POLICE BHAVAN KALABURAGI

POLICE BHAVAN KALABURAGI

01 September 2013

ಕೊಲೆ ಪ್ರಕರಣ :

ಚೌಕ ಪೊಲೀಸ ಠಾಣೆ : ಶ್ರೀ  ರಾಜು ತಂ ಪ್ರಭಾಕರರಾವ ಕಮಲಾಪೂರಕರ ಸಾಃ ಆನಂದ ನಗರ ಗುಲಬರ್ಗಾ ರವರು ಕೊರಂಟಿ ಹನುಮಾನ ದೇವಸ್ಥಾನದ ದೇಕರೇಖ ಮಾಡಿಕೊಂಡಿರುತ್ತೇನೆ. ನಾವು 4 ಜನ ಅಣ್ಣ ತಮ್ಮಂದಿರಿದ್ದು ಒಬ್ಬಳು ತಂಗಿ ಇರುತ್ತಾಳೆ, ನನ್ನ ಕೊನೆಯ ತಮ್ಮ ಆನಂದ ವಯ 40 ವರ್ಷ ಇವನು ಬಿ.ಎ ವರೆಗೆ ಓದಿ ಯಾವುದೆ ನೌಕರಿ ಸಿಗದಿದ್ದರಿಂದ ನಾನೆ ನಮ್ಮ ದೇವಸ್ಥಾನದಲ್ಲಿ ಟೆಂಗು ಮಾರುವ ಕೆಲಸಕ್ಕೆ ಹಚ್ಚಿ ಅವನಿಗೆ 5 ಸಾವಿರ ರೂಪಾಯಿ ಸಂಬಳದ ವ್ಯವಸ್ಥೆ ಮಾಡಲಾಗಿತ್ತು.  ಅವನು ಸುಮಾರು 15 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದನು. ಅವನಿಗೆ ಮದುವೆ ಆಗಿರುವದಿಲ್ಲ. ಅವನಿಗೆ ದೇವಸ್ಥಾನದಲ್ಲಿ ಇರಲು ಒಂದು ಕೋಣೆಯ ವ್ಯವಸ್ತೆ ಮಾಡಲಾಗಿತ್ತು. ಅವನು ಹೆಚ್ಚು ಸರಾಯಿ ಕುಡಿದಾಗ ಅವನ ಪ್ಯಾಂಟ ಹಾಗೂ ಒಳ ಉಡುಪು ಹಾಗು ಚೆಡ್ಡಿ ಬಿಚ್ಚಿ ಬೆತ್ತಲೆಯಾಗಿ ಬಿಳುವುದು, ಓಡಾಡುವುದು ಮಾಡಿದ್ದು ಉಂಟು.  ನನ್ನ ತಮ್ಮ ಆನಂದ ಇವನು ದಿನಾಂಕ 31.08.13 ರಂದು ಮದ್ಯಾಹ್ನ ನಾನು ಬಟ್ಟೆ ತರಲು ಬರಜಾರಕ್ಕೆ ಹೋಗಿ ಬರುತ್ತೇನೆಂದು ನನಗೆ ಹೇಳಿ ಹೋಗಿದ್ದನು. ರಾತ್ರಿ ಒಂದು ಗಂಟೆಯ ಸುಮಾರಿಗೆ ನಾನು ದೇವಸ್ಥಾನದಲ್ಲಿ ಇದ್ದಾಗ ನನ್ನ ತಮ್ಮ ಆನಂದ ಇತನಿಗೆ ರಾತ್ರಿ 11 ಗಂಟೆಯ ಸುಮಾರಿಗೆ ಚೌಕ ಸರ್ಕಲ ಹತ್ತಿರದ ಕಲಾಯಿ ಗಲ್ಲಿಯಲ್ಲಿ ರಾಜಗೋಪಾಲ ರಡ್ಡಿರವರ ಸಪ್ನಾ ವೈನಶಾಪ ಮುಂದುಗಡೆ ರೋಡಿನ ಮೇಲೆ ಯಾರೋ ಕುತ್ತಿಗೆಗೆ ಚಾಕು ಅಥವಾ ಚೂರಿಯಿಂದ ಬರ್ಬರವಾಗಿ ಕೊಯ್ದು ಕೊಲೆ ಮಾಡಿದ್ದಾರೆ ಅಂತ ವಿಷಯ ಗೊತ್ತಾಗಿ ನಾನು ಮತ್ತು ನನ್ನ ತಂಗಿ ಜೋತಿ ಕುಲಕರ್ಣಿ ಹಾಗೂ ಶರಣು ಪಾಟೀಲ, ಧನಂಜಯ ಜೋಶಿ ಕೂಡಿ ಬಂದು ನೋಡಲು ನನ್ನ ತಮ್ಮನ ಶವವಿದ್ದು ಅವನ ಕುತ್ತಿಗೆಗೆ ಹರಿತವಾದ ಆಯುಧದಿಂದ ಕೊಯ್ದು ಕೊಲೆ ಮಾಡಿದ್ದು ಇತ್ತು. ಅವನ ಪ್ಯಾಂಟ, ಚೆಡ್ಡಿ ಕಳದಿದ್ದು ಬತ್ತಲೆಯಾಗಿ ಬಿದ್ದಿದ್ದನು. ನನ್ನ ತಮ್ಮ ಆನಂದ ಇತನಿಗೆ ದಿನಾಂಕ 31.08.13 ರಂದು 11 ಪಿ.ಎಂಕ್ಕೆ ಕಲಾಯಿ ಗಲ್ಲಿಯ ಸಪ್ನಾ ವೈನಶಾಪ ಎದರುಗುಡೆ ಯಾರು ಆರೋಪಿತರು ಯಾವುದೊ ಕಾರಣಕ್ಕೆ ಚಾಕು, ಚೂರಿ ಅಂತಹ ಹರಿತವಾದ ಸಾಧನಗಳಿಂದ ಕೂತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದು ಕೂಡಲೆ ಪತ್ತ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಿದ್ದಮ್ಮಾ ಗಂಡ ಕಾಂತಪ್ಪಾ ಬೋಸಗಾ ವಯ;42 ಸಾ;ಸಿಂಧಗಿ (ಬಿ) ತಾ;ಜಿ;ಗುಲಬರ್ಗಾ ಇವರ ಗಂಡ ಕಾಂತಪ್ಪಾ ತಂದೆ ಭೀಮಶ್ಯಾ ಬೋಸಗಾ ಇತನು ತನ್ನ ಶೀಲದ ಮೇಲೆಸಂಶಯ ಮಾಡುತ್ತಾ ಕಳೆದ ಒಂದು ವರ್ಷದಿಂದ ಆಗಾಗ ಜಗಳಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರಕುಳ ಕೊಡುತ್ತಾ ಇದ್ದು ದಿನಾಂಕ.31-8-2013 ರಂದು 7-00 ಪಿ.ಎಂ. ಗಂಡ ಕಾಂತಪ್ಪಾ ಬೋಸಗಾ ಇತನು ಮನಗೆ ಬಂದು ಯಾರ ಸಂಗಡ ಅನೈತಿಕ ಸಂಬಂಧ ಹೊಂದಿರುವಿ ಹೇಳು ಅಂತಾಅವಾಚ್ಯ ಶಬ್ದಗಳಿಂದ ಬೈಯುತ್ತಾ, ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ, ಕೊಲೆ ಮಾಡುವ ಉದ್ದೇಶದಿಂದಮನೆಯಲಿದ್ದ ಕುಡುಗೋಲು ತೆಗೆದುಕೊಂಡು ತನಗೆ ಹೋಡೆದು ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: