POLICE BHAVAN KALABURAGI

POLICE BHAVAN KALABURAGI

10 October 2013

ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ: 10-10-2013 ರಂದು ಮದ್ಯಾಹ್ನ 1200 ಗಂಟೆಗೆ ನಾನು ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ,ಎಸ್,, ಶಿವಕುಮಾರ ಹೆಚ್.ಸಿ 08, ಶಿವಪ್ಪ ಹೆಚ್.ಸಿ 386, ರಫೀಯೋದ್ದೀನ ಸಿಪಿಸಿ 370,ಶಿವಪ್ರಕಾಶ ಸಿಪಿಸಿ 615, ರಾಮು ಪವಾರ ಸಿಪಿಸಿ 761, ದೇವಿಂದ್ರಪ್ಪ 212, ಸುಭಾಷ ಸಿಪಿಸಿ 447 ರವರೆಲ್ಲರೂ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನಂದರೆ, ಮಕ್ತಂಪೂರ ಬಡಾವಣೆಯ ಶಂಕರಲಿಂಗ ಗುಡಿ  ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ  ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಿದ್ದಾನೆ ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗು ಸಿಬ್ಬಂದಿಯವರೊಂದಿಗೆ ಹೊರಟು ಶಂಕರಲಿಂಗ ಗುಡಿ  ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ಮದ್ಯಾಹ್ನ 1230 ಗಂಟೆಗೆ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಲಾಗಿ ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದು, ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜಶೇಖರ ತಂದೆ ಗುರಪ್ಪ ಖಜೂರಿ ಸಾ|| ಮಕ್ತಂಪೂರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 1) ನಗದು ಹಣ 3,110/- ರೂಪಾಯಿ 2) ಎರಡು ಮಟಕಾ ಚೀಟಿ3)  ಒಂದು ಬಾಲ ಪೇನ್ನ ಅ||ಕಿ|| 00 ದೊರೆತವು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಬರೆಯಿಸಿಕೊಂಡು  ಆರೋಪಿಯೊಂದಿಗೆ ಮರಳಿ ಠಾಣೆಗೆ  ಬಂದು ಸದರಿಯವನ  ವಿರುದ್ದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀಮತಿ ಸರೋಜಾಬಾಯಿ ಗಂಡ ಭೀಮರಾವ್ ಪವಾರ ಸಾ: ಪೊಲಕಪಳ್ಳಿ ತಾ: ಚಿಂಚೋಳಿ ರವರು ದಿನಾಂಕ 09-10-2013 ರಂದು ಸಾಯಾಂಕಾಲ 05.00 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಮನೆಯ ಕಟ್ಟೆಯ ಮೇಲೆ ಕುಳುಕೋಂಡಿದ್ದನು ಆಗ ನಮ್ಮ ಪಕ್ಕದ ಮನೆಯ ನೀಲಾಬಾಯಿ ಗಂಡ ಪಾಂಡು ರಾಠೊಡ ಮತ್ತು ಸೀನು ತಂದೆ ಪಾಂಡು  ರಾಠೋಡ ಎಂಬುವವರು ಕೂಡಿಕೊಂಡು ಬಂದು ನಮ್ಮ ಮನೆಯ ಅಂಗಳದಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡ ನನ್ನ ಗಂಡನಾದ ಭಿಮರಾವ್ ಪವಾರ ಎಂಬುವವಿನಿಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಸೂಳೆ ರಂಡಿ ಮಗನೇ ಅವಳಿಗೆ ಇವತ್ತು ಬಿಡುವದಿಲ್ಲಾ  ಹೋಡೆದು ಖಲಾಸ ಮಾಡುತ್ತೆವೆ. ಅಂತ ಬೈಯಲು ಪ್ರಾಂಬಿಸಿದರು ಆಗ ನನ್ನ ಗಂಡನು ಏನು ಬೈಯುವದು ಇದೆ ಮತ್ತು ಜಗಳ ಮಾಡುವದು ಇದೆ ಅದೇಲ್ಲಾ ನನ್ನ ಹೆಂಡತಿಯೊಂದಿಗೆ ಮಾಡರಿ ಅಂತ ಅಂದನು ಅದಕ್ಕೆ ನೀಲಾಬಾಯಿಯು ಇವತ್ತು ಬೇಳಗ್ಗೆ ನಿನ್ನ ಹೆಂಡತಿ ನಮ್ಮೋಂದಿಗೆ ತಕರಾರು ಮಾಡಿದ್ದಾಳೆ ಅವಳಿಗೆ ಏನೋ ನೀನು ಹೇಳುವದಿಲ್ಲಾ ಅಂತಾ ಅಂದಳು  ಅಷ್ಟರಲ್ಲಿಯೇ ನಮ್ಮ ಮನೆಯೋಳಗಿ ಇದ್ದ ನಾನು ಮನೆಯಿಂದ ಹೋರೆಗೆ ಬಂದು ಅವರಿಗೆ ಯಾಕೇ ? ಅಂಗೆ ಬೈಯುತ್ತಿದ್ದಿರಿ ಅಂತ ಅಂದೆನು ಅಷ್ಟರಲ್ಲಿಯೇ  ಸೀನು ಎಂಬುವವನು  ನಡೆ ಒಳಗೆ ಇಂದು ನಿನಗೆ ಬಿಡುವದಿಲ್ಲಾ ಹಡುತ್ತೆನೆ ಅಂತಾ  ಅಂದನು ಅವನು ಆಗ ಮಾತಾನಾಡಿದಕ್ಕೆ ನಾನು ನಮ್ಮ ಮನೆಯೋಳಗೆ ಹೋದೆನು. ನಾನು ಮನೆಯೋಳಗೆ ಹೋದ ತಕ್ಷಣವೇ ಸೀನು ಎಂಬುವವನು ನಮ್ಮ ಮನೆ  ಅತೀ ಕ್ರಮ ಪ್ರವೇಶ ಮಾಡಿ ಬಂದವನೇ ನನ್ನ ತಲೆಗೂದಲು ಹಿಡಿದು ಜಗ್ಗಾಡಿ ನೇಲಕ್ಕೆ ಕೆಡವಿ ಕೈಯಿಂದ ಹಣೆಗೆ ಹೋಡೆದು ಮತ್ತು ಕಾಲಿಂದ ಕಿಬ್ಬಹೋಟ್ಟೆಯ ಮೇಲೆ ಒದ್ದು ಗುಪ್ತಗಾಯ ಗೊಳಿಸಿದನು ಆಗ ನಾನು ಚಿರಾಡುತ್ತಿದ್ದಾಗ ನನ್ನ ಮಗಳಾದ ಜ್ಯೋತಿಬಾಯಿ ಎಂಬುವವಳು ಜಗಳ ಬಿಡಿಸಲು ಬಂದರೆ ಸೀನು ಎಂಬುವವನು ಅವಳ ಕೂದಲು ಹಿಡಿದು ಏಳೆದಾಡಿ ಅವಮಾನ ಮಾಡಿದರೇ ಮೋಹನ ತಂದೆ ಪಾಂಡು ಎಂಬುವನು ಒಂದು ಕಾಲಿನಿಂದ ನನ್ನ ಮಗಳ ಎದೆಗೆ , ಹೋಟ್ಟೆಗೆ , ಕಿಬ್ಬಹೋಟ್ಟೆಗೆ ಹೋದ್ದು ಗುಪ್ತಗಾಯಪಡಿಸಿರುತ್ತಾನೆ. ನೀಲಾಬಾಯಿಯು ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ  ಚನ್ನಪ್ಪ ತಂದೆ ಮಲ್ಲೇಶಪ್ಪಾ ಕಣ್ಣಾಕರ ಸಾ: ಬೆಳಮಗಿ ತಾಲೂಕು ಆಳಂದ ದಿನಾಂಕ 08-10-2013 ರಂದು ಮುಂಜಾನೆ ನಮ್ಮ ಮನೆಯ ಕರ ಪವತಯಿಸುವ ಸಲುವಾಗಿ ನಾನು ನಮ್ಮ ಊರ ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹೋಗಿದ್ದು, ಕಾರ್ಯದರ್ಶಿರವರು ಬರದೆ ಇದ್ದ ಕಾರಣ ನಾನು ಮತ್ತು ನಮ್ಮ ಗ್ರಾಮದ ಸಿದ್ದಪ್ಪಾ ತಂದೆ ಚಂದ್ರಕಾಂತ ಬಸನಕರ ಮತ್ತು ರಾಜಕುಮಾರ ತಂದೆ ಸಿದ್ರಾಮಪ್ಪಾ ಕಸನಕರ ಅವರಗಳ ಕೂಡಿ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಮಾತಾಡುತ್ತಾ ಕುಳಿತುಕೊಂಡಾಗ  ನಮ್ಮ ಗ್ರಾಮದ ಅಂಬಾರಾಯ ತಂದೆ ಶರಣಪ್ಪ ಜಿಂಜೆ ಪ್ರಸ್ತುತ ಗ್ರಾಮ ಪಂಚಾಯತ ಉಪಾಧ್ಯಕ್ಷರು ಇವರು ಸಭಾಂಗಣದಲ್ಲಿ ಬಂದು ನನಗೆ ಎದ್ದು ನಿಂತುಕೊಳ್ಳುವ ಬದಲಾಗಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಡುತ್ತಿಯಾ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಎಡ ಕೆನ್ನೆಯ ಮೇಲೆ ಹೊಡೆಯಹತ್ತಿದ್ದನು. ಅದಕ್ಕೆ ನಾನು ವಿನಾಕಾರಣವಾಗಿ ನನಗೆಕೆ ಹೊಡೆತ್ತಿರುವೆ ಅಂತಾ ಸಭಾಂಗಣದಿಂದ ಹೊರಗೆ ಬರುವಾಗ ನನ್ನ ಅಂಗಿ ಹಿಡಿದು ನನ್ನನ್ನು ತಡೆದು ನಿಲ್ಲಿಸಿ ಕೈ ಮುಷ್ಟಿ ಮಾಡಿ ನನ್ನ ಹಣೆಯ ಮೇಲೆ ಗುದ್ದಿ ಇನ್ನು ಮುಂದೆ ನನ್ನ ಕಣ್ಣಿಗೆ ಕಂಡರೆ ನಿನಗೆ ಖಲಾಸ ಮಾಡುತ್ತೇನೆ ಜೀವದ ಭಯ ಹಾಕರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಡಿಪ್ಲೋಮಾ ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಅಮೃತಸಿಂಗ ಗಂಡ ಮಲ್ಲಿಕಾರ್ಜುನ ಗೋಪಾಳೆ ಸಾ: ಮುನ್ನೊಳ್ಳಿ ತಾ: ಆಳಂದ ಜಿ: ಗುಲಬರ್ಗಾ ಇವರ ಹಿರಿಯ ಮಗ ಸುನೀಲಕುಮಾರ ಇತನು ಗುಲಬರ್ಗಾದ ಪಾಲಟೆಕ್ನಿಕ ಕಾಲೆಜದಲ್ಲಿ 2 ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು ಪರೀಕ್ಷೆಯಲ್ಲಿ 3 ವಿಷಯದಲ್ಲಿ ಅನುತ್ತೀರ್ಣನಾಗಿದ್ದು  ಅವನಿಗೆ  ಸ್ವಲ್ಪ ಬೈದು ಅವನಿಗೆ ಕೊಟ್ಟಂತಹ ಮೋಬೈಲ ಕಸಿದುಕೊಂಡಿದ್ದರಿಂದ ಅವನು ಮನಸಿಗೆ ಬೇಜಾರ ಮಾಡಿಕೊಂಡು ದಿನಾಂಕ 07-10-2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಅವನು ವಾಸವಾಗಿದ್ದ ಸರಕಾರಿ ಬಾಲಕರ ವಸತಿ ನಿಲಯ ಕೋಟನೂರ ದರಿಯಾಪೂರ ಬಡವಾಣೆಯಿಂದ ಹೋದವನು ಮರಳಿ ಬಂದಿರುವದಿಲ್ಲ, ಅವನ ಸಂಗಡಿಗರು ಪೋನ ಮಾಡಿ ತಿಳಿಸಿದ್ದರಿಂದ ಮರು ದಿವಸ ಬೆಳಿಗ್ಗೆ ವಸತಿ ನಿಲಯಕ್ಕೆ ಹೋಗಿ ಎಲ್ಲಾ ಕಡೆ ಹುಡಕಾಡಿದ್ದು ಮತ್ತು ಸಂಬಂದಿಕರಿಗೆ ವಿಚಾರಿಸಿದ್ದು ಸುಳಿವು ಸಿಕ್ಕಿರುವದಿಲ್ಲ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸಹೀದ ಅಹ್ಮದ ಸಾ: ರೋಜಾ ಪೊಲೀಸ್ ಠಾಣೆ ಹತ್ತಿರ ರೋಜಾ (ಬಿ) ಗುಲಬರ್ಗಾ ರವರು ದಿನಾಂಕ: 09-10-2013  ರಂದು ಸಾಯಂಕಾಲ 6-30 ಪಿ.ಎಮ್.ಕ್ಕೆ ಜಗತ ಸರ್ಕಲ್ ಹತ್ತಿರ ಸುಪರ ಮಾರ್ಕೇಟ ರೋಡಿಗೆ ಬರುವ ಅಟೋ ಸ್ಟ್ಯಾಂಡ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಗೋವಾ ಹೊಟೇಲ ರೋಡ ಕಡೆಯಿಂದ ಕಾರ ನಂ: ಕೆಎ 32 ಎನ್ 2740 ನೆದ್ದರ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತಪಡಿಸಿ  ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 10-10-2013 ರಂದು 01-30 ಎ.ಎಮ್ ಕ್ಕೆ ಫಿರ್ಯಾದಿ ತನ್ನ ಮೋಟಾರ ಸೈಕಲ ನಂ. ಕೆ.ಎ 32  ಡಬ್ಲು 3218 ನೇದ್ದು ಚಲಾಯಿಸಿಕೊಂಡು ಸೇಡಂ ರಿಂಗ ರೋಡ ಕಡೆಗೆ ಹೋಗುವ ಕುರಿತು ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಇರುವ ಎಚ್.ಡಿ.ಎಪ್.ಸಿ ಬ್ಯಾಂಕ ಎದರುಗಡೆ ಹೋಗುತ್ತಿದ್ದಾಗ ಡಾಃ ಹಾನುತೇಜ ಇವರು ತನ್ನ ಕಾರ ನಂ. ಎ.ಪಿ 5 ಬಿ.ಕೆ 2738ನೇದ್ದನ್ನು ಎದರುಗಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: