POLICE BHAVAN KALABURAGI

POLICE BHAVAN KALABURAGI

14 May 2014

Gulbarga District Reported Crimes

ಕಳವು ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ದಿನಾಂಕ 12-05-2014 ರಂದು ರಾತ್ರಿ 11:00 ಗಂಟೆಯಿಂದ ಬೇಳಗಿನ 09;00 ಗಂಟೆಯ ಮಧ್ಯದ ಅವಧಿಯಲ್ಲಿ. ಸರಕಾರಿ ಪ್ರೌಢ ಶಾಲೆ ಹಿರೋಳಿಯ ಕಂಪ್ಯೂಟರ್ ಕೋಣೆಯ ಚಲನ ಗೇಟಿನ ಚಾವಿ ಹಾಗೂ ಬಾಗಿಲ ಗೇಟನ್ನು ಕಲ್ಲಿನಿಂದ ರಾಡಿನಿಂದ ಚಾವಿ ತಗೆದು ಒಳಗೆ ಹೋಗಿ ಕಂಪ್ಯೂಟರ್ ಕೋಣೆಯಲ್ಲಿನ 5 ಕಂಪ್ಯೂಟರ್ ನಲ್ಲಿ H.C.L.ಕಂಪನಿಯ 4 ಕಂಪ್ಯೂಟರ್ , ಅದರ ಕೀಬೋರ್ಡ ,ಮೂಸ್ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ H.C.L. ಕಂಪನಿಯ 4 ಕಂಪ್ಯೂಟರಗಳ ಮತ್ತು ಸಾಮಗ್ರಿಗಳ ಒಟ್ಟು ಬೆಲೆ:50,000=00 ರೂಪಾಯಿ ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಶೋಕ ನಗರ ಠಾಣೆ : ಶ್ರೀ. ಮಹಾಲಿಂಗ್ಯಯ ತಂದೆ ಈರಯ್ಯ ಮಠಪತಿ ಸಾ: ಗೌಡಗಾಂವ ಹಾ:ವ: ಪ್ಲಾಟ ನಂ: 49 ಬಸವಸದನ ಕರುಣೇಶ್ವರ ನಗರ ನ್ಯೂ ಜೇವರ್ಗಿ ಕಾಲೋನಿ ಗುಲಬರ್ಗಾ ರವರು ದಿನಾಂಕ: 16-05-2014 ರಂದು ನಮ್ಮ ಊರಿನಿಂದ ಟ್ರ್ಯಾಕ್ಟರ  ರೀಪೆರಿಗಾಗಿ ಟ್ರ್ಯಾಲಿ ಸಮೇತವಾಗಿ ಗುಲಬರ್ಗಾಕ್ಕೆ ತಂದಿದ್ದು ನಮ್ಮ ಮನೆಯ ಹತ್ತಿರದಲ್ಲಿನ ಖುಲ್ಲಾ ಸ್ಥಳದಲ್ಲಿ ರಾತ್ರಿ 08-35 ಗಂಟೆ ಸುಮಾರಿಗೆ ಟ್ರ್ಯಾಲಿ ಬಿಟ್ಟು ಇಂಜಿನನ್ನು ರಿಪೇರಿಗಾಗಿ ಗಂಜಗೆ ತೆಗೆದುಕೊಂಡು ಹೋಗಿರುತ್ತೇವೆ. ಮರುದಿನ ಮುಂಜಾನೆ ದಿನಾಂಕ: 17-05-2014 ರಂದು 6 ಗಂಟೆಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಖುಲ್ಲಾ ಸ್ಥಳದಲ್ಲಿ ಬಿಟ್ಟ ಟ್ರ್ಯಾಲಿ ನಂ: ಕೆಎ-32 ಟಿ-8143 ಚೆಸ್ಸಿ ನಂ: JGSE6T9007 ಅ.ಕಿ. 49000/- ರೂ ಕಿಮ್ಮತ್ತಿನದು ಕಾಣಲಿಲ್ಲ. ನಂತರ ಎಲ್ಲಾಕಡೆ ಹುಡುಕಾಡಿದರೂ ಟ್ರ್ಯಾಲಿ ಬಗ್ಗೆ ಸುಳಿವು ಸಿಕ್ಕಿರುವದಿಲ್ಲ. ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: