POLICE BHAVAN KALABURAGI

POLICE BHAVAN KALABURAGI

30 October 2013

Gulbarga District Reported Crimes

ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ಶ್ಯಾಮಸುಂದರ ತಂಧೆ ಗಜಾನನರಾವ ಸಾ|| ಮನೆ ನಂ.1-89/ಎ ರಾಘವೇಂದ್ರ ನಿವಾಸ ಐವಾನ ಇ ಶಾಹಿ ಕಾಲೂಣಿ ಇವರು ದಿನಾಂಕ. 29.10.2013 ರಂದು ಮದ್ಯಾಹ್ನ 2.30 ಗಂಟೆಗೆ ತಮ್ಮ ವಯಕ್ತಿಕ ಕೆಲಸದ ನಿಮಿತ್ಯ ಹೊರಗಡೆ ಹೋಗಿದ್ದು ತಾಯಿ ಒಬ್ಬಳಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಅವರು ಮನೆಯಲ್ಲಿದ್ದು ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ಒಳಗಡೆ ಮಲಗಿಕೊಂಡಾಗ ಯಾರೋ ಒಬ್ಬ ಹೆಣ್ಣುಮಗಳು ಮನೆಯ ಬಾಗಿಲನ್ನು ದಬ್ಬಿ ತೆರೆದು ಮನೆಯಲ್ಲಿ ಬಂದು ಮನೆಯಲ್ಲಿಯ ದೇವರ ಜಗಲಿಯ ಮೇಲಿದ್ದ ಎರಡು ಬೆಳ್ಳಿಯ ಪ್ಲೇಟ,  ಮೂರು ಬೆಳ್ಳಿಯ ನಿಲಂಜನ, ಎರಡು ಬೆಳ್ಳಿಯ ಗ್ಲಾಸ, ಎರಡು ಬೆಳ್ಳಿಯ ಬೋಗೊನಿ, ಒಂದು ಬೆಳ್ಳಿಯ ಚಮಚ, ಒಂದು ಹಿತ್ತಾಳಿಯ ತಟ್ಟೆ ಹೀಗೆ ಒಟ್ಟು  ಅ.ಕಿ|| 24,500/- ರೂ ಬೆಲೆಬಾಳುವ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೋಮಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಗಿರಿಜಾಬಾಯಿ ಗಂಡ ಶಿವಶಂಕರ ಕಣ್ಣಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು, ದಿನಾಂಕಃ 29-10-2013 ರಂದು 07:30 ಎ.ಎಂ. ಕ್ಕೆ ಶಾರದಬಾಯಿ ಇವಳ ಮನೆಯ ಅಂಗಳದಲ್ಲಿ ಹೋಗಿ ನನ್ನ ಮಗ ಕೊಟ್ಟ 50 ಸಾವಿರ ರೂ. ಕೊಡು ಅಂತಾ ಕೇಳಿದಕ್ಕೆ ಶಾರದಾಬಾಯಿ ಇವಳು ಸಿಟ್ಟಿಗೆ ಬಂದು ಭೋಸಡಿ ನಿನಗೆ ಹಣ ಕೊಡುವುದಿಲ್ಲ ರಂಡಿ ನೀನು ಏನು ಮಾಡಿಕೊಳ್ಳುತ್ತಿ ಮಾಡಕೋ ಅಂತಾ ಜಗಳಕ್ಕೆ ಬಿದ್ದು ತಲೆಯ ಕೂದಲು ಹಿಡಿದಳು ಅಷ್ಟರಲ್ಲಿ ಶರಣಪ್ಪಾ ಮತ್ತು ಪ್ರಭು ಮನೆಯಿಂದ ನಾಗಮ್ಮ ಅವಳೊಂದಿಗೆ ಅಂಗಳಕ್ಕೆ ಬಂದು ಶರಣಪ್ಪ ಮತ್ತು ಪ್ರಭು ಇವರು ನನ್ನ ಕೈಗಳನ್ನು ಒತ್ತಿ ಹಿಡಿದು ಅವಮಾನಗೊಳಸಿದ್ದು ಮತ್ತು ನಾಗಮ್ಮ ಇವಳು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: