POLICE BHAVAN KALABURAGI

POLICE BHAVAN KALABURAGI

05 October 2013

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಶಕೀಲ ಅಹೇಮದ್ ತಂದೆ ಲಾಲ ಅಹೇಮದ್ ಸಾ: ಕೊನಾಪೂರ ದಿನಾಂಕ: 03-10-13 ರಂದು ಮಧ್ಯಾಹ್ನ 1200 ಗಂಟೆ ಸುಮಾರಿಗೆ ನಾನು ನನಗೆ ಪರಿಚಯವಿರುವ ಹಬೀಬ ಪಾಶಾ ತಂದೆ ಅಬ್ದುಲ್ ರಹೀಮ ಸಾ: ಮದಾನ ತಾ: ಸೇಡಂ ಇಬ್ಬರು ಕೂಡಿ ನಮ್ಮ ಅಳಿಯನಾದ ಮಹ್ಮದ ಮೀಯಾ ಸಾ: ಮುಧೋಳ ಇತನ ಮಧುವೆಯ ನಿಶ್ಚಯ ಕಾರಣಕ್ಕೆ ಕೊಡ್ಲಾ ಗ್ರಾಮಕ್ಕೆ ಹೊಗುವದಕ್ಕೆ ಹಿರೋ ಹೊಂಡಾ ಮೊ/ಸೈ ನಂ ಕೆಎ/32-ಇಡಿ-5824 ನೇದ್ದರ ಮೇಲೆ ಕುಳಿತು ಹೊಗುತ್ತಿದ್ದಾಗ ಮುಧೋಳದಿಂದ ಸೇಡಂಕ್ಕೆ ಹೊಗುವ ರಸ್ತೆಯ ಮೇಲೆ ಹಬೀಬ ಪಾಶಾ ಇತನು ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಆಡಕಿ ಗೇಟ್ ಇನ್ನು 100 ಮೀಟರ್ ಅಂತರದಲ್ಲಿದ್ದಾಗ ರಸ್ತೆಯಲ್ಲಿ ದನಗಳು ಬರುತ್ತಾದ್ದಾಗ, ಹಬೀಬ ಪಾಶಾ ಇತನು ತನ್ನ ಮೊ/ಸೈನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಬ್ರೀಡ್ಜ್ ಹತ್ತಿರ ಪ್ಲಟಿ ಮಾಡಿ ಅಪಘಾತ ಪಡಿಸಿದ್ದು, ಇದರಿಂದ ನನಗೆ ಬಲ ಕಪಾಳಕ್ಕೆ ಹಾಗು ಬಲ ಕಣ್ಣಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಮಳಖೇಡ ಠಾಣೆ : ಚಂದ್ರಶೇಖರ ತಂದೆ ಭಿಮಶಾ ಬಡಿಗೇರ ಈತನು ಆರ್.ಸಿ.ಎಫ್ ಕಂಪನಿಯಲ್ಲಿ ಮೌಂಟೆನ್ ಅರ್ಥ ಮೂವರ್ಸ ಕಾಂಟ್ರ್ಯಾಕ್ಟರ್ ಹತ್ತಿರ ಲೋಡರ್ ಆಪರೇಟರ್ ಆಗಿ ಕೇಲಸ ಮಾಡುತ್ತಿದ್ದು ದಿನಾಂಕ 04-10-2013 ರಂದು ಬೇಳಗ್ಗೆ 10-30 ಗಂಟೆಗೆ ಕಂಪನಿಯಲ್ಲಿ ಕೇಲಸ ಮಾಡುತ್ತಿದ್ದಾಗ ಒಮ್ಮೆಲೆ ಎದೆ ನೋವು ಅಂತ ಹೃದಯಾಘಾತದಿಂದ ಕುಸಿದು ಬಿದ್ದನು ಆಗ ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಿವನಾಗಮ್ಮ ಗಂಡ ಚಂದ್ರಶೇಖರ ಬಡಿಗೇರ ಸಾ: ಮರಗೋಳ ಗ್ರಾಮ ತಾ: ಚಿತ್ತಾಪುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: