POLICE BHAVAN KALABURAGI

POLICE BHAVAN KALABURAGI

29 March 2014

Gulbarga District Reported Crimes

ವರದಕ್ಷಣಿ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಖ್ಯಾದಮ್ಮಾ ಗಂಡ ಶರಣಬಸಪ್ಪಾ ರಾಮನೋರ  ಸಾ: ಮರಗಮ್ಮನ ಗುಡಿ ಹತ್ತಿರ ರಟಕಲ್ ತಾ:ಚಿಂಚೋಳಿ ಜಿ: ಗುಲಬರ್ಗಾ ಹಾಃವಃ ಭೂಂಯಾರ ಇವರನ್ನು  3 ವರ್ಷಗಳ ಹಿಂದೆ ನನ್ನ ತಂದೆ ತಾಯಿಯವರು ರಟಕಲ್ ಗ್ರಾಮದಲ್ಲಿ ಗಂಡನ ಮನೆ ಮುಂದೆ ಅವರು ಕೇಳಿದಂತೆ 5 ತೊಲೆ ಬಂಗಾರದಲ್ಲಿ 4 ತೊಲೆ ಬಂಗಾರ,  51,000-00 ರೂ. ನಗದು ಹಣ ಹಾಗು ಬಟ್ಟೆಗೆ 15100-00 ರೂ. ಪಲಂಗ ಅಲಮಾರ ಮತ್ತು ಎಲ್ಲಾ ಮನೆ ಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ಮದುವೆಯಲ್ಲಿ 2,50,000-00 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ಕೇವಲ 1 ತೊಲೆ ಬಂಗಾರಕೊಟ್ಟಿಲ್ಲಾ ಎನ್ನುವ ಕಾರಣಕ್ಕೆ ಮದವೆಯಾದಾಗಿನಿಂದ ಇಲ್ಲಿಯವರೆಗೆ ನನ್ನ ಗಂಡ ಶರಣಬಸಪ್ಪಾ ಅತ್ತೆ, ಕಮಲಾಬಾಯಿ ಮಾವ  ಅರ್ಜುನ, ಮೈದುನ  ರವಿ, ನಾದಿನಿ . ಭೀಮಬಾಯಿ, ಇವರುಗಳು ಸೇರಿ ನನಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ತೊಂದರೆ ನೀಡುತ್ತಾ ಬಂದಿರುತ್ತಾರೆ. ಈಗ 4 ತಿಂಗಳ ಹಿಂದೆ ನನ್ನನ್ನು ವರದಕ್ಷಿಣೆ  ಹಣ ಮತ್ತು ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಿನ್ನನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಹೊರಗೆ ಹಾಕಿರುತ್ತಾರೆ. ನನ್ನ ಮೇಲೆ ಮಾಡಿದ ಭಾನಾಮತಿಯಿಂದ ನನ್ನ ಆರೋಗ್ಯ ಸ್ಥೀತಿ ಸರಿಯಾಗಿ ಇಲ್ಲದ ಕಾರಣ ನನ್ನಅಕ್ಕನಿಗೆ ಮದುವೆ ಮಾಡಿಕೊಟ್ಟ ಭೂಂಯಾರನಲ್ಲಿ ನಾನು, ನನ್ನ ಗಂಡ ಬಂದು ವಾಸವಾಗಿದ್ದೇವು. ಅಲ್ಲದೇ ನನ್ನ ಗಂಡನು ಹೊಡೆಬಡೆ ಮಾಡುತ್ತಿರುತ್ತಾನೆ. ಹೀಗಿದ್ದು. ದಿನಾಂಕ: 28-03-14 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನನ್ನ ಗಂಡನ ಮನೆಯವರು ನೀನು ಬಂಗಾರ ಹಣ ತೆಗೆದುಕೊಂಡು ಬಾ ಅಂತಾ ನನ್ನ ಕೂದಲು ಹಿಡಿದು ಹೊಡೆದಿರುತ್ತಾರೆ. ಮತ್ತು ಜೀವದ ಬೆದರಿಕೆ ಮಾಡಿರುತ್ತಾರೆ. ನನಗೆ ಒಳ ಪೆಟ್ಟುಮಾಡಿರುತ್ತಾರೆ. ನಾವು ಹೇಳಿದ ವರದಕ್ಷಿಣೆ ಹಣ ಬಂಗಾರ ತರದಿದ್ದರೆ ನಿನ್ನ ಗಂಡನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಅಲ್ಲದೇ ನನ್ನ ಅತ್ತೆ ತಮ್ಮನಾದ ಲಾಲಪ್ಪಾ ಗುಪ್ತಾ ಉಪನ್ಯಾಸಕರು(ಕಾಳಗಿ)ಮಾತು ಕೇಳಿ ನನಗೆ ಮೇಲೆ ಹೇಳಿದ ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ನನ್ನ ಗಂಡನಿಗೆ ಲಾಲಪ್ಪಾ ಗುಪ್ತ ಉಪನ್ಯಾಸಕರು ನನ್ನ ಗಂಡನಿಗೆ ಇನ್ನೊಂದು ಹೆಣ್ಣು ತೆಗೆದು ಬೇರೆ ಮದುವೆ ಮಾಡುತ್ತೇನೆ ಎಂದು ಸುಮಾರು ದಿವಸಗಳಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.           
ಅಪಹರಣ ಪ್ರಕರಣ :
ಮಹಿಳಾ ಠಾಣೆ : ದಿನಾಂಕ:21.02.2014 ರಂದು ಶ್ರೀ ಸಿದ್ದಾರಾಮ ತಂದೆ ಹಣಮಂತರಾಯ ಹೀರೆಗೌಡರ  ಸಾ; ಜಿ.ಡಿ.ಎ ಲೇಔಟ ಶಹಾಬಜಾರ ಗುಲಬರ್ಗಾ ರವರ ಹೆಂಡತಿಯಾದ ರೇಣುಕಾ ಇವಳಿಗೆ  ಔರಾದ ಗ್ರಾಮದಿಂದ ಕರೆದುಕೊಂಡು ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ. ಆಗಾಗ ನಮಗೆ ಪೋನ ಮಾಡಿ ಮಹ್ಮದ ರಫೀಕ ಇತನು ನೀವು ಪೊಲೀಸ ಠಾಣೆಗೆ ಹೋಗಿ ಕೇಸು ಮಾಡಿದರೆ ನಾನು ರೇಣುಕಾ ಇವಳಿಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಹೆದರಿಸುತ್ತಿದ್ದರಿಂದ ನಾವು ಕೇಸು ಮಾಡಿರುವದಿಲ್ಲಾ. ದಿನಾಂಕ: 19.03.2014 ರಂದು ನನ್ನ ಹೆಂಡತಿಯಾದ ರೇಣುಕಾ ಇವಳು ತನ್ನ ತಂದೆ ತಾಯಿಗೆ ಫೋನ ಮಾಡಿ ನಾನು ಸೋಲಾಪೂರದಲ್ಲಿರುತ್ತೇನೆ. ನನಗೆ ಕರೆದುಕೊಂಡು  ಹೋಗಿ ಎಂದು ಫೋನ ಮಾಡಿದ್ದು.ಆಗ ನನ್ನ ಅತ್ತೆ  ಮಾವ ಸೋಲಾಪೂರ ಹೋಗಿ  ನನ್ನ ಹೆಂಡತಿಗೆ ಕರೆದುಕೊಂಡು ಬಂದಿದು ಇರುತ್ತದೆ. ನಿನ್ನೆ ದಿನಾಂಕ 28.03.2014 ರಂದು ನಾನು ನನ್ನ ಹೆಂಡತಿ ರೇಣುಕಾ ಅತ್ತೆ ಲಕ್ಷ್ಮೀಬಾಯಿ ನನ್ನ ಮಗ ಹರ್ಷವರ್ದನ ಇತನೊಂದಿಗೆ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಬೇಕು ಅಂತಾ ಔರಾದ ಗ್ರಾಮದಿಂದ ನಾನು ನನ್ನ ಹೆಂಡತಿ ಮೋಟಾರ ಸೈಕಲ ಮೇಲೆ ಬಂದಿದ್ದು, ನಮ್ಮ ಅತ್ತೆ ಲಕ್ಷ್ಮೀಬಾಯಿ ಆಟೋದಲ್ಲಿ ಬಂದಿದ್ದು ಇರುತ್ತದೆ. ನಾನು ನನ್ನ ಸ್ನೇಹಿತನ ಮೋಟಾರ ಸೈಕಲ ಕೊಟ್ಟು ಬರಬೇಕು ಅಂತಾ ನನ್ನ ಹೆಂಡತಿ ರೇಣುಕಾ ಮತ್ತು ಅತ್ತೆ ಲಕ್ಷ್ಮೀಬಾಯಿ  ಮಗ ಹರ್ಷವರ್ದನ ಇವರಿಗೆ ಕೇಂದ್ರ ಬಸ ನಿಲ್ದಾಣದಲ್ಲಿ ಕೂಡಿಸಿ ಹೊರಗಡೆ ಬಂದಾಗ ಮದ್ಯಾಹ್ನ 1.30 ಗಂಟೆಯ ಸುಮಾರಿಗೆ  ಮಹ್ಮದ ರಫೀಕ ಇತನು ಅಲ್ಲಿಗೆ ಬಂದು ನನ್ನ ಹೆಂಡತಿಯಾದ  ರೇಣುಕಾ ಇವಳಿಗೆ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೋಗಿದ್ದು ಅಲ್ಲದೇ ನನಗೆ ಪೋನ ಮಾಡಿ ಈಗ ನಾನು ನಿನ್ನ ಹೆಂಡತಿ ರೇಣುಕಾ ಇವಳಿಗೆ ಕರೆದುಕೊಂಡು ಹೋಗುತ್ತಿದ್ದೆನೆ. ನೀನು ಏನು ಮಾಡಿಕೊಳ್ಳುತ್ತಿ ಮಾಡಿಕೋ ಅಂತಾ ಹೇಳಿದನು. ಕಾರಣ ಜಬರದಸ್ತಿಯಿಂದ ನನ್ನ ಹೆಂಡತಿಯಾದ ರೇಣುಕಾ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: