಂ ಮತ್ತು ಹೆಚ್.ಎಂ ಗೆ ಬೇಟಿಯಾಗಿ ಬಂದಿದ್ದೆನೆ ನಿನ್ನನ್ನು ನೋಡುತ್ತೇನೆ ಅಂತ ಅಂದವನೆ ತನ್ನ ಹತ್ತಿರ ಇದ್ದ ಪಿಸ್ತೂಲಿನಿಂದ ನನಗೆ ತೊರಿಸಿ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದನು. ಮತ್ತು ಅವ್ಯಾಚ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-06-2014 ಸರಕಾರಿ ಪ್ರೌಡ ಶಾಲೆ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 5 ಜನ ಆರೋಪಿತರನ್ನು ಹಿಡಿದು ವಿಚಾರಿಸಲು 1.ಬಸವರಾಜ ತಂದೆ ಶಿವಶರಣಪ್ಪ ಅಗಸಿ 2. ಶರಣಬಸು ತಂದೆ ಶಿವಯೋಗೆಪ್ಪ ನಂದಗೇರಿ ಸಾ : ಇಬ್ಬರು ಸೊನ್ನ 3.ಸಿದ್ದಪ್ಪ ತಂದೆ ದುಂಡಪ್ಪ ಕೋರಳ್ಳಿ 4. ರವಿ ತಂದೆ ಸಿದ್ದಣ್ಣ ಬಿರಾದ 5. ರಾಜು ತಂದೆ ಚನ್ನಬಸಪ್ಪ ಹಳ್ಳೆಪ್ಪಗೋಳ ಸಾ : ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 8910/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಬಾನಾಬೇಗಂ ಗಂಡ ಜಮೀಲ್‌ ಅಹ್ಮದ  ಸಾ:ಮದೀನಾ ಕಾಲೊನಿ  ಗುಲಬರ್ಗಾ ಇವರು ಮಗಳಾದ  ವ:7 ವರ್ಷ ಇವಳು ಆಲ ಅಮೀನ್ ಉರ್ದು ಶಾಲೆಯಲ್ಲಿ 2 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ.  ನನಗೆ ಆರಾಮ ಇಲ್ಲದ ಪ್ರಯುಕ್ತ ದಿನಾಂಕ:30/05/2014 ರಂದು ಮುರಗೇಶ ಪಸ್ತಾಪುರ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿ ಉಪಚಾರ ಪಡೆದು ಇಂದು ದಿನಾಂಕ:31/05/2014 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಸಾಯಂಕಾಲ 4.30 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಇದ್ದಿರುತ್ತೇನೆ. ಇಂದು ದಿನಾಂಕ:01/06/2014 ರಂದು ನನ್ನ ಗಂಡನು ರವಿವಾರ ರಜೆ ಇರುವದರಿಂದ ಕೆಲಸಕ್ಕೆ ಹೋಗದೆ ನೀಲೂರ ದರ್ಗಾಕ್ಕೆ  ಹೋಗಿರುತ್ತಾನೆ. ಮನೆಯಲ್ಲಿ ನಾನು ನನ್ನ ಮಕ್ಕಳು ಇದ್ದು ನನ್ನ ಮಗಳು ನನ್ನ ಭಾವನಾದ ನಜೀರ ಅಹ್ಮದ ಇವರ ಅಂಗಡಿ ಹತ್ತಿರ ಆಟ ಆಡಲು ಹೋಗಿದ್ದಳು. ರಾತ್ರಿ 7.00 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಕುರ್ಚಿಯ ಮೇಲೆ ಕುಳಿತು ಗುಪ್ತಾಂಗ ಒರೆಸುತ್ತಾ ಅಳುತಿದ್ದಳು ಆಗ ನಾನು ನನ್ನ ಮಗಳಿಗೆ ವಿಚಾರಿಸಲು ಅವಳು ಹೇಳಿದ್ದೇನೆಂದರೆ ನಮ್ಮ ದೊಡ್ಡಪ್ಪನಾದ ನಜೀರ ಅಹ್ಮದ ಇವರ ಅಂಗಡಿಯಲ್ಲಿ ಕುಳಿತು ಕೊಂಡಿದ್ದ  ಜಾಕೀರ ಹುಸೇನ್ ಇವನು ನನಗೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿ ದೊಡ್ಡಪ್ಪನ ಗೋದಾಮ ಒಳಗಡೆ ಜೋಳದ ಚೀಲದ ಮೇಲೆ ಮಲಗಿಸಿ ನನ್ನ ಬಾಯಿ ಒತ್ತಿ ಹಿಡಿದು ಎದೆಯ ಮೇಲೆ ಕೈ ಆಡಿಸಿ ಅವನ ಶಿಶ್ನವನ್ನು ತೆಗೆದು ನನ್ನ ಯೋನಿಯ ಮೇಲೆ ಆಡಿಸಿ ಸಂಭೋಗ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: