POLICE BHAVAN KALABURAGI

POLICE BHAVAN KALABURAGI

26 December 2013

Gulbarga District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ಅಮೋಗಿ ಕರಚೋಳ ಸಾ : ಮಲ್ಲಾಬಾದ ಇವರು ಮತ್ತು ಮಕ್ಕಳಾದ ಭಾಗಮ್ಮಕಾವೇರಿ  ಮೂರು ಜನರು ದಿನಾಂಕ 25-12-2013 ರಂದು ಬೆಳಿಗ್ಗೆ 08:00 ಗಂಟೆ ಸಮಯಕ್ಕೆ ನಮ್ಮ ಗ್ರಾಮದ ಶರಣಬಸವೇಶ್ವರ ಗುಡಿಯ ಮುಂದೆ ಹೊಗುತ್ತಿದ್ದಾಗ ನನ್ನ ಭಾವ ಮಾಳಪ್ಪ ಮತ್ತು ಅವನ ಹೆಂಡತಿ ಶಾರವ್ವ ಹಾಗೂ ಮಕ್ಕಳಾದ ಸಿದ್ದಪ್ಪ ಮತ್ತು ರೇಣುಕಾ ಇವರು 4 ಜನರು ನಮ್ಮ ಹತ್ತಿರ ಬಂದು ನಮ್ಮನ್ನು ತಡೆದು ನಿಲ್ಲಿಸಿಜಗಳ ತಗೆದು ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಬಿದ್ದ ಒಂದು ಕಲ್ಲು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ ನನ್ನ ಎದೆಯ ಮೇಲೆ ಉಗುರಿನಿಂದ ಚೂರಿ ತರಚಿದ ಗಾಯ ಮಾಡಿರುತ್ತಾರೆ ಮತ್ತು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ನಾಗಪ್ಪ ತಂದೆ ಅಂಬಣ್ಣ  ಸಾ|| ಸರಾಫ ಬಜಾರ ಗುಲಬರ್ಗಾ ಇವರು  ಆರಾಮ ಇರುವದಿಲ್ಲಾ ಅಂತಾ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ವ್ಯಕ್ತಿಯು ಇಲ್ಲಿಯ ವರೆಗೆ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ 25-12-2013 ರಂದು ಬೆಳಿಗ್ಗೆ 6:00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿ ವ್ಯಕ್ತಿಯು ತನಗಿದ್ದ ಯಾವದೋ ಕಾಯಿಲೆಯಿಂದ ಗುಣ ಮುಖವಾಗದೆ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲಾ. ಮೃತ ವ್ಯಕ್ತಿಯ ಹೆಸರು ನಾಗಪ್ಪ ತಂದೆ ಅಂಬಣ್ಣ ಸಾ|| ಸರಾಫ ಬಜಾರ ಗುಲಬರ್ಗಾ ಅಂತಾ ಈ ಮೋದಲು ಅವನು ಉಪಚಾರ ಪಡೆಯಲು ಆಸ್ಪತ್ರೆಗೆ ಬಂದಾಗ ಬರೆಯಿಸಿದ್ದು ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: