POLICE BHAVAN KALABURAGI

POLICE BHAVAN KALABURAGI

11 February 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಮಂಜುಳಾ ಗಂಡ ದೀಪಕ ಜಾಧವ ಇವರು, 2007 ನೇ ಸಾಲಿನ ಪೆಭ್ರವರಿ 09 ತಾರೀಜು ಶಹಾಬಜಾರ ಅಂಬಾ ಭವಾನಿ ದೇವಸ್ಥಾನದಲ್ಲಿ ಗುಲಬರ್ಗಾ ಪ್ರಭುಲಿಂಗ ತಂದೆ ರಾಮಚಂದ್ರಪ್ಪ ಜಾಧವ ರವರ ಹಿರಿಯ ಮಗನಾದ ದೀಪಕ ಇತನೊಂದಿಗೆ ಸಂಪ್ರದಾಯದ ಪ್ರಕಾರ ಒಂದುವರೆ ತೊಲೆ ಬಂಗಾರ, 21000/- ರೂ. ವರದಕ್ಷಿಣೆ, ಗೃಹಪಯೋಗಿ ಸಾಮಾಗುಳ ಅಃಕಿಃ 20,000/- ರೂ. ಬೆಲೆಬಾಳುವುದನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಸದ್ಯ ನನಗೆ ದರ್ಶನ ಅಂತಾ 06 ವರ್ಷದ ಗಂಡು ಮಗನಿದ್ದು ಮದುವೆಯಾದಗಿನಿಂದ ಸುಮಾರು 03 ವರ್ಷಗಳವರೆಗೂ ಚೆನ್ನಾಗಿದ್ದೆ. ನಂತರ ನನ್ನ ಗಂಡನಾದ ದೀಪಕ, ಮಾವನಾದ ಪ್ರಭುಲಿಂಗ, ಅತ್ತೆಯಾದ ಚಂದ್ರಕಲಾ, ಮೈದುನ ಮಲ್ಲಿಕಾರ್ಜುನ, ನಾದನಿ ಸವಿತಾ ಇವರೆಲ್ಲರೂ ಕೂಡಿಕೊಂಡು ನನಗೆ ಪ್ರತಿ ದಿನಾಲು ನಿನ್ನ ತವರು ಮನೆಯಿಂದ ಇನ್ನೂ 03 ತೊಲೆ ಬಂಗಾರ, 01 ಲಕ್ಷ ರೂಪಾಯಿ ತೆಗೆದುಕೊಂಡು ಬಾ ನಾವು ಪ್ಲಾಟ, ಬಂಗಲೆ ಕೊಂಡುಕೊಳ್ಳಬೇಕು ವ್ಯಾಪಾರ ಮಾಡಬೇಕು, ಕಾರ್ ತೆಗೆದುಕೊಳ್ಳಬೇಕು, ಬಂಗಾರ ಮತ್ತು ರೂಪಾಯಿ ತರದಿದ್ದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಪ್ರತಿದಿನಾಲು ಹೆದರಿಸುತ್ತಿದ್ದರು. ನನ್ನ ಮೈದುನ ಮಲ್ಲಿಕಾರ್ಜುನ ಇತನು ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳೆದಾಡಿ ನನಗೆ ಅಪಮಾನಗೊಳಿಸಿದ್ದು, ಇಷ್ಟೆಲ್ಲಾ ಕಿರುಕುಳ ಕೊಟ್ಟರೂ ಸಹಿತ ನಾನು ಸುಮ್ಮನಿದ್ದೆ. ನಂತರ ನಾನು ತವರು ಮನೆಯಲ್ಲಿದ್ದಾಗ ನನಗೆ ಕರೆಯಲಿಕ್ಕೆ ಬಾರದಿದ್ದರಿಂದ ಆಜು ಬಾಜು ಇದ್ದ ಜನರಿಗೆ ವಿಚಾರಿಸಲಾಗಿ ದೀಪಕ ಇತನಿಗೆ ಸುಮಾರು 7-8 ತಿಂಗಳ ಹಿಂದೆ ನಿರ್ಮಲ ಇವಳ ಸಂಗಡ ಮದುವೆ ಮಾಡಿರುತ್ತಾರೆ ಅಂತಾ ಗೊತ್ತಾಯಿತು. ನಾನು ಇನ್ನೂ ಜೀವಂತ ಇರುವಾಗಲೇ ಅದನ್ನು ಮುಚ್ಚಿ ಹಾಕಿ ನನ್ನ ಗಂಡನು ಮತ್ತೊಂದು ಮದುವೆ ಮಾಡಿಕೊಂಡಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: