ಕಳವು ಪ್ರಕರಣ :
ನೆಲೋಗಿ ಠಾಣೆ : ಮುಖ್ಯ ಗುರುಗಳು ಮಂದೇವಾಲ ಹಿರಿಯ ಪ್ರಾಥಮಿಕ ಶಾಲೆ
ರವರು ದಿನಾಂಕ: 05-10-2013 ರಂದು ಶನಿವಾರ ಸಾಯಂಕಾಲ 04.30 ಗಂಟೆಗೆ ದಸರಾ ಹಬ್ಬದ ಮಧ್ಯಂತರ ರಜೆಗಾಗಿ ಶಾಲೆಯನ್ನು
ಬೀಗವನ್ನು ನಮ್ಮ ಸಹ ಶಿಕ್ಷಕರ ಸಮಕ್ಷಮದಲ್ಲಿ ಹಾಕಿಕೊಂಡು ಬಿಸಿಯೂಟದ ಧಾನ್ಯವನ್ನು ಅಡುಗೆ
ಕೋಣೆಯಲ್ಲಿ ಇಟ್ಟು ಹೋಗಿದ್ದು, ಇಂದು ದಿನಾಂಕ: 11-10-2013 ರಂದು ಮುಂಜಾನೆ 08.30  ಗಂಟೆಗೆ ನಮ್ಮ ಶಲೆಯ ಎಸ್ ಡಿ  ಎಮ್ಸಿ  ಅದ್ಯಕ್ಷರಾದ ಶ್ರೀಯುತ ಅಣ್ಣಾರಾಯ ನಾಟೀಕಾರ ಇವರು ನಮ್ಮ ಶಾಲೆ ಕಳುವಾಗಿದೆಎಂದು ಫೋನ ಮೂಲಕ ತಿಳಿಸಿದರು. ನಂತರ
ನಾನು ಶಾಲೆಗೆ ಬಂದು ನೋಡಲಾಗಿಬಿಸಿಯೂಟ ಅಡುಗೆ ಕೋಣೆಯ ಬೀಗ ಒಡೆದಿದ್ದು, ಹಾಗೂ ಅದರಲ್ಲಿದ್ದ 1] ಅಕ್ಕಿ:- 7 ಕ್ವಿಂಟಲ್ 5ಕೆ ಜಿ ಇದರ ಮೊತ್ತ = 8,400=00 2] ಬೇಳೆ:- 1 ಕ್ವಿಂಟಲ್ 23 ಕೆ ಜಿ ಇದರ ಮೊತ್ತ  6,760=00 3] ಎಣ್ಣೆ:- 17 ಕೆ.ಜಿ. ಇದರ ಮೊತ್ತ 1020-00  ಹೀಗೆ
ಒಟ್ಟು 16,180=00  ರೂ ಗಳ  ಕಿಮ್ಮತ್ತಿನವಸ್ತುಗಳು  ಯಾರೋ  ಕಳ್ಳರು ರಾತ್ರಿಯ  ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣ : 
ಮಾಹಾಗಾಂವ ಠಾಣೆ : ಶ್ರೀಮತಿ ದ್ರಾಕ್ಷಾಯಿಣಿ ಗಂ ರೇವಣಸಿದ್ದಯ್ಯಾ ಮುಗಳಿ ಸಾ||
ನಾಗೂರ ಇವರು ಗಂಡನಾದ ರೇವಣಸಿದ್ದಯ್ಯಾ ಇತನು ತಾನು ಕೊಟ್ಟ 500=00
ರೂ ಹಣವನ್ನು ಅರವಿಂದ ತಂ ಶಂಕ್ರೆಪ್ಪ  ಏರಿ ಸಾ|| ನಾಗೂರ ಇತನಿಗೆ
ತಮ್ಮೂರಲ್ಲಿ ಕೆಳಿದ್ದಾಗ ಆತನಿಗೆ ಸದರಿಯವನು ಕೈಯಿಂದ ಮುಷ್ಠಿಮಾಡಿ ಮುಖದ ಮೇಲೆ ಸಿಕ್ಕಾಪಟ್ಟೆ
ಹೋಡೆದು ರಕ್ತಗಾಯಗೊಳಿಸಿದ್ದು ಅಲ್ಲದೆ ಹಲ್ಲಿನಿಂದ ಎಡಕೀವಿ ಕಚ್ಚಿ ರಕ್ತಗಾಯ ಮಾಡಿದ್ದು ಈ ಸಂಬಂದ
ಆತನೊಂದಿಗೆ ಜಗಳ ಮಾಡಿದ್ದಕ್ಕೆ ನಿನ್ನೆ ದಿನಾಂಕ 10-10-2013  ರಂದು ರಾತ್ರಿ 9.00 ಗಂಟೆಯ ಸೂಮಾರಿಗೆ ಸದರಿ
ಅರವಿಂದ ಏರಿ ಇತನು ಮನೆಯ ಮುಂದೆ ಬಂದು ರಂಡಿ ನೀನು ನನಗೆ ಏಕೆ ಬೈದಿರುವಿ ಅಂತಾ ಸಿಕ್ಕಾಪಟ್ಟೆ
ಅವಾಚ್ಯ ಶಬ್ದಗಳಿದ್ದ ಬೈದು ಕೈಯಿಂದ ಸಿಕ್ಕಪಟ್ಟೆ ಎರಡು ಕಪಾಳೆ ಮೇಲೆ ಕಿವಿಯ ಮೇಲೆ ಹೊಡೆದು ಭಾರಿ
ಒಳಪೆಟ್ಟು ಮಾಡಿ ಎದೆಯ ಮೇಲಿನ ಶೀರೆ ಹಿಡಿದು ಎಳದಾಡಿ ಮಾನಬಂಗ ಮಾಡಿ ಜೀವ ಬೇದರಿಕೆ
ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಗ್ರಹಿಣಿಗೆ
ಗಂಡ ಗಂಡನ ಮನೆಯವರಿಂದ ಕಿರುಕಳ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ. 11-10-2013 ರಂದು 6-00 ಪಿ.ಎಂ.ಕ್ಕೆ ನಮ್ಮ ಠಾಣೆಯ
ಕೋರ್ಟ ಕರ್ತವ್ಯ ಪಿಸಿ. 1257  ನಾಗರಾಜ ಇವರು
ಮಾನ್ಯ ನ್ಯಾಯಾಲಯದ ಪತ್ರ ಸಂ., ದಿನಾಂಕ.5-10-2013
ಮತ್ತು  ಶ್ರೀಮತಿ ಚಂದ್ರಕಲಾ ಗಂಡ
ಸಿದ್ದಲಿಲಂಗಪ್ಪಾ  ಸಾ;ಕುಮಸಿವಾಡಿ ಇವರು ಮಾನ್ಯ
ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಫಿರ್ಯಾದಿ ಪಿ.ಸಿ.ನಂ.844/13 ನೆದ್ದನ್ನು
ಹಾಜರಪಡಿಸಿದ್ದು, ಶ್ರೀಮತಿ ಚಂದ್ರಕಲಾ ಗಂಡ
ಸಿದ್ದಲಿಂಗ ಸಾ;ಕುಮಸಿವಾಡಿ ತಾ;ಜಿ;ಗುಲಬರ್ಗಾ ಇವರು ದಿನಾಂಕ.20-5-2009 ರಂದು ನರೋಣ
ಗ್ರಾಮದಸಿದ್ದಲಿಂಗಪ್ಪಾ ತಂದೆ ಸಾಯಿಬಣ್ಣಾ
ದನ್ನೂರ ಇತನೊಂದಿಗೆ ಸಾಂಪ್ರಾದಾಯಕವಾಗಿ
ಮದುವೆಯಾಗಿದ್ದು ಮದುವೆಯಾದ 6 ತಿಂಗಳಲ್ಲಿ ಸರಿಯಾಗಿ ನೋಡಿಕೊಂಡಿದ್ದು ಅದಾದನಂತರ  ಮನೆಯವರೆಲ್ಲರು ಮನೆಯಲ್ಲಿ
ಸಣ್ಣ ಸಣ್ಣ ವಿಷಯಗಳಿಗೆ ಬೈಯುವದು ಅಡಿಗೆ ಸರಿಯಾಗಿ ಮಾಡಿರುವದಿಲ್ಲಾ ಮಾನಸಿಕ ಹಾಗು ದೈಹಿಕ
ಕಿರಕುಳ ಕೋಡುತ್ತಿದ್ದು , ಅಲ್ಲದೆ ತವರು ಮನೆಯಿಂದ ತಂದೆಯವರಿಂದ ಹುಂಡಾ ತೆಗೆದುಕೊಂಡು ಬಾ
ಇಲ್ಲದಿದ್ದರೆ ನಿನಗೆ ಡೈವೋರ್ಸಕೋಡುತ್ತೇನೆ ಅಂತಾ
ಹೆದರಿಸಿ ಡಿಸೆಂಬರ-2012 ರಂದು ಮನೆ ಹೊರಗಡೆ ಹಾಕಿದ್ದು
ಫಿರ್ಯಾದಿದಾರರಳು ತನ್ನ ತವರೂರಾದ ಕುಮಸಿವಾಡಿಗೆ ಬಂದು ತನ್ನ ತಂದೆತಾಯಿಯವರೊಂದಿಗೆ
ವಾಸಿಸುತ್ತಿದ್ದಾಳೆ. ದಿನಾಂಕ. 23-9-2013
ರಂದು ಅಪಾದಿತರಾದ 1) ಸಿದ್ದಲಿಂಗ @ ಸಿದ್ದು   ತಂದೆ ಸಾಯಿಬಣ್ಣಾ  ದನ್ನೂರ, 2) ರೇವಣಮ್ಮಾ ಗಂಡ ಸಾಯಿಬಣ್ಣಾ ದನ್ನೂರ , 3)
ಶರಣಪ್ಪಾ ತಂದೆ ಸಾಯಿಬಣ್ಣಾ  ದನ್ನೂರ ಮತ್ತು 4)
ಕವಿತಾ  ಗಂಡ ಶರಣಪ್ಪಾ ದನ್ನೂರ  ಸಾ;ಎಲ್ಲರೂ ನರೋಣ ಗ್ರಾಮ ತಾ;ಆಳಂದ ಇವರೆಲ್ಲರೂ
ಕೂಡಿಕೊಂಡು  ಕುಮಸಿವಾಡಿ ಗ್ರಾಮಕ್ಕೆ
ಫಿರ್ಯಾದಿದಾರಳು ವಾಸವಾಗಿರುವ ಮನೆಗೆ ಬಂದು  
ಅವಾಚ್ಯ ಶಬ್ದಗಳಿಂದ ಬೈಯ್ದು “ ಎ ರಂಡಿ ಎಲ್ಲಿವರೆಗೆ ನಿನ್ನ ತವರು ಮನ್ಯಾಗ ಇರುತ್ತಿ ಇರು  ನನಗೆ ಡೈವರ್ಸ ಕೊಡು ಇಲ್ಲಂದರೆ ನನಗೆ 1 ಲಕ್ಷ ರೂ ಕೋಡು
ಅಂದರೆ ನಿನಗೆ ಕರೆದುಕೊಂಡು ಹೋಗ್ತಿನಿ, ನನ್ನ ಮದುವೆಗೆ
ಹುಂಡಾ ಬಹಳ ಕೊಟ್ಟಿಲ್ಲಾ ನಿಮ್ಮ ಅಪ್ಪ ಭೋಸಡಿ ಅಂತಾ ಬೈಯ್ದು  ಕೈಯಿಂದ ಹೊಡೆದು
ಅವಾಚ್ಯ ಶಬ್ದಗಳಿಂದ ಬೈಯ್ದು  ಬೆದರಿಕೆ
ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದುರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹುಡುಗ
ಕಾಣೆಯಾದ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಗುಂಡಪ್ಪಾ ಕೊಟಗಿ ಇವರ ಎರಡನೇ
ಮಗನಾದ ಸಿದ್ದರಾಮ ವ: 18
ವರ್ಷ ಈತನು  ದಿನಾಂಕ 07-09-2013 ರಂದು ಅಶೋಕ ಮಲಘಾಣ ಈತನ ಸಂಗಡ ಕ್ಲಿನರ್
ಕೆಲಸಕ್ಕೆ ಅಂತಾ ಹೋದವನು ನಂತರ  ಅಶೋಕನು ದಿನಾಂಕ
09-10-2013  ರಂದು ಊರಿಗೆ ಬಂದಾಗ ವಿಚಾರಿಸಲಾಗಿ ಅವನು ತಿಳಿಸಿದೆನೆಂದರೆ. ದಿನಾಂಕ 07-09-2013 ರಂದು  ಸಿದ್ದರಾಮ ಊರಿಗೆ ಹೋಗುತ್ತೇನೆ 1 ಸಾವಿರ ರೂಪಾಯಿ ಕೊಡು ಅಂತಾ ಕೇಳಿದಾಗ ನಾನು ಆತನಿಗೆ 1 ಸಾವಿರ ರೂಪಾಯಿ ಕೊಟ್ಟು ಖರ್ಗೆ ಪೆಟ್ರೋಲ್ ಪಂಪ ಹತ್ತಿರ ಲಾರಿಯಿಂದ
ಇಳಿಸಿ ನಾನು ಹೋಗಿರುತ್ತೇನೆ ಅಂತಾ ತಿಳಿಸಿದನು ಅಂದಿನಿಂದ ಇಲ್ಲಿಯ ತನಕ ನನ್ನ ಮಗನಿಗೆ ಹುಡುಕಾಡಲಾಗಿ
ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಾಣೆಯಾದ ಹುಡುಗನ ಚಹರೆ ಪಟ್ಟಿ :ಉದ್ದನೆಯ ಮುಖ, ಕಪ್ಪು ಕುದಲು, ಕೆಂಪನೆಯ ಮೈಬಣ್ಣ,
ಸಾಧಾರಣ ಮೈಕಟ್ಟು, ಮಯ 18 ಅರ್ಷ 4’5” ಎತ್ತರ  ಕನ್ನಡ
ಭಾಷೆ ಮಾತನಾಡುತ್ತಾನೆ.
 
 
 
 
No comments:
Post a Comment