ಗು  ಗುಲಬರ್ಗಾ
ಗ್ರಾಮೀಣ ಠಾಣೆ:
       ಜೂಜಾಟ ಪ್ರಕರಣ:
ದಿನಾಂಕ 15/12/13 ರಂದು ಮಧ್ಯಾಹ್ನ 3-00 ಗಂಟೆ
ಸುಮಾರಿಗೆ  ಫಿರ್ಯಾದಿದಾರರಿಗೆ ಡಬರಾಬಾದ ಸೀಮೆಯ
ಮಾಹಾಂತು ಕಡಗಂಚಿ ಇವರ ರೂಮಿನ ಮುಂದಿನ ಖುಲ್ಲಾ ಜಾಗೆಯಲ್ಲಿರುವ ಬೇವಿನ ಗಿಡದ ಕೆಳೆಗಡೆ ಕೆಲವು
ಜನರು ಅಂದರ ಬಾಹರ ಇಸ್ಪೀಟ ಜೂಜಾಟ  ನಡೆದಿದೆ
ಎಂದು  ಖಚಿತವಾದ ಬಾತ್ಮಿ ಬಂದ ಮೇರೆಗೆ  ಮಾನ್ಯ ಎ.ಎಸ್.ಪಿ.(ಗ್ರಾ) ಉಪವಿಭಾಗ ಗುಲಬರ್ಗಾ ರವರ
ಮಾರ್ಗದರ್ಶನದಲ್ಲಿ ಮತ್ತು  ಮಾನ್ಯ ಸಿಪಿಐ
ಡಿ.ಜಿ.ರಾಜಣ್ಣಾ ಇವರ ನೇತೃತ್ವದಲ್ಲಿ ಇಬ್ಬರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ
ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ ನಗದು ನಗದು ಹಣ 5300 ರೂ ಮತ್ತು  52 ಇಸ್ಪೇಟ ಎಲೆಗಳು ಜಪ್ತ
ಮಾಡಿದ್ದು ಇರುತ್ತದೆ .
ಸ್ಟೇಷನ ಬಜಾರ ಪೊಲೀಸ್ ಠಾಣೆ:
ಕಳ್ಳತನ ಪ್ರಕರಣ:
ಇಂದು ದಿನಾಂಕ 15/12/2013 ರಂದು ಶ್ರೀ ಅಶೋಕ ಪಾಟೀಲ ತಂದೆ ವಿಠಲರಾವ ವಯಃ 51 ವರ್ಷ ಜಾತಿಃ ಮರಾಠಾ ಉಃ ದೂರದರ್ಶನ ಕೇಂದ್ರ ಗುಲಬರ್ಗಾದಲ್ಲಿ ಇಂಜಿನಿಯರ ಕೆಲಸ ಸ್ಟೇಷನಬಜಾರ
ಗುಲಬರ್ಗಾ
ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದು
ಸಾರಂಶವೆನೆಂದರೆ,
ನನ್ನ ಸೈಕಲ್ ಮೋಟಾರ ಪ್ಯಾಷನ್ ಪ್ಲಸ್ ನಂ ಕೆಎ 32 ಎಸ್. 7849 ನೇದ್ದು ನಮ್ಮ ಮನೆಯ ಮುಂದೆ ನಿಲ್ಲಗಡೆ ಮಾಡಿ ನೋಡಲಾಗಿ ಸದರಿ
ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ ಸೈಕಲ್ ಮೋಟಾರ ಸಿಕ್ಕಿರುವದಿಲ್ಲ. ಕಾರಣ ಸೈಕಲ್ ಮೋಟಾರ ಪ್ಯಾಷನ್ ಪ್ಲಸ್ ನಂ; ಕೆಎ 32
ಎಸ್. 7849 ಚಸ್ಸಿ ನಂ; 07K05C40374 ಇಂಜಿನ್ ನಂ; 07K05M43358 ಅ|| ಕಿ|| 25,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ನನ್ನ ಸೈಕಲ್ ಮೋಟಾರ ಇಲ್ಲಿಯ ವರೆಗೂ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ಕಾರಣ ಇಂದು
ಠಾಣೆಗೆ ಬಂದು
ಅರ್ಜಿ ಸಲ್ಲಿಸಿದ್ದು ನನ್ನ ಸೈಕಲ್ ಮೋಟಾರ ಹುಡುಕಿ
ಕೋಡಬೇಕಂದು ಮಾನ್ಯರಲ್ಲಿ ವಿನಂತಿ ಅಂತಾ ವಗೈರೆ ಸಾರಂಶದ ಮೇಲಿಂದ ಠಾಣೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
 
 
 
 
No comments:
Post a Comment