POLICE BHAVAN KALABURAGI

POLICE BHAVAN KALABURAGI

09 September 2013

ಕೊಲೆ ಪ್ರಕರಣ:
ಚಿಂಚೋಳಿ ಠಾಣೆ : ಶ್ರೀ ಸೈಯದ ಫಯಾಜೋದ್ದಿನ್ ತಂದೆ ರೆಹೆಮಾನ ಅಲಿ ಬಡಿಗೇರ ಸಾ ಮರಪಳ್ಳಿ ಇವರು ತಂದೆ ತಾಯಿಯವರು ನನಗೆ ಶ್ರೀ ಸೈಯದ್‌ ಮಶಾಕಮೀಯಾ ಇಟಾಪೂರ ಎಂಬುವವರ ಮೂರನೇ ಮಗಳಾದ ಫರಾನಾಬೇಗಂ ಎಂಬುವವಳೋಂದಿಗೆ ಕಳೆದ ಒಂದುವರೆ ವರ್ಷದ ಹಿಂದೆ ಮದುವೆ ಮಾಡಿರುತ್ತಾರೆ ನನ್ನ ಹೆಂಡತಿಯು ಕಳೆದ ಸುಮಾರು 20 ದಿವಸಗಳ ಹಿಂದೆ ಹೆರಿಗೆಗೆ ಅಂತಾ ತನ್ನ ತವರು ಮನೆಗೆ ಬಂದಿರುತ್ತಾಳೆ  ಹೀಗಿದ್ದು ದಿನಾಂಕ 02.09.2013 ರಂದು ರಾತ್ರಿ 10.00 ಗಂಟೆ ಸುಮಾರಿಗೆ  ಸರಕಾರಿ ಆಸ್ಪತ್ರೆ ಚಿಂಚೋಳಿಗೆ ಕರೆದುಕೊಂಡು ಬಂದಿದ್ದು  ದಿನಾಂಕ 03.09.2013 ರಂದು 03.00 ಎಎಂ ಕ್ಕೆ ನನ್ನ ಹೆಂಡತಿಯ ಹೆರಿಗೆಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮನೀಡಿದಳು ಕೂಸಿಗೆ ಆರಾಮವಿಲ್ಲದ ಕಾರಣ ಚಿಂಚೋಳಿಯ ವೈಧ್ಯಾಧೀಕಾರಿಗಳು ಕೂಸಿಗೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಕರೆದೊಯ್ಯಲು ತಿಳಿಸಿದ ಮೇರೆಗೆ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಕೂಸಿಗೆ ಆರಾಮವಾದ ನಂತರ ದಿನಾಂಕ 06.09.2013 ರಂದು ನಾನು ನಮ್ಮೂರಾದ ಮರಪಳ್ಳಿ ಗ್ರಾಮಕ್ಕೆ ಹೋದೆನು  ನನ್ನ ಹೆಂಡತಿಯಾಧ ಫರಾನಾ ಬೇಗಂ ಮತ್ತು ಅವಳ ತಂದೆತಾಯಿಯ ಜೋತೆಗೆ ನಾಗಾಯಿದಲಾಯಿ ಗ್ರಾಮದಲ್ಲಿರುವ ಅವರ ಮನೆಗೆ ಹೋದಗಿದ್ದು  ರಾತ್ರಿ 7.00 ಗಂಟೆಗೆ ಪೋನ ಮಾಡಿ ಮತ್ತೆ ನನಗೆ ತಿಳಿಸಿದರು ಅಂದೇ ರಾತ್ರಿ 09.00 ಗಂಟೆಯವರೆಗೆ ಎಲ್ಲರೂ ಅವರ ಮನೆಯಲ್ಲಿ ಎಚ್ಚರದಿಂದಿದ್ದು ಅಂತರ ಮಲಗಿಕೊಂಡಿರುತ್ತಾರೆ ಅಂತಾ ನಮ್ಮ ಮಾವನು ನನಗೆ ಫೋನ ಮುಖಾಂತರ ತಿಳಿಸಿದನು ರಾತ್ರಿ 1.00 ಎಎಂ ಸುಮಾರಿಗೆ ಎದ್ದು ನೋಡಲು ನನ್ನ ಹೆಂಡತಿ ಮತ್ತು ನನ್ನ ಕೂಸು ಮನೆಯಲ್ಲಿ ಅವರು ಮಲಗಿದ ಜಾಗದಲ್ಲಿ ಕಾಣದರಿಂದ ಮನೆಯಯಲ್ಲಿ ಹಾಗೂ ಊರೇಲ್ಲ ತಿರುಗಾಡಿ ಅವರಿಗಾಗಿ ನಮ್ಮ ಮಾವನು ಮನೆಯವರೆಲ್ಲರೂ ಹುಡುಕಾಡಿದರು ಅವರ ಬಗ್ಗೆ ಯಾವೂದೇ ಸುಳಿವು ಸಿಕ್ಕಿರುವುದಿಲ್ಲ ಅಂತಾ ಇತ್ಯಾದಿಯಾಗಿ ಫೋನ ಮಾಡಿ ತಿಳಿಸಿದರಿಂದ ನಾನು ದಿನಾಂಕ 06.09.2013 ರ ಬೆಳಿಗ್ಗೆ 10.00 ಗಂಟೆಗೆ ನಾಗಾಯಿದಲಾಯಿ ಗ್ರಾಮದ ನನ್ನ ಮಾವನ ಮನೆಗೆ ಹೋಗಿ ವಿಷಯತಿಳಿದುಕೊಂಡು ನಾನು ನನ್ನ ಭಾವನವರಾದ ತಾಹೇರ ಮತ್ತು ಮೇಹಬುಬ ಮೂರು ಜನ ಕೂಡಿಕೊಂಡು ಅಂದಿನಿಂದ ಇಂದು ದಿನಾಂಕ 08.09.2013 ರ ಮದ್ಯಾಹ್ನ 12.00 ಗಂಟೆಯವರೆಗೆ ಹುಡುಕುತ್ತಲೆ ಇದ್ದೇವು ಹೀಗೆ ಹುಡುಕುತ್ತಾ ಹೋದಾಗ ಇಂದು ದಿನಾಂಕ 08.09.2013 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ನಾಗಾಯಿದಲಾಯಿ ಗ್ರಾಮದ ತಿಪ್ಪಾರೆಡ್ಡಿ ಭಂಟಾನೋರ ರವರ ಮನೆಯ ಮುಂದಿನ ಬಾವಿಯಲ್ಲಿ ನನ್ನ ಕೂಸಿನ ಮೃತ ದೇಹ ನೀರಿನಲ್ಲಿ ತೇಲಿದ್ದು ಕಂಡು ಬಂದಿರುತ್ತದೆ. ನನ್ನ ಹೆಂಡತಿಯಾದ ಫರಾನಾ ಬೇಗಂಳು ನನ್ನ ನವಜಾತ ಶಿಶುವನ್ನು ದಿನಾಂಕ 06.09.2013 ರ ರಾತ್ರಿ 10.00 ಗಂಟೆಯಿಂದ ದಿನಾಂಕ 07.09.2013 ರ 1 ಎಎಂದ ಅವದಿಯಲ್ಲಿ ನಾಗಾಯಿದಲಾಯಿ ಗ್ರಾಮದ ಶ್ರೀ ತಿಪ್ಪಾರೆಡ್ಡಿ ಭಟ್ಟರವರ ಮನೆಯ ಮುಂದಿನ ಭಾವಿಯಲ್ಲಿಯ ನೀರಿನಲ್ಲಿ ಬಿಸಾಕಿ ಕೊಲೆ ಮಾಡಿ ತಾನು ಸಹ ಬಾವಿಯ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಪುತರ ತಂದೆ ಭಿಮಾಶಂಕರ ಕಣ್ಣೂರ ಸಾ: ಕಡಣಿ ಇವರು  ಈಗ 3 ವರ್ಷದಿಂದ ನಮ್ಮೂರಿನಲ್ಲಿ ನಮ್ಮ ಸಂಬಂಧಿಕರಾದ ಮಲ್ಲಿನಾಥ ತಂದೆ ಗೌಡಪ್ಪಾ ಬಿರಾಜದಾರ ಇವರ ಹೊಲವನ್ನು ಸಮಪಾಲಿನಿಂದ ಮಾಡಿಕೊಂಡು ಬಂದಿರುತ್ತೇನೆ. ಸದರಿ ಹೊಲದಲ್ಲಿ ಈ ವರ್ಷ ತೊಗರಿ ಬೆಳೆ ಬಿತ್ತನೆ ಮಾಡಿದ್ದು ಇರುತ್ತದೆ. ಸದರ ಹೊಲದ ಬಾಜು ಹೊಲದರಾದ ಸದಪ್ಪಾ ತಂದೆ ತಿಪ್ಪಣ್ಣಾ ಹ್ಯಾಟಿ ಇವರ ಹೊಲ ಇರುತ್ತದೆ. ಇವರು ನಾನು ಪಾಲಿನಿಂದ ಮಾಡಿದ ಹೊಲದ ಬಾಂದರಿಯಿಂದ ಹೋಗಿ ಬಂದು ಮಾಡುತ್ತಾರೆ. ಅಲ್ಲದೆ ಆಗಾಗ ಹೊಲದ ಬೆಳೆಯೊಳಗಿನಿಂದ ಹೋಗಿ ಬರುವ ವಿಷಯವಾಗಿ ಅವನು ನಮ್ಮ ಸಂಗಡ ಬಾಯಿ ತಕರಾರು ಮಾಡಿಕೊಂಡು ಬರುತ್ತಿದ್ದನು.ದಿನಾಂಕ: 4-9-2013 ರಂದು ನಮ್ಮ ಮನೆಯ ಕಟ್ಟಡ ಮಾಡುತ್ತಿದ್ದರಿಂದ ಮನೆಯಲ್ಲಿದ್ದು, ನನ್ನ ಹೆಂಡತಿ ಹಾಗೂ ನನ್ನ ಮಗ ವಿರೇಶ ಕೂಡಿಕೊಂಡು ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಹೆಂಡತಿ ಗಂಗಮ್ಮ ಇವಳು ಮನೆಗೆ ಬಂದು ತಿಳಿಸಿದ್ದೇನೆಂದರೆ, ಪಾಲಿನಿಂದ ಮಾಡಿದ ಹೊಲದ ಬಾಜು ಹೊಲದರಾದ ಸದಪ್ಪಾ ಹ್ಯಾಟಿ ಈತನು ಈಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಮ್ಮ ತೊಗರಿ ಬೆಳೆಯಲ್ಲಿಯೇ ನಡೆದುಕೊಂಡು ಬರುತ್ತಿದ್ದಾಗ ನಮ್ಮ ಮಗ ವಿರೇಶನು ಅವನಿಗೆ ನೀವು ಬಾಂದರಿಂದ ಹೋಗಿರಿ ಬೆಳೆ ಹಾಳಾಗುತ್ತದೆ ಅಂತಾ ಅಂದಿದ್ದಕ್ಕೆ, ಸದಪ್ಪನು ನಮ್ಮ ಸಂಗಡ ಜಗಳಕ್ಕೆ ಬಿದ್ದು ಬಾಯಿ ಬಡಿದು ನಿಮ್ಮ ಸೊಕ್ಕು ಬಹಳ ಆಗ್ಯಾದಾ ನೋಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಊರ ಕಡೆಗೆ ಬಂದಿರುತ್ತಾನೆ ಅಂತಾ ತಿಳಿಸಿದಳು. ಅದೇ ಉದ್ದೇಶದಿಂದ ಆರೋಫಿತರೆಲ್ಲರೂ ಕೂಡಿಕೊಂಡು  ರಾತ್ರಿ 8-30 ಗಂಟೆಯ ಮನೆಗೆ ಬಂದು ಅವಾಚ್ಯವಾಗಿ ಬೈದು  ಬಡಿಗೆಗಳಿಂದ ಹೊಡೆ ಮಾಡಿ ಸಾದಾ ಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :

ಸೇಡಂ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಚಂದ್ರಪ್ಪ ಶಿರೂರಕರ, ಸಾ: ಖಾಜಾ ಕೊಟನೂರ ಜಿಲ್ಲಾ: ಗುಲಬರ್ಗಾ, ಹಾ:ವ: ಕೆ.ಇ.ಬಿ ಕಾಲನಿ ಸೇಡಂ, ಇವರು ನನಗೆ ದಿಲೀಪಕುಮಾರ, ಪ್ರದೀಪಕುಮಾರ, ಮತ್ತು ಕಾವೇರಿ ಅಂತಾ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದು ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ.  ನನ್ನ ಮಗಳು ಕಾವೇರಿ ವಯ 17 ವರ್ಷ ಇವಳು ಸೇಡಂನ ಮಾತೃ ಛಾಯಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತಿ ನಿತ್ಯ ಕಾಲೇಜಿಗೆ ಹೋಗುವಾಗ ಬರುವಾಗ ನನ್ನ ಮಗಳಿಗೆ ಸಾಬಣ್ಣ @ ಅಜಯ ತಂದೆ ರೇವಣಸಿದ್ದಪ್ಪ ದೇಗಲಮಡಿ ಸಾ: ಛೋಟಿ ಗಿರಣಿ ಹರಿಜನ ವಾಡಾ ಸೇಡಂ ಇತನು ಚುಡಾಯಿಸುತ್ತಿದ್ದನು ಅಲ್ಲದೇ ಆಗಾಗ ನನ್ನ ಮನೆಯ ಕಡೆಗೂ ಸಹ ಬಂದು  ನನ್ನ ಮಗಳು ಕಾವೇರಿಗೆ ಚುಡಾಯಿಸುವುದು ಮಾಡುತ್ತಿದ್ದನು.  ಮತ್ತು ನನ್ನ ಮಗಳು ಸಹ ಆತನ ಚುಡಾಯಿಸುವ ವಿಷಯ ನನಗೆ ತಿಳಿಸಿದ್ದು ನಾನು ಮತ್ತು ನನ್ನ ಮಕ್ಕಳು ಸಾಬಣ್ಣ ಇತನಿಗೆ ಬುದ್ದಿವಾದ ಹೇಳಿದ್ದು ಇತ್ತು. ಹೀಗಿದ್ದು ದಿನಾಂಕ:02-09-2013 ರಂದು ನಾನು ಪುರಸಭೆ ಕಾರ್ಯಾಲಯದ ಕೆಲಸಕ್ಕೆ ಹೋದಾಗ ನನ್ನ ಹೆಂಡತಿ ಶಾಂತಾಬಾಯಿ ಇವಳು ಸಹ ಶಾಲೆಗೆ ಬಿಸಿ ಊಟದ ಅಡುಗೆ ಮಾಡಲು ಹೋಗಿದ್ದು ಮನೆಯಲ್ಲಿ ನನ್ನ ಮಗಳು ಕಾವೇರಿ ಒಬ್ಬಳೆ ಇದ್ದಳು. ನಾನು ಮತ್ತು ನನ್ನ ಹೆಂಡತಿ ಮದ್ಯಾಹ್ನ 02-00 ಗಂಟೆಗೆ ಮರಳಿ ಮನೆಗೆ ಬಂದಾಗ ನನ್ನ ಮಗಳು ಕಾವೇರಿ ಮನೆಯಲ್ಲಿ ಇರಲಿಲ್ಲ.  ಆಗ ನಮ್ಮ ಅಕ್ಕ ಪಕ್ಕದ ಮನೆಯವರಿಗೆ ಕೇಳಲಾಗಿ ನೀವು ಮನೆಯಲ್ಲಿ ಇಲ್ಲದ ವೇಳೆಯನ್ನು ನೋಡಿ ಇಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸಾಬಣ್ಣ @ ಅಜಯ ತಂದೆ  ರೇವಣಸಿದ್ದಪ್ಪ ದೇಗಲಮಡಿ ಸಾ: ಛೋಟಿಗಿರಣಿ ಸೇಡಂ ಇತನು ನಿಮ್ಮ ಮನೆಯ ಹತ್ತಿರ ಬಂದವನೆ, ಕಾವೇರಿ ಇವಳಿಗೆ ನೀನು ನನ್ನ ಜೋತೆಗ ಬಾ ಅಂತ ಕರೆದಿದ್ದಕ್ಕೆ ಕಾವೇರಿ ಇವಳು ಬರುವದಿಲ್ಲ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

No comments: