POLICE BHAVAN KALABURAGI

POLICE BHAVAN KALABURAGI

12 February 2014

Gulbarga District Reported Crimes

ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ನೀಲಮ್ಮ ಗಂಡ ಧೂಳಪ್ಪ ಕಮನೂರ ಸಾ: ಶೇಳ್ಳಗಿ ತಾ:ಚಿತ್ತಾಪೂರ ಜಿ:ಗುಲಬರ್ಗಾ ರವರ  ಎರಡನೇ ಮಗನಾದ ಕಾಶಿನಾಥ ಇತನು ಟಿಪ್ಪರ ನಂ. ಕೆಎ-01-ಬಿ-5437 ನೇದ್ದರ ಮೇಲೆ ಕ್ಲೀನರ ಕೆಲಸ ಮಾಡುತ್ತಿದ್ದು. ದಿನಾಂಕ: 11-02-2014 ರಂದು ಬೆಳಿಗ್ಗೆ 9 ಗಂಟೆಗೆ ನನ್ನ ಮಗ ಕಾಶಿನಾಥ ತಂದೆ ಧೂಳಪ್ಪ ಇತನು ಕ್ಲೀನರ ಕೆಲಸಕ್ಕೆಂದು ಹೇಳಿ ಹೋಗಿದ್ದು. ರಾತ್ರಿ 10 ಪಿಎಮ ಸುಮಾರಿಗೆ ನನ್ನ ಸೋದರ ಅಳಿಯ ಬಾಬುರಾವ ತಂದೆ ಸಿದ್ರಾಮಪ್ಪ ಇವರು ಊರಿಗೆ ಬಂದು ತಿಳಿಸಿದ್ದೆನೆಂದರೆ ಅಂದಾಜು 07-55 ಪಿಎಮ ಸುಮಾರಿಗೆ ಕಾಶಿನಾಥನ ಮೊಬಾಯಿಲದಿಂದ ವಿಶ್ವವಿದ್ಯಾಲಯ ಪೊಲೀಸರು ನನ್ನ ಮೊಬಾಯಿಲಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಕಾಶಿನಾಥ ಇತನು ಟಿಪ್ಪರ ಅಪಘಾತದಲ್ಲಿ ಮುಗಳನಾಗಾಂವ ಕಮಾನದಿಂದ 1 ಕಿ.ಮಿ ಅಂತರದ ಮೇಲೆ ರೋಡ ಬದಿಯಲ್ಲಿ ಪಲ್ಟಿಯಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಇತರರು ಸ್ಥಳಕ್ಕೆ ಹೋಗಿ ನೋಡಲಾಗಿ ಟಿಪ್ಪರ ನಂ. ರೋಡಿನ ಬದಿಯಲ್ಲಿ ಪಲ್ಟಿಯಾಗಿ ಒಳಗಡೆ ಸಿಕ್ಕಿ ಹಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು. ಶವವನ್ನು ಹೊರಗೆ ತೆಗೆದು ಗುಲಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಇಟ್ಟು ಬಂದಿದ್ದು ಅಂತಾ ತಿಳಿಸಿದ ಮೇರೆಗೆ ದಿನಾಂಕ 12-02-2014 ರಂದು ಬೆಳಿಗ್ಗೆ 8 ಗಂಟೆಗೆ ನಾನು ನನ್ನ ಮಗ ರವಿ ಮತ್ತು ಸಂಬಂಧಿಕರು ಸರಕಾರಿ ಆಸ್ಪತ್ರೆ ಶವಗಾರ ಕೋಣೆಗೆ ಬಂದು ನೋಡಲಾಗಿ ನನ್ನ ಮಗನ ಮುಖ ಪೂರ್ತಿ  ಚಪ್ಪಟ್ಟೆಯಾಗಿದ್ದು ಮೃತಪಟ್ಟಿದ್ದು. ಸದ್ರಿ ಟಿಪ್ಪರ ನಂ. ಕೆಎ-01-ಬಿ-5437 ನೇದ್ದರ ಚಾಲಕನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ನಡೆಯಿಸಿ ವೇಗದ ನಿಯಂತ್ರಣ ತಪ್ಪಿ ಪಲ್ಟಿ ಮಡಿದ್ದರಿಂದ ಅಂದಾಜು 6-00 ಪಿಎಮ ಸುಮಾರಿಗೆ ಅಪಘಾತ ಮಾಡಿ ಚಾಲಕನು ಓಡಿ ಹೋಗಿರತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಟಕಲ ಠಾಣೆ : ಶ್ರೀ ಹಣಮಂತ ತಂದೆ ಹುಸೇನಿ ಮರಗುತ್ತಿ ಸಾ||ಚಂದನಕೇರಾ ರವರು ಮೊನ್ನೆ ದಿನಾಂಕ 10.02.2014 ರಂದು 8.00 ಪಿ.ಎಂಕ್ಕೆ  ನಾಗಪ್ಪ ತಂದೆ ಮಾಣಿಕ ಮರಗುತ್ತಿ ಸಂ. ಒಬ್ಬ ಸಾ||ಚಂದನಕೇರಾ ರವರು  ಅವಾಚ್ಯ ಶಬ್ದ್ಗಳಿಂದ ಬೈದು ಕೈಯಿಂದ ಹೊಡೆದು  ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: