POLICE BHAVAN KALABURAGI

POLICE BHAVAN KALABURAGI

05 November 2013

Gulbarga District Reported Crimes

ಹಲ್ಲೆ ಪ್ರಕರಣ:
ಚಿಂಚೋಳಿ ಠಾಣೆ : ಶ್ರೀ ದಯಾನಂದ ತಂದೆ ಕೇಶವರಾವ ಸಾ; ಐನಾಪೂರ ತಾ|| ಚಿಂಚೋಳಿ ರವರು ಐನಾಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ನನಗೆ ಸಂಬಂಧಪಟ್ಟಂತೆ ಅಂಗಡಿ ಇದ್ದು  ನನ್ನ ಅಂಗಡಿಯ ಪಕ್ಕದಲ್ಲಿ ಶ್ರೀ ಶಂಕರ ತಂದೆ ರಾಮಚಂದ್ರ ವಗ್ಗೆ ರವರ ಹೋಟೆಲ ಪೂಜಾ ಇದ್ದುದ್ದರಿಂದ ಸದರ ಹೊಟೆಲ ಕಡೆಗೆ ಹೋದೆನು ಪೂಜಾ ಮುಗಿದ ನಂತರ ನನ್ನ ಮನೆಕಡೆಗೆ ಹೋರಟಾಗ ಅಷ್ಟರಲ್ಲಿಯೇ ಸದರ ಹೋಟೆಲ ಹತ್ತಿದಲ್ಲಿದ್ದ ನಮ್ಮೂರಿನವನಾದ ಸಂತೋಷ ತಂದೆ ವೆಂಕಟರಾವ ಇವನು ನಿನ್ನೆ ದಿನಾಂಕ 04.11.2013 ರಂದು ರಾತ್ರಿ 10.30 ಗಂಟೆಗೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ತನ್ನ ಕೈಮುಷ್ಟಿಯಿಂದ ಕಪಾಳಕ್ಕೆ, ಎದೆಯಮೇಲೆ ಹೊಡೆದಿದ್ದಲ್ಲದೇ ಯಾವೂದೇ ಒಂದು ಚೂಪಾದ ಆಯುಧದಿಂದ ನನ್ನ ಮೂಗಿನ ಬಲ ಹೋಳ್ಳೆಯನ್ನು ಕೊಯ್ದು ಭಾರಿ ರಕ್ತಗಾಯಪಡಿ ಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಚಿಂಚೋಳಿ ಠಣೆ : ಶ್ರೀಮತಿ ರತ್ನಮ್ಮಾ ಗಂಡ ಸಿದ್ದಪ್ಪ ನಾಯಿಕೊಡಿ ಸಾ : ದೆಗಲ್ಮಡಿ  ತಾ: ಚಿಂಚೋಳಿ  ರವರು ದಿನಾಂಕ 03-11-2013 ರಂದು  ಬೆಳೆಗ್ಗೆ ಸಮಯದಲ್ಲಿ  ತನ್ನ ಖಾಸಗಿ ಕೆಲಸದ ಸಲುವಾಗಿ ತಾನು ತನ್ನ ಮಗನಾದ ಜಗನ್ನಾಥ ಹಾಗೂ ತನ್ನ ಗಂಡನಾದ ಸಿದ್ದಪ್ಪ ಮೂರು ಜನರು ಕೂಡಿಕೊಂಡು ಮನೆಯಿಂದ ರಸ್ತೆಯ ಮುಖಾಂತರ ಚಿಂಚೋಳಿಗೆ ಬರುತ್ತಿದ್ದಾಗ ನಮ್ಮೂರಿನಿಂದ ಚಿಂಚೋಳಿಗೆ ಬರುವ ರಸ್ತೆಯ ಎಡ ಬದಿಯಲ್ಲಿಯೇ  ನಡೆದುಕೊಂಡು ಬರುತ್ತಿರುವಾಗ ಆದಿ ಬಸವಣ್ಣ ಗುಡಿಯ ಹತ್ತಿರ ಹಿಂದಿನಿಂದ ತಮ್ಮ ಊರಿನವನೇ ಆದ ಸುನಿಲ್ ತಂಧೆ ಸಿದ್ದಪ್ಪ ಇವನು ತನ್ನ ಮೋಟಾರ ಸೈಕಲ್ ನಂ ಕೆ ಎ 32 ಇ ಸಿ 9684 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಿಜೀತನದಿಂದ  ಮಾನವ ಜೀವಕ್ಕೆ ಅಪಾಯವಾಗುಂತೆ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಗಾಯಪಡಿಸಿತನ್ನ ಮೋಟಾರ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಡಾ || ರಾಜೇಶ ತಂದೆ ಸಂಗ್ರಾಮ ಉದಗಿರಿ  ಸಾ|| ಮನೆ ನಂ; 1-867/22/ಎ ಮಹಾವೀರ ನಗರ ಗುಲಬರ್ಗಾ ರವರು  ದಿನಾಂಕ; 31-10-2013 ರಂದು ಬೆಳಗ್ಗೆ 06 ಗಂಟೆಗೆ ನಾನು ಮನೆಗೆ ಕಿಲಿ ಹಾಕಿಕೊಂಡು ರಾಯಚೂರಿಗೆ ಹೊಗಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದು ದಿನಾಂಕ; 04-11-2013 ರಂದು ಸಾಯಂಕಾಲ 06;00 ಗಂಟೆಯ ಸುಮಾರಿಗೆ ನಮ್ಮ ಕಂಪೌಂಡರ ಮರೆಪ್ಪ ಕುಂಬಾರ ನನಗೆ ಪೊನ ಮಾಡಿ ತಿಳಿಸಿದ್ದೇನಂದರೆ ಯಾರೋ ಕಳ್ಳರು ಮನೆಯ ಕೀಲಿ ಮುರಿದಿರುತ್ತಾರೆ  ಅಂತಾ ತಿಳಿಸಿದ್ದು ನಾವು ಇಂದು ದಿನಾಂಕ; 05-11-2013 ರಂದು ಬೆಳಗ್ಗೆ 07;00 ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲಿಗೆ ಹಾಕಿರು ಕೀಲಿ ಮುರಿದು ಮನೆಯಲ್ಲಿಯ ಬಂಗಾರದ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 2,07,000/- ರೂ ಕಿಮ್ಮತ್ತಿನ ಮಾಲು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: