POLICE BHAVAN KALABURAGI

POLICE BHAVAN KALABURAGI

28 October 2013

Gulbarga District Reported Crimes

ಕಳವು ಮಾಡಲು ಪ್ರಯತ್ನ :
ಮಳಖೇಡ ಠಾಣೆ : ದಿನಾಂಕ 17-10-2013 ರಂದು ರಾತ್ರಿ 09:00 ಸಮಯಕ್ಕೆ ನೀಲಹಳ್ಳಿ ಗ್ರಾಮದ ಹಾರಕೂಡ ಮುತ್ಯಾನ ಗುಡಿಯ ಮೇಲೆ ಇರುವ ಕಳಸವನ್ನು ಯಾರೋ ಅಪರಿಚಿ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಲು ಪ್ರಯತ್ನ ಮಾಡಿರುತ್ತಾರೆ ಅಂತಾ ಶ್ರೀ ಮಾಣಿಕರಾವ ತಂದೆ ಬಸಪ್ಪ ಪಾಟೀಲ ಸಾ|| ನೀಲಹಳ್ಳಿ ರವರು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗಣೇಶ ತಂದೆ ಪ್ರಭಾಕರ ಇವರು ದಿನಾಂಕ: 26-10-2013 ರಂದು ರಾತ್ರಿ  11=00 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂ: ಕೆಎ 32 ವಾಯಿ 8071 ನೆದ್ದರ ಮೇಲೆ ನಾಗರಾಜ ಈತನಿಗೆ ಕೂಡಿಸಿಕೊಂಡು ಜಗತ ಸರ್ಕಲ್ ಮುಖಾಂತರ ಹೋಗುತ್ತಿದ್ದಾಗ ಭೀಮ ನಗರ ಕಮುನಿಟಿ ಹಾಲ ಎದುರು ರೋಡಿನ ಮೇಲೆ ಮೋ/ಸೈಕಲ್ ನಂ: ಕೆಎ 32 ವಿ 6322 ನೆದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ  ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ತನ್ನ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಮಲ್ಲಯ್ಯಾ ತಂದೆ ಕನ್ನಯ್ಯಾ ವಾಡಿ ಸಾ : ವಡ್ಡರಗಲ್ಲಿ ತಾ :ಚಿಂಚೋಳಿ ಇವರು ದಿನಾಂಕ 27.10.2013 ರಂಧು ರಾತ್ರಿ 08.00 ಗಂಟೆಗೆ ನಾನು ನಮ್ಮ ಓಣಿಯ ಶ್ರೀ ರಾಜಪ್ಪ ಗುತ್ತೆದಾರ ಎಂಬುವವರ ಮನೆಗೆ ಹೋಗಿ ಮರಳಿ ಮತ್ತೆ ನಮ್ಮ ಮನೆಗೆ ಬರುವಾಗ ನಮ್ಮ  ಮನೆಯ ಮುಂದೆ ಅಂಗಳದಲ್ಲಿ ನಮ್ಮ ಓಣಿಯ ನಾಗಪ್ಪ ತಂಧೆ ಪಾಪಯ್ಯ ಸಂಗೈ, ರಾಜು ತಂಧೆ ಪಾಪಯ್ಯ , ಸತೀಶ ತಂಧೆ ಲಕ್ಷ್ಮಣ  ಸಂಗೈ, ಸೀನು ತಂದೆ ಲಕ್ಷ್ಮಣ ಸಂಗೈ ಮತ್ತು ಶಂಕರ ತಂದೆ ನಾಗಪ್ಪ ಸಂಗೈ  ಎಂಬುವವರು ಅಕ್ರಮಕೂಟ ರಚಿಸಿಕೊಂಡು ಬಂದು  ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಗುಪ್ತಗಾಯಗೊಳಿಸಿ ನಿನು ಸರಿಯಾದ ಸಮಯಕ್ಕೆ ಸಿಕ್ಕಿದ್ದಿ ನಿನಗೆ ಬಿಡುವುದಿಲ್ಲಾ ಹೋಡೆದು ಖಲಾಸ ಮಾಡುತ್ತೆವೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: