POLICE BHAVAN KALABURAGI

POLICE BHAVAN KALABURAGI

26 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು ಹಡಲಗಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ  ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿ ಹಾಗೂ ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಹಡಲಗಿ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ ಶ್ರೀ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಿಚಾರಿಸಲು ರಾಜೇಶ ತಂದೆ ಮಾಣಿಕರಾವ ಮರಬೆ ಸಾ|| ದರ್ಗಾ ಶಿರೂರಹಾ|| ||ಹಡಲಗಿ ಗ್ರಾಮ ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 300/-ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ ಒಂದು ಬಾಲ ಪೆನ್ನ ಒಂದು ಕಪ್ಪು ಬಣ್ಣದ ನೋಕಿಯಾ ಮೋಬೈಲ ಅದರಲ್ಲಿ ಐಡಿಯಾ ಕಂಪನಿಯ ಸಿಮ ನಂ. 9164180504 ಅ.ಕಿ 500/- ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು 1600 ಗಂಟೆಗೆ ನಿಂಬರ್ಗಾ ಗ್ರಾಮದ ಮೌಲಾ ನಗರದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆರವರು, ಠಾಣೆಯ ಸಿಬ್ಬಂಧಿ ಮತ್ತು ಪಂಚರೋಂದಿಗೆ  ನಿಂಬರ್ಗಾ ಗ್ರಾಮದ ಮೌಲಾ ನಗರದ  ಮಲ್ಲಿಕಾರ್ಜುನ ದೇವರ ಗುಡಿಯ ಹಿಂದುಗಡೆ ಮರೆಯಾಗಿ ನಿಂತು ನೋಡಲಾಗಿ 06 ಜನ ವ್ಯಕ್ತಿಗಳು ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  06 ಆಸಾಮಿ ಜನರನ್ನು ಹಿಡಿದು ವಿಚಾರಿಸಲಾಗಿ 01.ನಾಗಪ್ಪ ತಂದೆ ಚಂದ್ರಾಮಪ್ಪ ಪೂಜಾರಿ 02. ಧರ್ಮರಾಯ ತಂದೆ ಮಹಾದೇವ ಗೋಣಿ 3. ಪಿಂಟು ತಂದೆ ಬಸವರಾಜ ಅಮಾನೆ 04. ಬಸವರಾಜ ತಂದೆ ಮಾಣಿಕಪ್ಪ ಬುಳ್ಳಾ 05. ಚಂದ್ರಕಾಂತ ತಂದೆ ಕಲ್ಯಾಣಿ ಮಾನೆ 06. ಯಲ್ಲಾಲಿಂಗ ತಂದೆ ಸೂರ್ಯಕಾಂತ ಭಾಸಗೆ ಸಾ|| ಎಲ್ಲರು ನಿಂಬರ್ಗಾ ಸದರಿಯವ ರಿಂದ ನಗದು ಹಣ ಒಟ್ಟು 3080/- ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮ ಬಸವೇಶ್ವರ ನಗರ ಠಾಣೆ : ಶ್ರೀ ವಿಶ್ವನಾಥ ಶಿಂಧೆ ಸಾಃ ಸರಸ್ವತಿ ಗೋದಾಮ್ ಗುಲಬರ್ಗಾ ಇವರು ದಿನಾಂಕ 22-02-2014 ರಂದು 02:00 ಪಿ.ಎಂ. ಸುಮಾರಿಗೆ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿದ್ದ ಸಂಬಂಧಿಕರ ವಾಸ್ತು ಕಾರ್ಯಕ್ರಮವಿದ್ದ ಪ್ರಯುಕ್ತ ಮತ್ತು ಆತನ ಹೆಂಡತಿ ಇಬ್ಬರೂ ಕೂಡಿಕೊಂಡು ಹೊಂಡಾ ಆಕ್ಟಿವಾ ಮೋ.ಸೈಕಲ ನಂ. KA 32 Y 4242 ನೇದ್ದರ ಮೇಲೆ ಹೋಗಿ ಮನೆಯ ಮುಂದೆ ಸೈಡ್ ಲಾಕ್ ಹಾಕಿ ನಿಲ್ಲಿಸಿದ್ದು ನಂತರ ಕಾರ್ಯಕ್ರಮ ಮುಗಿಸಿಕೊಂಡು 02:30 ಪಿ.ಎಂ. ಕ್ಕೆ ಬಂದು ನೋಡಲಾಗಿ ಮೋಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದರೂ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 19-02-2014 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ಚಂದ್ರಕಾಂತ ತಂದೆ ಶಾಂತಪ್ಪ ಕಲ್ಲೂರ  ಸಾ: ಸಂತೋಷ ಕಾಲೋನಿ ಗುಲಬರ್ಗಾ  ರವರು ತಮ್ಮ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-5383 ರ ಮೇಲೆ ತಾನು ಕೆಲಸ ಮಾಡುತ್ತಿರುವ ಆಫೀಸಿಗೆ ಹೋಗುವ ಕುರಿತು ಖಾದ್ರಿ  ಚೌಕ ಮುಖಾಂತರ ಶಹಾಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಶೆಟ್ಟಿ ಕಾಂಪ್ಲೆಕ್ಸ ಎದುರಿನ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ಇಡಿ-3472 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 25-02-2014 ರಂದು ಶ್ರೀ ನಿಹಾಲ ತಂದೆ ಚಂದ್ರಶೇಖರ ಪ್ರಸಾದ  ಸಾ:ಬಾಲಾಜಿ ಆಸ್ಪತ್ರೆ ರಾಜಾಪುರ ರೋಡ ಗುಲಬರ್ಗಾ  ರವರ ಗೆಳೆಯನಾದ ಬಸವಂತರಾಯ ಪಾಟೀಲ ಇವರು ಒಂದು ಹೊಸ ಜೀಪ ಖರೀದಿಸಿದ್ದು ಪೂಜೆಗಾಗಿ ಕೊರಂಟಿ ಹನುಮಾನ ಗುಡಿ ಹತ್ತಿರ ಬರಲು ಹೇಳಿ ದಾಗ  ತನ್ನ ಇತರೆ ಗೆಳೆಯ ರೊಂದಿಗೆ ಗುಡಿಯ ಹತ್ತಿರ ಬಂದು ಪೂಜೆ ಮುಗಿಸಿಕೊಂಡು ನಂತರ ಊಟ ಮಾಡಲು ಜೈಲ ಹತ್ತಿರ ಇರುವ ಇಕೋ ಗಾರ್ಡನಗೆ ಹೊರಟೇವು, ಇಕೋ ಗಾರ್ಡನ ಹತ್ತಿರ ಬಂದಾಗ ಪಿರ್ಯಾದಿಯ ಮನೆಯಿಂದ ಪೋನ ಬಂದಿದ್ದು, ಆಗ ಪಿರ್ಯಾದಿ ಇನ್ನೊಮ್ಮೆ ಊಟ ಮಾಡೋಣಾ ಅಂತ ಹೇಳಿದ್ದರಿಂದ ಆರೋಪಿಯು  ಜೀಪನ್ನು ತಿರುಗಿಸಿ ಕೊಂಡು ಗುಲಬರ್ಗಾ ಕಡೆಗೆ ಬರುವಾಗ  ನಂದಿಕೂರ ತಾಂಡಾ ದಾಟಿ ಬರುವ ಮೃತ್ಯೂಂಜಯ ಗೋಡಾನ ಹತ್ತಿರ ಅವರುಗಳು ಕುಳಿತ ಜೀಪನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದ ಅವರ ಗೆಳೆಯ ಆಶೀಷಕುಮಾರ ಶೃಂಗೇರಿ ಇತನು ರಸ್ತೆಯ ಬಲಗಡೆಗೆ ಜೀಪನ್ನು ಪಲ್ಟಿ ಗೊಳಿಸಿರುತ್ತಾನೆ. ಸದರಿ ಜೀಪಿನಲ್ಲಿ ಕುಳಿತವರಿಗೆ ಸಾದಾ ಹಾಗೂ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-02-2014 ರಂದು ಬೆಳಿಗ್ಗೆ ಬೆಳಿಗ್ಗೆ 10;00 ಗಂಟೆಗೆ ಶ್ರೀಮತಿ ವಿಜಯಲಕ್ಷ್ಮಿ ಗಂಡ ನಾರಾಯಣ ಅಂಬುರೆ ಸಾ : ಇಂದಿರಾ ನಗರ ಅಫಜಲಪೂರ ರವರು ಮನೆಯ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದೆ. ಅದೆ ಸಮಯಕ್ಕೆ ನಮ್ಮ ಮನೆಯ ಬಾಜು ಇದ್ದ ರಫೀಕ ಮತ್ತು ಅವನ ಸಂಗಡ ಇನ್ನು ಇಬ್ಬರು ಕೂಡಿ ತಮ್ಮ ಕೈಯಲ್ಲಿ ಕೊಡ್ಲಿಗಳನ್ನು  ಹಿಡಿದುಕೊಂಡು ನಮ್ಮ ಮನೆ ಹತ್ತಿರ ಬಂದು ಅಂಗಳದಲ್ಲಿ ಇದ್ದ  ನಮ್ಮ ಟೆಂಗಿನ ಮರವನ್ನು ಕಡಿಯುತ್ತಿದ್ದರು. ಆಗ ನಾನು ಅವರನ್ನು ತಡೆಯಲು ಹೋದೆ ಅವರು ನನಗೆ ತಡೆದು ನಿಲ್ಲಿಸಿ ಏ ಭೋಸಡಿ ನಿನಗ ಎಷ್ಟಸಲ ಹೇಳಿದರು ಕೇಳುತ್ತಿಲ್ಲಾ, ಇವತ್ತ ಈ ಗಿಡ ಕಡದೆ ಬಿಡತಿವಿ ಅಂತಾ ಅಂದರು ಆಗ ನಾನು ನನ್ನ ಗಂಡ ಬರುವರೆಗೆ ನಿಲ್ಲರಿ ಅಂತಾ ಅಂದಿದ್ದಕ್ಕೆ ರಪೀಕ ಇವನು ಪಹಲೆ ಏ ಛಿನಾಲಕೋ ಖಲಾಸ ಕರೋರೆ ಅಂತಾ ಅಂದರು ನಂತರ ಸದರಿ ಗಿಡವನ್ನು ಕಡೆದು ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: