POLICE BHAVAN KALABURAGI

POLICE BHAVAN KALABURAGI

18 December 2013

Gulbarga District Reported Crimes

ಅಪಘಾತ ಪ್ರಕರಣಗಳು:-
ಮುಧೋಳ ಠಾಣೆ : ದಿ: 17.12.2013 ರಂದು ಆನಂದನು ಮೊತಕಪಲ್ಲಿಯ ಜೈ ಬಲಭೀಮಸೇನ ಜಾತ್ರೆಗೆ ಹೊಗಿ ಬರುತ್ತೇನೆಂದು ಹೇಳಿ ಹೋಗಿದ್ದು ರಾತ್ರಿ 23:00 ಗಂಟೆಯ ಸುಮಾರಿಗೆ ಮುನಕನಪಲ್ಲಿ, ಕೊಲಕುಂದಾ ಹಾಗು ಮದನಾ ಕಡೆಗೆ ಹೊಗುವ ಕೂಡವ ಕ್ರಾಸ ರಸ್ತೆಯಲ್ಲಿ ಆಟೋ ಟಂಟಂ ಪಲ್ಟಿಯಾಗಿ ಮಹೇಶ ತಂದೆ ತಿಪ್ಪಣ್ಣ ಇತನಿಗೆ ತಲೆಗೆ ಭಾರಿ ಗಾಯಗಳಾಗಿ ಹಾಗು ಇತರೆ ಕಡೆಗೆ ಭಾರಿ ಗಾಯಗಳಾಗಿದ್ದು  ವಿಚಾರಿಸಲಾಗಿ ದಿ: 17.12.2013 ರಂದು ರಾತ್ರಿ 2300 ಗಂಟೆ ಸುಮಾರಿಗೆ ಕೊಲಕುಂದಾ, ಮದನಾ ಹಾಗು ಮುನಕನಪಲ್ಲಿ ಕಡೆಗೆ ಹೊಗುವ ಕೂಡವ ಕ್ರಾಸ ರಸ್ತೆಯ ತಿರುವಿನಲ್ಲಿ ಟಂ-ಟಂ ಚಾಲಕನು ಟಂ-ಟಂನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿದ್ದರಿಂದ ಚಾಲಕನಿಗೆ ಟಂ-ಟಂ ಹಿಡಿತ ತಪ್ಪಿ ರಸ್ತೆಯ ಬದಿಗೆ ಹೊಗಿ ಟಂ-ಟಂ ಪಟ್ಲಿಯಾಗಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆನಂದನು ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದು ಮತ್ತು ಮಹೇಶನಿಗೆ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರ್ಪಡಿಸಿದ ಬಗ್ಗೆ ದಿನಾಂಕ: 18.12.2013 ರಂದು ಶ್ರೀ ಭೀಮಶಪ್ಪ ತಂದೆ ಹಣಮಪ್ಪ ಉಪ್ಪಾರ ಸಾ: ಮುನಕನಪಲ್ಲಿ ಗ್ರಾಮ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ   : ದಿನಾಂಕ 16-12-2013 ರಂದು 5-30 ಪಿ.ಎಮ್ ಕ್ಕೆ ಆಳಂದ ರೋಡಿನಲ್ಲಿ ಇರುವ ಖಾದ್ರಿ ಚೌಕ ದರ್ಗಾ ಹತ್ತಿರ ಗಾಯಾಳು ಜಯರಾಜ ತಂದೆ ಗುರುಶಾಂತಪ್ಪಾ ಬೆಣ್ಣುರ ಈತನು ಬಸವರಾಜ ತಂದೆ ಶಂಕ್ರೆಪ್ಪಾ ಹೂಗಾರ ಈತನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆ.ಎ 32ಇ.ಎ 2962 ನೇದ್ದರ ಮೇಲೆ ಹಿಂದೆ ಕುಳಿತುಕೊಂಡು ಆಳಂದ ಚೆಕ್ ಪೊಸ್ಟ ಕಡೆಯಿಂದ ಬರುತ್ತಿದ್ದಾಗ ಆರೋಪಿ ಬಸವರಾಜ ಈತನು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಮೋಟಾರ ಸೈಕಲಕ್ಕೆ ಓವರಟೆಕ್ ಮಾಡಲು ಹೋಗಿ ಕಟ್ ಹೊಡೆದು ಬ್ಯಾಲೆನ್ಸ ತಪ್ಪಿ ಮೋಟಾರ ಸೈಕಲ ಸಮೇತ ಅವರಿಬ್ಬರು ಕೆಳಗೆ ಬಿದ್ದು ಜಯರಾಜ ಈತನು ರೋಡ ಮದ್ಯದ ಡಿವೈಡರಗೆ ತಲೆ ಬಡೆದು ಭಾರಿಗಾಯಹೊಂದಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: