POLICE BHAVAN KALABURAGI

POLICE BHAVAN KALABURAGI

17 December 2013

GULBARGA DIST REPORTED CRIMES



ಯಡ್ರಾಮಿ ಪೊಲೀಸ ಠಾಣೆ
ಗುನ್ನೆ ನಂ 81/11 ನೇದ್ದರಲ್ಲಿಯ ಆರೋಪಿತರಿಗೆ ಜೀವಾವಧಿ ಶಿಕ್ಷೆ
ದಿನಾಂಕ 30-10-11 ರಂದು ನಿಂಗಪ್ಪ ತಂದೆ ಗುರುಬಸಪ್ಪ ಕತ್ತಿ ಸಾ: ಚಾಂದಕೋಟಿ ತಾ:ಸಿಂದಗಿ ಇವರು ಠಾಣೆಗೆ ಹಾಜರಾಗಿ ತನ್ನ ಮಗಳಾದ ಸಾವಿತ್ರಿ ಇವಳಿಗೆ ಮಳ್ಳಿ ಗ್ರಾಮದ ಅಶೋಕ @ ಫಿನಿಕ್ಸ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ಕೆಲವು ವರ್ಷಗಳ ನಂತರ ಸಾವಿತ್ರಿಗೆ ತವರು ಮನೆಯಿಂದ ಹಣ ಬಂಗಾರ ತರುವಂತೆ ಗಂಡ 1) ಅಶೋಕ @ ಫಿನಿಕ್ಸ ಮೈದುನರಾದ 2) ತರ್ವೇಶ ತಂದೆ ಶರಣಪ್ಪ, 3) ಮಹೇಶ ತಂದೆ ಶರಣಪ್ಪ, ಹಾಗೂ ಅತ್ತೆಯಾದ 4) ಗುರುಬಾಯಿ ಗಂಡ ಶರಣಪ್ಪ ಈ ನಾಲ್ಕು ಜನರು ದೈಹಿಕ ಮಾನಸಿಕ ಕಿರುಕುಳ ನೀಡಿ ದಿನಾಂಕ 29-10-11 ರಂದು ರಾತ್ರಿ ಹೊಡೆದು ಕೊಲೆ ಮಾಡಿ ರಾಮರಾವ ದೇಶಪಾಂಡೆ ಇವರ ಹೊಲದಲ್ಲಿಯ ಹುಣಸಿ ಮರಕ್ಕೆ ನೇಣು ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ಶ್ರೀ ವಿಶ್ವನಾಥ ಕುಲಕರ್ಣಿ,  ಸಿ.ಪಿ.ಐ. ಜೇವರ್ಗಿ ರವರು ತನಿಖೆ ಕೈಗೊಂಡು ಮಾನ್ಯ 3 ನೇ ಜಿಲ್ಲಾ ಸತ್ರ ನ್ಯಾಯಾಲಕ್ಕೆ ಆರೋಪಿತರ ವಿರುದ್ದ ಷಾರೋಪಣೆ ಪತ್ರ ಸಲ್ಲಿಸಿದ್ದು ನ್ಯಾಯಾಧಿಶರಾದ ಕೆ.ಜಿ. ಶಿವಣ್ಣಗೌಡ ಇವರು ವಿಚಾರಣೆ ಮಾಡಿ ದಿನಾಂಕ 17-12-2013 ರಂದು ಸದರಿ ಆರೋಪಿತರಾದ 1,2,3, ರವರಿಗೆ  ಜೀವಾವಧಿ ಶಿಕ್ಷೆ ಹಾಗೂ ಆರೋಪಿ ನಂ 4 ನೇದ್ದವಳಿಗೆ 3 ವರ್ಷ ಸಜೆ ವಿಧಿಸಿ ತಿರ್ಪು ನೀಡಿರುತ್ತಾರೆ. ಪ್ರಕರಣದಲ್ಲಿ ಸಹಾಯಕ ಅಭಿಯೋಜಕರಾದ ವೆಂಕಣ್ಣ ದೇವಪೂರ ಇವರು ವಾದ ಮಂಡಿಸಿರುತ್ತಾರೆ.
ಅಶೋಕ ನಗರ ಠಾಣೆ
ಕಳವು ಪ್ರಕರಣ:
ದಿನಾಂಕ 17/12/2013 ರಂದು ಶ್ರೀ ಅರುಣಕುಮಾರ ತಂದೆ ಬಕ್ಕಪ್ಪ ಕಿಣ್ಣಿ   ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ದಿನಾಂಕ 17/12/2013 ರಂದು ಮುಂಜಾನೆ 7 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಮಾವನ ಮನೆಯ ಪಕ್ಕದವರಾದ ದಶರತಿ ಎಲ್.ಐ.ಸಿ ಏಜೆಂಟ ಇವರು ನನಗೆ ಪೋನ ಮಾಡಿ ನಿಮ್ಮ ಮಾವನ ಮನೆಯ ಮುಖ್ಯ ಬಾಗಿಲು ತೆರೆದಿದ್ದು  ಯಾರಾದರೂ ಬಂದಿದ್ದಾರೆಯೆ ಎಂದು ವಿಚಾರಿಸಲು  ನಾನು ಮತ್ತು ನನ್ನ ಹೆಂಡತಿ ನಮ್ಮ ಮಾವನ ಮನೆಗೆ ಬಂದು ನೋಡಲು ಮನೆಯ ಮುಖ್ಯ ಬಾಗಿಲದ ಲಾಕ ಇರುವ ಭಾಗದಲ್ಲಿ ಯಾರೋ ಅಪರಿಚಿತ ಕಳ್ಳರು ಜೋರಾಗಿ ಒತ್ತಿ ಮುರಿದು ಒಳಗೆ ಟಿ.ವಿ. ಹತ್ತಿರದ ಬಾಕ್ಸ ಬೆಡ ರೂಮದಲ್ಲಿನ ಅಲಮಾರಿ ಹಾಲಿಗೆ ಹೋಂದಿ ಇದ್ದ ಇನ್ನೊಂದು ಕೊಣೆಯ ಅಲಮಾರಿಹಾಲಿನಲ್ಲಿದ್ದ ಅಲಮಾರಿಇವುಗಳೆಲ್ಲವು ಯಾರೋ ಕಳ್ಳರು 16-17/12/2013 ರ ಮದ್ಯ ರಾತ್ರಿಯಲ್ಲಿ ಅವುಗಳನ್ನು ಮುರಿದು ಅವುಗಳಲ್ಲಿ ಇಟ್ಟ ಬಂಗಾರಬೆಳ್ಳಿ ನಗದು ಹಣ ಇತ್ಯಾಧಿ ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ಬೆಳ್ಳಿಬಂಗಾರನಗದು ಹಣ ಸೇರಿ ಅ.ಕಿ. 2,48,000/- ರೂ ಬೇಲೆ ಬಾಳುವವು ಕಳುವಾಗಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: