POLICE BHAVAN KALABURAGI

POLICE BHAVAN KALABURAGI

01 March 2014

Gulbarga District Reported Crimes

ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ದೇವಮ್ಮ ಗಂಡ ರಾಮಚಂದ್ರರೆಡ್ಡಿ ಗದ್ವಾಲ ಸಾ : ವೇಮಲಾ ಮಂಡಲ : ಅಡ್ಡಾಕಲ ತಾ : ದೇವರಕದರಾ ಜಿ|| ಮಹೇಬೂಬನಗರ ಇವರು ದಿನಾಂಕ: 27-02-14 ರಂದು ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಬರುವ ಯಾನಾಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಬ್ಬದಂದು ಶ್ರೀ ಮಾತಾಮಾಣಿಕೇಶ್ವರಿ ದಿವ್ಯ ದರ್ಶನ ಇದ್ದ ಕಾರಣ ನಾನು ಹಾಗೂ ನಮ್ಮೂರಿನವರಾದ ಪೆದ್ದುಲ್ಲಾ ಕೌಶಲ್ಯ ಗಂಡ ಯುಗೇಂದ್ರರೆಡ್ಡಿ ಸಾ|| ವೇಮಲಾ ಹಾಗೂ ಕುಮಾರಆಂಜನೇಯಲು ತಂದೆ ರಾಮಣ್ಣ ಸಾ|| ವೇಮಲಾ ಇವರು ಕೂಡಿ ಒಂದು ಅಟೋದಲ್ಲಿ ಕುಳಿತು ನಮ್ಮೂರದಿಂದ ಬಂದು ದಿನಾಂಕ: 27-02-14  ರಂದು  ಮುಂಜಾನೆ 10:30 ಗಂಟೆಗೆ ಯಾನಾಗುಂದಿ ಬೆಟ್ಟಕ್ಕೆ ಬಂದೇವು. ಸದರಿ ದಿವಸದಂದು ಮತಾ ಮಾಣಿಕೇಶ್ವರಿ ರವರು ಬೆಟ್ಟದ ಹಿಂಬಾಗಕ್ಕೆ ದರ್ಶನ ನೀಡಿದ್ದರಿಂದ ನಾವು ಬೆಟ್ಟದ ಹಿಂದುಗಡೆ ಹೋಗಿ ದರ್ಶನವನ್ನು ಪಡೆದುಕೊಂಡು ಅಲ್ಲಿಂದ ಮರಳಿ ಆ ದಿವಸ ಮದ್ಯಾಹ್ನ 12:30 ಗಂಟೆ ಬೆಟ್ಟದಿಂದ ಇಳಿಯುತ್ತಿದ್ದೇವು. ಈ ಸಮಯದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಆಗ ನಾನು ಬೆಟ್ಟವನ್ನು ಇಳಿಯುವ ಕಾಲಕ್ಕೆ ನಮ್ಮ ಹಿಂದಿನಿಂದ ಒಬ್ಬ ವ್ಯಕ್ತಿಯು ಬಂದು ತನ್ನ ಕೈಯನ್ನು ನನ್ನ ಕೊರಳಿಗೆ ಹಾಕಿ ನನ್ನ ಕೊರಳಲ್ಲಿದ್ದ ಎರಡು ಬಂಗಾರದ ತಾಳಿ ಪತ್ತಿ ಹಾಗೂ 5 ಬಂಗಾರದ ಗುಂಡುಗಳು ಇರುವ ಒಟ್ಟು 3 ತೊಲ5 ಗ್ರಾಂಮದ ಒಟ್ಟು ಅ ಕಿ 1,10,000/- ರೂ ಕಿಮ್ಮತ್ತಿನ ಬಂಗಾರದ ತಾಳಿ ಸರವನ್ನು ಕೊರಳಿನಿಂದ ದೋಚಿಕೊಂಡು ಸುಲೀಗೆ ಮಾಡಿಕೊಂಡು ಓಡಿಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ
ಅಫಜಲಪೂರ ಠಾಣೆ : ಸಿದ್ರಾಮಯ್ಯ ಡಿ ಹೀರೆಮಠ ಸಾ : ಮಣೂರ ಗ್ರಾಮ ಇವರು ದಿನಾಂಕ 05.11.13 ರಂದು ಫಿರ್ಯಾದಿ ತನ್ನ ಹೊಲ ಸರ್ವೇ ನಂ 440 ನೇದ್ದರ ಹೊಲಕ್ಕೆ ಹೋದಾಗ ಮಗ್ಗಲಿನ ಹೊಲದವರಾದ ಮಹಾದೇವ ತಂದೆ ಆನಂದಪ್ಪ ಅಲ್ಲಾಪೂರ ಇವನು ಹೊಲದ ಬಾಂದರಿನ ವಿಷಯ ಮುಂದು ಇಟ್ಟುಕೊಂಡು  ಫಿರ್ಯಾದಿ ಹೊಲದಲ್ಲಿ ಅತಿಕ್ರಮ ಮಾಡಿ ಹೊಸದಾಗಿ ಕಲ್ಲು ಹಾಕಿ ಬೆಳೆಗೂ ಹಾನಿ ಮಾಡಿ ಫಿರ್ಯಾದಿಗೆ ಮಹಾದೇವ ಹಾಗೂ ಅವರ ಮಕ್ಕಳಾದ ಬಸವರಾಜ, ಶಿವಪುತ್ರ ಇವರು ಅವಾಚ್ಯ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 28-02-2014 ರಂದು 11-45 ಪಿ.ಎಮ್ ಕ್ಕೆ ಆರೋಪಿ ಪರಮೇಶ್ವರ ಇತನು ತನ್ನ ಕಾರ ನಂ. ಕೆ.ಎ  03 ಎಮ್. ಬಿ4909 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾದುಲ್ಲಾ ಕಾಲೂನಿಯಲ್ಲಿರು ಫಿರ್ಯಾದಿ ಮನೆಯ ಕಂಪೌಂಡ ಗೊಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಕಂಪೌಂಡ ಗೋಡೆ ಬಿದ್ದು ಹಾನಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: