POLICE BHAVAN KALABURAGI

POLICE BHAVAN KALABURAGI

06 June 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಸಾವು:;

ಕುಂಚಾವರಂ ಪೊಲೀಸ್ ಠಾಣೆ: ನನ್ನ ಮಗಳಾದ ನೀಲಾಬಾಯಿ ಇವಳಿಗೆ ಜಿಲ್ವರ್ಶಾ ತಾಂಡಾದ ಶ್ರವಣ ಜೋತೆಗೆ ದಿನಾಂಕ:10-1-2013 ರಂದು ಜಿನಗುರ್ತಿ ಅಮರೇಶ್ವರ ದೇವಸ್ಥಾನದಲ್ಲಿ ಲಗ್ನ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ 50 ಸಾವಿರ ರೂಪಾಯಿಗಳು, ಬಂಗಾರ ಹಾಗೂ ಇನ್ನಿತರ ಮದುವೆ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತೆವೆ. ಎರಡು ತಿಂಗಳ ಮೇಲೆ  ಗಂಡ ಮನೆಯವರು ಇನ್ನೂ ಕೊಡಬೇಕಾದ ಬಂಗಾರ ಮತ್ತು ಗಾಡಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಿದ್ದರಿಂದ ಮಗಳು ನಮ್ಮ ಮನೆಗೆ ಬಂದು ತಿಳಿಸಿದ್ದರಿಂದ ಮೋಟಾರ ಸೈಕಲ ಮತ್ತು ಒಂದೂವರೇ ತೋಲೆ ಬಂಗಾರ ಕೊಡಾ ಕೊಟ್ಟಿರುತ್ತೆವೆ. ಸ್ವಲ್ಪ ದಿನಗಳ ನಂತರ ಮಗಳು ಗರ್ಭಿಣಿಯಾಗಿದ್ದಾಗ ಗಂಡ ಅತ್ತೆ ಮಾವ ಇನ್ನೂ 20,000-00 ರೂಪಾಯಿ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ನನ್ನ ಮಗನಿಗೆ ಜಬರದಸ್ತಿಯಿಂದ ನಿನಗೆ ಮದುವೆ ಮಾಡಿದ್ದಾರೆ ನಿನಗೆ ಖಲಾಸ ಮಾಡಿ ನಾನು ಜೈಲಿಗೆ ಹೋದರು ಪರವಾಗಿಲ್ಲ ಅಂತಾ ದಿನಾಂಕ:05-06-2013 ರಂದು ನಸುಕಿನ 4-00 ಗಂಟೆಯ ಸುಮಾರಿಗೆ ನನ್ನ ಮಗಳಿಗೆ ನೀಲಾಬಾಯಿಗೆ ಆಕೆಯ ಗಂಡನಾದ ಶ್ರವಣ ಮತ್ತು ಅತ್ತೆ ದಸಲಿಬಾಯಿ, ಮಾವ ರಾಮಸಿಂಗ ಇವರು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ ನನ್ನ ಮಗಳ ಕುತ್ತಿಗೆ ಒತ್ತಿ ಹಿಡಿದು ಸಾಯಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ  ಕೀಶನ ತಂದೆ ಭದ್ರ್ಯಾನಾಯಕ ಚವ್ಹಾಣ ವ|| 45 ವರ್ಷ ಜಾ|| ಲಂಬಾಣಿ  ಸಾ|| ಜೈರಾಮ ತಾಂಡಾ ಪೆದ್ದಾಮೂಲ ಮಂಡಲ ತಾ|| ತಾಂಡೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ:41/2013 ಕಲಂ 498(ಎ), 302, 304(ಬಿ) ಸಂಗಡ 34 ಐ.ಪಿ.ಸಿ ಮತ್ತು ಕಲಂ 3& 4  ಡಿ.ಪಿ. ಆಕ್ಟ 1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: